More

    ಅಭ್ಯರ್ಥಿ ಡಾ. ಚಂದ್ರು ಲಮಾಣಿ ಲೋಕಾಯುಕ್ತ ಪ್ರಕರಣ? ಬಿಜೆಪಿ ಎಸ್ಸಿ ಘಟಕ ಉಪಾಧ್ಯಕ್ಷ ಪೂರ್ಣಾಜಿ ಕರಾಟೆ ಗಂಭೀರ ಆರೋಪ.

    ವಿಜಯವಾಣಿ ಸುದ್ದಿಜಾಲ ಗದಗ

    ಶಿರಹಟ್ಟಿ ಕ್ಷೇತ್ರದ ಅಭ್ಯರ್ಥಿ ಚಂದ್ರು ಲಮಾಣಿ ಅವರು ಈಗಲೂ ಸರ್ಕಾರಿ ನೌಕರರು. ಸರ್ಕಾರಿ ನೌಕರಾಗಿದ್ದು, ಪಕ್ಷಕ್ಕೆ ಸುಳ್ಳು ಮಾಹಿತಿ ನೀಡಿ, ಟಿಕೆಟ್ ಪಡೆದಿದ್ದಾರೆ ಎಂದು ಪೂರ್ಣಾಜಿ ಕರಾಟೆ ಆರೋಪಿಸಿದರು.

    ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಅವರ ಮೇಲೆ ಮೇಲೆ ಲೋಕಾಯುಕ್ತರು ಹಲವು ಭ್ರಷ್ಟಾಚಾರ ಆರೋಪದಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಸಿಕೊಂಡಿದ್ದಾರೆ. ಆರೋಪ ಸಾಭಿತಕ್ಕೂ ಮುನ್ನ ಹೆದರಿದ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ಮೇಲೆ ಲೋಕಾಯುಕ್ತದಲ್ಲಿ ವಿಚಾರಣೆ ಬಾಕಿ ಇದ್ದು, ರಾಜೀನಾಮೆ ಅಂಗೀಕಾರ ಗೊಂಡಿಲ್ಲ. ಈಗಲೂ ಅವರು ಸರ್ಕಾರಿ ನೌಕರರೇ. ನೌಕರರಾಗಿ ವಿಧಾನಸಭೆ ಚುನಾವಣೆ ಎದುರಿಸಬಹುದು ಎಂದಾದರೆ ಸರ್ಕಾರಿ ನೌಕರೆಲ್ಲರೂ ಚುನಾವಣೆ ನಿಲ್ಲುತ್ತಾರೆ ಎಂದು ಆರೋಪಿಸಿದರು.

    ಈ ಪ್ರಕರಣವನ್ನು ಬಿಜೆಪಿ ಹೈ ಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು. ಜೆ.ಪಿ. ನಡ್ಡಾ, ನಳಿನ ಕುಮಾರ್ ಕಟಿಲ್, ಬಿ.ಎಸ್. ಯಡಿಯೂರಪ್ಪ, ಪ್ರಹ್ಲಾದ ಜೋಶಿ, ಸಿ.ಸಿ. ಪಾಟೀಲ ಅವರು ಚಂದ್ರು ಲಮಾಣಿ ಮೇಲಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

    ಶಿರಹಟ್ಟಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರು ಲಮಾಣಿ  ಮೇಲೆ 2019 ರಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಕೋವಿಡ್ ಸಂದರ್ಭದಲ್ಲಿ ಅಕ್ರಮ ಮತ್ತು ಮೂರ್ನಾಲ್ಕು ಪ್ರಕರಣ ಆಧಾರದಲ್ಲಿ ರಾಜ್ಯ ಲೋಕಾಯುಕ್ತ ವಿಭಾಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ತನಿಖೆ ಬಾಕಿ ಇದೆ.  ರಾಷ್ಟ್ರೀಯ ಪಕ್ಷ, ಸಿದ್ಧಾಂತಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಕ್ಷ ಬಿಜೆಪಿ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಚಂದ್ರು ಲಮಾಣಿ ಸುಳ್ಳು ಹೇಳಿದ್ದಾರೆ. ದಾಖಲೆ ಪ್ರಕಾರ ಅವರು ಇನ್ನೂ ವಿಚಾರಣೆ ಎದುರಿಸುತ್ತಿರುವ ಸರ್ಕಾರಿ ವ್ಯಕ್ತಿ.  ನಾಗರಿಕ ಸೇವಾ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ಬಿಜೆಪಿ ಪಕ್ಷವು ಚಂದ್ರು ಲಮಾಣಿ ಅವರ ಸರ್ಕಾರಿ ಸೇವಾ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಜಿಲ್ಲಾ ಚುನಾವಣಾ ಅಧಿಕಾರಿ ಆಗಿರುವ ಜಿಲ್ಲಾಧಿಕಾರಿಗಳ ಗಮನಕ್ಕೂ ಈ ವಿಷಯ ತರಲಾಗುವುದು ಎಂದು ಸುದ್ದಿಗೋಷ್ಟಿಯಲ್ಲಿ ಆರೋಪಿಸಿದರು. 

    ಸುದ್ದಿಗೋಷ್ಟಿಯಲ್ಲಿ  ರಮೇಶ ಛಲವಾದಿ, ಸೋಮಪ್ಪ‌ ಲಮಾಣಿ, ಶ್ರೀಶೈಲ ರೋಣದ, ಕಿರಣ ಸುರಣಗಿ, ಸೋಮ ನಾಯಕ ಮತ್ತಿತರರು ಇದ್ದರು.

    ಬಾಕ್ಸ್
    ಸುದ್ದಿಗೋಷ್ಟಿಯಲ್ಲಿ ಮಾಡಿದ ಆರೋಪಗಳೇನು?

    1.  ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಹೊರ ರೋಗಿಗಳಿಂದ 5 ರೂ. ಶುಲ್ಕ ಪಡೆದು, 5 ರೂ. ಪಡೆದ ಬಗ್ಗೆ ಸೂಕ್ತ ದಾಖಲೆಗಳನ್ನು ನಿರ್ವಹಿಸಿಲ್ಲ. ಆ ಸಂದರ್ಭದಲ್ಲಿ  ವೈದ್ಯಾಧಿಕಾರಿ ಆಗಿದ್ದ ಚಂದ್ರು ಲಮಾಣಿ ಸರ್ಕಾರಕ್ಕೆ ದಾಖಲೆ ಸಲ್ಲಿಸಿಲ.

    2.  ಚಿಕ್ಕವಡ್ಡಟ್ಟಿ ಗ್ರಾಮದ ಮಲ್ಲಿಕಾರ್ಜುನಪ್ಪ ತಳವಾರ ಎಂಬ ವಯೋವೃದ್ದರು ಶಿರಹಟ್ಟಿ ಆಸ್ಪತ್ರೆಗೆ ಅನಾರೋಗ್ಯದಿಂದ ದಾಖಲಾದ ಸಂದರ್ಭ. ಆಸ್ಪತ್ರೆಯಲ್ಲಿ ಇನ್ನೂ 8 ಬೆಡ್ ಖಾಲಿ ಇದ್ದರೂ ಬೆಡ್ ನೀಡದೇ ಸೇವಾ ಉಲ್ಲಂಘನೆ ಮಾಡಿದ್ದಾರೆ. ಅವರನ್ನು  ಆಸ್ಪತ್ರೆ ಕಾರಿಡಾರ್ ನಲ್ಲೆ ಮಲಗಿಸಿ ಚಿಕಿತ್ಸೆ ನೀಡುತ್ತಾರೆ ಎಂದು ಆರೋಪ.

    3. ವಾರ್ಡಗಳನ್ನು‌ ಪ್ರತ್ಯೇಕಿಸದೇ ಎಲ್ಲ ವಯೋಮಾನದ ರೋಗಿಗಳನ್ನು ಒಂದೇ ವಾರ್ಡನಲ್ಲಿ ಇರಿಸಲಾಗಿತ್ತು. ಹೊನ್ನಪ್ಪ ವಿಭೂತಿ (62) ಎಂಬ ರೋಗಿಯ ಪರಿಶೀಲನೆ ಮಾಡಿದ ಟೆಂಪ್ರೆಚರ್ ಮಾಹಿತಿಯನ್ನು ಕೇಸ್ ಬುಕ್ ನಲ್ಲಿ‌ ನಮೂದಿಸಿರಲಿಲ್ಲ. ಅವರ ಟೆಂಪ್ರೆಚರ್ ಮಾಹಿತಿ ದಾಖಲೆಯನ್ನು ಮತ್ತೊಬ್ಬ ರೋಗಿಯ ಕೇಸ್ ಶೀಟ್ ನಲ್ಲಿ ಅಳವಡಿಸಿದ್ದು ಕಂಡು ಬಂದಿದೆ. ಇದೇ ರೀತಿ ಹಲವು ಅಕ್ರಮಗಳ ಕುರಿತು ಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಈ ಆರೋಪಗಳನ್ನು ಹೊತ್ತ ಚಂದ್ರು ಲಮಾಣಿ ಅವರ ರಾಜೀನಾಮೆ ಅಂಗೀಕಾರಗೊಂಡಿಲ್ಲ. ಹಾಗಾಗಿ ಅವರು ಇನ್ನೂ ಸರ್ಕಾರಿ ಸೇವೆಯಲ್ಲೇ ಇದ್ದು, ಅವರು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಅವರ ವಿರುದ್ಧ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts