More

    ಹೊಸದಾಗಿ ಕಾರ್ ಡ್ರೈವ್ ಮಾಡುತ್ತಿದ್ದೀರಾ? ಇಲ್ಲಿವೆ ನಿಮಗೆ ಸಹಾಯವಾಗುವ ಕೆಲವು ಟಿಪ್ಸ್!

    ಬೆಂಗಳೂರು: ನೀವು ಕಾರ್ ಡ್ರೈವಿಂಗ್ ಕಲಿಯುತ್ತಿದ್ದೀರಾ? ಈಗಷ್ಟೇ ಕಲಿತು ಕಾರ್ ಓಡಿಸುತ್ತಿದ್ದೀರಾ? ಅಥವಾ ಬಹಳ ತಿಂಗಳ ಗ್ಯಾಪ್‌ನ ನಂತರ ಮತ್ತೆ ಕಾರ್ ಓಡಿಸುತ್ತಿದ್ದೀರಾ? ಏಕೆಂದರೆ ತುಂಬ ದಿನಗಳ ನಂತರ ಗಾಡಿಯನ್ನು ಓಡಿಸುವಾಗ ಅಥವಾ ಮೊದಲ ಬಾರಿ ಓಡಿಸುವಾಗ ಒಂದು ರೀತಿಯ ಹಿಂಜರಿಕೆ ಇರುತ್ತದೆ. ಅತಿಯಾದ ಆತ್ಮ ವಿಶ್ವಾಸದಿಂದ ಬಹಳ ಜನ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಅಂತಹ ಸನ್ನಿವೇಶವನ್ನು ತಪ್ಪಿಸಲು ಇಲ್ಲಿವೆ ಸ್ಪೆಷಲ್ ಡ್ರೈವಿಂಗ್ ಟಿಪ್ಸ್.


    ಸ್ಪೀಡ್ ಲಿಮಿಟ್ ನಿರ್ಲಕ್ಷಿಸ ಬೇಡಿ: ಮೊದಲು, ಕಾರ್ ಸ್ಟಾರ್ಟ್ ಮಾಡಿದ ನಂತರ ಮೊದಲನೆ ಗೇರ್​ನಲ್ಲಿ ಮಾತ್ರ ಚಲಾಯಿಸಿ, ಕಾರ್ ಹಿಡಿತಕ್ಕೆ ಬಂದ ಮೇಲೆ ಮುಂದಿನ ಗೇರ್​ಗಳಿಗೆ ಹೋಗಿ. ಗಾಡಿ ಚಲಾಯಿಸುವಾಗ ಸ್ಪೀಡ್ ಲಿಮಿಟ್​ನಲ್ಲೇ ಇರಬೇಕೆಂಬುದು ತಲೆಯಲ್ಲಿರಲಿ. ಅದರಿಂದ ತುರ್ತು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಗಾಡಿಯನ್ನು ನಿಲ್ಲಿಸಬಹುದು.


    ಸರಿಯಾದ ಅಂತರ ಕಾಯ್ದುಕೊಳ್ಳಿ: ನಿಮ್ಮ ಗಾಡಿಗೂ ಬೇರೆ ಗಾಡಿಗೂ ಸಾಕಷ್ಟು ಅಂತರ ಇರಬೇಕು. ಸಡನ್ ಬ್ರೇಕ್ ಹಾಕುವಾಗ ಹಿಂದೆ ಬರುತ್ತಿರುವ ಗಾಡಿ ಬಗ್ಗೆ ಗಮನವಿರಲಿ. ಸಣ್ಣ ತಪ್ಪು ಕೂಡ ಅಪಾಯಕಾರಿ ಸಂದರ್ಭಕ್ಕೆ ಎಣೆಮಾಡುತ್ತದೆ. ಅದಕ್ಕೆ ಮುಂದೆ ಇರುವ ಗಾಡಿ ಮತ್ತು ನಿಮ್ಮ ಕಾರ್ ಮಧ್ಯ ಸುರಕ್ಷಿತವಾದ ಅಂತರವಿರಲಿ.


    ಸರಿಯಾದ ಲೇನ್​ನಲ್ಲಿ ಓಡಿಸಿ: ಹೆದ್ದಾರಿಯಲ್ಲಿರುವ ಲೇನ್‌ಗಳು ವಿವಿಧ ಗಾಡಿಗಳನ್ನು ವೇಗ ಆಧರಿಸಿ ವಿಂಗಡಿಸುತ್ತವೆ. ಬಹುತೇಕ ಎಲ್ಲಾ ಚಾಲಕರು ಹಿಂದಿಕ್ಕುವ ಆತುರದಲ್ಲಿದ್ದಾಗ ವೇಗಕ್ಕೆ ತಕ್ಕಂತೆ ಲೇನ್‌ಗಳನ್ನು ಬದಲಿಸುವುದು ಬಹಳ ಮುಖ್ಯವಾಗುತ್ತದೆ. ತಪ್ಪಾದ ಲೇನ್​ನಲ್ಲಿ ಚಲಾಯಿಸುವುದು ದುರಂತವನ್ನು ಬರಮಾಡಿಕೊಂಡಂತೆ. ನಿರ್ದಿಷ್ಟ ಲೇನ್​ನ ಸ್ಪೀಡ್ ಲಿಮಿಟ್ ತಿಳಿದು ಅದಕ್ಕೆ ತಕ್ಕಂತೆ ಕಾರ್​ನ ಸ್ಪೀಡ್ ಹೊಂದಿಸಿಕೊಳ್ಳಬೇಕು.


    ಈ ಟಿಪ್‌ಗಳನ್ನು ನಿಮ್ಮ ಡ್ರೈವಿಂಗ್​ನಲ್ಲಿ ಅಳವಡಿಸಿಕೊಂಡಾಗ ಅಪಘಾತಗಳನ್ನು ತಪ್ಪಿಸಬಹುದು. ನಿಧಾನಗತಿಯಲ್ಲಿ ವಾಹನ ಚಲಾಯಿಸುವುದರಿಂದ ಅನಾಹುತಗಳನ್ನು ತಡೆಯಬಹುದು. – ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts