More

    ಹಿಂದೂಗಳ ಮನೆಗಳಲ್ಲಿನ ದೇವರ ಫೋಟೋ ಹೊರಗೆಸೆದ ಮತಾಂತರಿಗಳು; 9 ಆರೋಪಿಗಳ ವಿರುದ್ಧ ಕೇಸ್

    ಉತ್ತರಪ್ರದೇಶ: ಬಲವಂತದ ಮತಾಂತರಕ್ಕೆ ಯತ್ನಿಸಿದ್ದಲ್ಲದೆ, ಹಿಂದೂಗಳ ಮನೆಗಳಲ್ಲಿನ ದೇವರ ಫೋಟೋಗಳನ್ನು ಹೊರಗೆಸೆದ 9 ಮಂದಿ ಮತಾಂತರಿಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಉತ್ತರಪ್ರದೇಶದ ಮೀರತ್​ನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಛಬಿಲಿ ಅಲಿಯಾಸ್ ಶಿವ, ಬಿನ್ವಾ, ಅನಿಲ್, ಸರ್ದಾರ್​, ನಿಕ್ಕು, ಬಸಂತ್, ಪ್ರೇಮ, ಟಿಟ್ಲಿ ಮತ್ತು ರೀನಾ ಎಂಬವರ ವಿರುದ್ಧ ಮತಾಂತರ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಆರೋಪಿಗಳು ಇಲ್ಲಿನ ಕೆಲವು ಸ್ಥಳೀಯರನ್ನು ಬಲವಂತವಾಗಿ ಕ್ರೈಸ್ತಧರ್ಮಕ್ಕೆ ಮತಾಂತರಗೊಳಿಸಲು ಯತ್ನಿಸಿದ್ದರು. ಕರೊನಾ ಸಂದರ್ಭದ ಲಾಕ್​ಡೌನ್​ ಅವಧಿಯಲ್ಲಿ ಮಾಡಿದ್ದ ಸಹಾಯಕ್ಕೆ ಪ್ರತಿಯಾಗಿ ಆರೋಪಿಗಳು ಈ ಒತ್ತಾಯ ಮಾಡಿದ್ದರು.

    ಬ್ರಹ್ಮಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂಗಟಪುರಂ ಕಾಲನಿಯಲ್ಲಿ ಈ ಪ್ರಕರಣ ನಡೆದಿತ್ತು. ಆರೋಪಿಗಳು ಲಾಕ್​ಡೌನ್ ಅವಧಿಯಲ್ಲಿ ಆಹಾರ, ಹಣ ಸಹಾಯ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಅವರು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಬೇಕು ಎಂದು ಬಲವಂತ ಮಾಡಿದ್ದಲ್ಲದೆ, ಮನೆಯಲ್ಲಿ ದೇವರ ಫೋಟೋಗಳನ್ನು ಹೊರಗೆ ಎಸೆದಿದ್ದರು ಎಂದು ಸ್ಥಳೀಯರು ದೂರಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ತಂಡವನ್ನು ರಚಿಸಿದ್ದಾರೆ. -ಏಜೆನ್ಸೀಸ್

    ‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’: ನಿರೀಕ್ಷೆಗೂ ಮೀರಿ ನಿಜವಾಯ್ತಾ ಕಾರ್ಣಿಕ?

    ರಕ್ತದ ಬದಲು ಮೂಸಂಬಿ ಜ್ಯೂಸ್​ ಕೊಟ್ಟು ರೋಗಿ ಸಾವು ಪ್ರಕರಣ; ಬಯಲಾಯ್ತು ಅಸಲಿ ಕಾರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts