More

    ಕರೊನಾ ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸ ; ಒಂದೇ ದಿನ 16 ಮಂದಿ ಸಾವು ; 1457 ಜನರಿಗೆ ಸೋಂಕು ದೃಢ

    ತುಮಕೂರು: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಸಾವಿನ ಸಂಖ್ಯೆಯೂ ಮಿತಿಮೀರಿದೆ,
    ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಮೃತಪಟ್ಟವರ ಮಾಹಿತಿ ಮಾತ್ರ ಮಾಧ್ಯಮಗಳಿಗೆ ಲಭ್ಯವಾಗುತ್ತಿದ್ದು ಉಳಿದ ಕಡೆ ನೂರಾರು ಸಂಖ್ಯೆಯಲ್ಲಿ ಸಾವುಗಳಾಗುತ್ತಿರುವ ಬಹಿರಂಗ ಸತ್ಯವಾಗಿದೆ.

    ಮಂಗಳವಾರ 1457 ಜನರಿಗೆ ಸೋಂಕು ದೃಢವಾಗಿದ್ದು ವಿವಿಧ ಆಸ್ಪತ್ರೆಗಳಿಂದ 1588 ಜನರು ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ, ಪ್ರಸ್ತುತ ಜಿಲ್ಲೆಯಲ್ಲಿ 18181 ಸಕ್ರಿಯ ಪ್ರಕರಣಗಳಿದ್ದು 136 ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ, ಈ ನಡುವೇ 16 ಜನರು ಮೃತರಾಗಿದ್ದು ಸಾವಿನ ಸಂಖ್ಯೆ ಏರಿಕೆಯಾಗಿದೆ.
    ಮಧುಗಿರಿಯ 50 ವರ್ಷದ ಮಹಿಳೆ, ಕೊಂಡ್ಲಾಪುರದ 43 ವರ್ಷದ ವ್ಯಕ್ತಿ, ಮಧುಗಿರಿಯ 60 ವರ್ಷದ ವೃದ್ಧ, ಗುಬ್ಬಿ ತಾಲೂಕು ಚಿಂದಿಗೆರೆ 46 ವರ್ಷದ ವ್ಯಕ್ತಿ, ಗುಬ್ಬಿ 70 ವರ್ಷದ ವೃದ್ಧ, ಕಲ್ಲಹಳ್ಳಿಯ 40 ವರ್ಷದ ವ್ಯಕ್ತಿ, ಪಾವಗಡ ತಾಲೂಕು ಪಳವಳ್ಳಿಯ 40 ವರ್ಷದ ವ್ಯಕ್ತಿ, ನಾಗಲಾಪುರದ 45 ವರ್ಷದ ಮಹಿಳೆ, ತಿಮ್ಮನಹಳ್ಳಿ 58 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.

    ಕೊರಟಗೆರೆ ತಾಲೂಕು ನಾಗಸಂದ್ರದ 67 ವರ್ಷದ ವೃದ್ಧ, ತುಮಕೂರಿನ ಹನುಮಂತಪುರದ 69 ವರ್ಷದ ವೃದ್ಧ, ಕ್ಯಾತಸಂದ್ರದ 43 ವರ್ಷದ ಮಹಿಳೆ, ಕನ್ನೇನಹಳ್ಳಿಯ 45 ವರ್ಷದ ವ್ಯಕ್ತಿ, ಉಪ್ಪಾರಹಳ್ಳಿ 41 ವರ್ಷದ ವ್ಯಕ್ತಿ, ಶ್ರೀರಾಮನಗರದ 55 ವರ್ಷದ ವ್ಯಕ್ತಿ, ಲೇಬರ್ ಕಾಲನಿಯ 70 ರ್ವದ ವೃದ್ಧನನ್ನು ಕರೊನಾ ಬಲಿ ತೆಗೆದುಕೊಂಡಿದೆ.
    ಜಿಲ್ಲೆಯಲ್ಲಿ ಈವರೆಗೂ 66724 ಜನರಿಗೆ ಸೋಂಕು ತಗುಲಿದ್ದು 8.69 ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ, ಸಕ್ರಿಯ ಪ್ರಕರಣಗಳ ಸಂಪರ್ಕಿತರೆಂದು 66606 ಜನರನ್ನು ಗುರುತಿಸಲಾಗಿದ್ದು ಅವರೆಲ್ಲರಿಗೂ ಪರೀಕ್ಷೆ ನಡೆಸಿ, ಕ್ವಾರಂಟೈನ್‌ನಲ್ಲಿಡುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸೋಂಕಿತರಿಗೆ ಆರೈಕೆ ಮಾಡಲಾಗುತ್ತಿದೆ.

    ಮಂಗಳವಾರದ ಸೋಂಕಿತರ ಪೈಕಿ 889 ಪುರುಷರು, 570 ಮಹಿಳೆಯರಿದ್ದಾರೆ, ಇವರ ಪೈಕಿ ಐದು ವರ್ಷದೊಳಗಿನ 20 ಮಕ್ಕಳು, 60 ವರ್ಷ ಮೇಲ್ಪಟ್ಟ 189 ಹಿರಿಯರಿಗೂ ಸೋಂಕು ದೃಢವಾಗಿದ್ದು ಇವರ ಸಂಪರ್ಕಿತರನ್ನು ಗುರುತಿಸಿ ಪರೀಕ್ಷೆ ನಡೆಸುವ ತುರ್ತಿದೆ.

    ಲಸಿಕೆಗೆ ಕಾಯುತ್ತಿದೆ ಜನಸಾಗರ: ಜಿಲ್ಲೆಯಲ್ಲಿಯೂ ಕರೊನಾ ಲಸಿಕೆ ಅಭಾವ ಎದುರಾಗಿದೆ, ಮೊದಲ ಡೋಸ್ ಪಡೆದಿರುವವರು ಎರಡನೇ ಡೋಸ್ ಪಡೆಯಲು ಲಸಿಕಾ ಕೇಂದ್ರಕ್ಕೆ ಅಲೆಯುತ್ತಿದ್ದಾರೆ. ಮೊದಲ ಡೋಸ್ ಲಸಿಕೆ ಪಡೆದಿರುವ 45 ವರ್ಷದ ಮೇಲ್ಪಟ್ಟವರಿಗೆ ಎರಡನೇ ಡೋಸ್ ಆದ್ಯತೆಯ ಮೇಲೆ ನೀಡುತ್ತಿದ್ದು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಮರೀಚಿಕೆಯಾಗಿದೆ. ಜಿಲ್ಲಾಸ್ಪತ್ರೆ ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಕೆಲವೇ ಕೆಲವು ಜನರಿಗೆ ಲಸಿಕೆ ನೀಡಲಾಗುತ್ತಿದ್ದು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಬಂದವರಿಗೂ ಲಭ್ಯವಿಲ್ಲ ಎಂಬ ಸಿದ್ಧ ಉತ್ತರ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಸಿಗುತ್ತಿದೆ. ಕರೊನಾ ಸೇನಾನಿಗಳು ಎಂದು ೋಷಿಸಿಕೊಂಡಿರುವ ಪತ್ರಕರ್ತರಿಗೂ ಲಸಿಕೆ ನೀಡಲು ತುಮಕೂರು ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts