More

    ಪೊಲೀಸ್​ ವಶದಲ್ಲಿದ್ದ ಐಷಾರಾಮಿ ಕಾರುಗಳನ್ನ ಸಿಸಿಬಿ ಅಧಿಕಾರಿಗಳೇ ಎಗರಿಸಿದ್ರು!

    ಮಂಗಳೂರು: ಪೊಲೀಸ್ ವಶದಲ್ಲಿದ್ದ ಐಷಾರಾಮಿ ಕಾರುಗಳ ನಾಪತ್ತೆ ಕೇಸ್​ನಲ್ಲಿ ಸಿಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧವೇ ಸಿಐಡಿಗೆ ವರದಿ ಸಲ್ಲಿಕೆ ಆಗಿದೆ.

    ಜನರಿಗೆ ಹಣ ದ್ವಿಗುಣ ಮಾಡಿಕೊಡುವ ಆಮಿಷವೊಡ್ಡಿ 30 ಕೋಟಿ ರೂಪಾಯಿ ವಂಚಿಸಿದ್ದ ಎಲಿಯ ಕನ್​ಸ್ಟ್ರಕ್ಷನ್ ಆ್ಯಂಡ್ ಬಿಲ್ಡರ್ ಪ್ರೈ.ಲಿ ಸಂಸ್ಥೆ ವಿರುದ್ಧ ಕೇಸ್​ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಸಿಬಿ ಪೊಲೀಸರು, ವಂಚನೆ ಬಂಧಿತರಾಗಿದ್ದ ಮೂವರು ಆರೋಪಿಗಳಿಂದ ಜಾಗ್ವಾರ್, ಬಿಎಂಡಬ್ಲ್ಯು, ಪೋರ್ಷೆ ಸೇರಿ ಮೂರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದರು. ಇದನ್ನೂ ಓದಿರಿ ಶಿವರಾತ್ರಿ ಪ್ರಯುಕ್ತ ಕ್ರಿಕೆಟ್ ಟೂರ್ನಿ: ಗೆದ್ದವರಿಗೆ ಸಿಗುತ್ತೆ ಜೋಡಿಕುರಿ ಜತೆಗೆ ವಿಸ್ಕಿ ಬಾಟಲಿ…

    ತಮ್ಮ ವಶದಲ್ಲಿದ್ದ ಜಾಗ್ವಾರ್ ಕಾರನ್ನು ಮಂಗಳೂರಿನ ಸಿಸಿಬಿ ಅಧಿಕಾರಿಗಳು ಮಾರಾಟ ಮಾಡಿದ್ದಾರೆ. ಪೋರ್ಷೆ ಹಾಗು ಬಿಎಂಡಬ್ಲ್ಯು ಕಾರನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಈಗಾಗಲೇ ಈ ಅಧಿಕಾರಿಗಳು ಮಂಗಳೂರು ಸಿಸಿಬಿ ವಿಭಾಗದಿಂದ ವರ್ಗಾವಣೆಯಾಗಿದ್ದಾರೆ. ಪೊಲೀಸ್ ವಶದಲ್ಲಿದ್ದ ಐಷಾರಾಮಿ ಕಾರಗಳ ದುರ್ಬಳಕೆ ಮತ್ತು ಮಾರಾಟ ಪ್ರಕರಣ ಕುರಿತು ತನಿಖೆಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶಿಸಿದ್ದರು. ತನಿಖೆ ನಡೆಸಿ ವರದಿ ತಯಾರಿಸಿರುವ ಡಿಸಿಪಿ ವಿನಯ್ ಗಾವ್ಕರ್, ಇದನ್ನು ಡಿಜಿಪಿಗೆ ರವಾನಿಸಿದ್ದಾರೆ. ಮಂಗಳೂರು ಸಿಸಿಬಿ ವಿಭಾಗದ ಹಿಂದಿನ ಪಿಎಸ್ಸೈ ಕಬ್ಬಾಳ್ ರಾಜ್, ನಾರ್ಕೋಟಿಕ್ ಇನ್ಸ್ಪೆಕ್ಟರ್ ರಾಮಕೃಷ್ಣ, ಸಿಸಿಬಿ ಸಿಬ್ಬಂದಿ ಆಶೀತ್ ಡಿಸೋಜಾ, ರಾಜಾ, ‘ಪೊಲೀಸ್ ಬ್ರೋಕರ್’ ದಿವ್ಯದರ್ಶನ್ ವಿರುದ್ಧ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ, ನನ್ನನ್ನು ಏನ್​ ಮಾಡೋಕೂ ಆಗಲ್ಲ: ಎಚ್​ಡಿಕೆ

    ಶಿವರಾತ್ರಿ ಪ್ರಯುಕ್ತ ಕ್ರಿಕೆಟ್ ಟೂರ್ನಿ: ಗೆದ್ದವರಿಗೆ ಸಿಗುತ್ತೆ ಜೋಡಿಕುರಿ ಜತೆಗೆ ವಿಸ್ಕಿ ಬಾಟಲಿ…

    ಅವನು ಬಂದಾಗ ಕಾರ್ಯಕರ್ತರು ಹಲ್ಲು ಗಿಂಜುತ್ತಾರೆ… ಎಚ್​ಡಿಕೆ ವಿರುದ್ಧ ನಾಲಗೆ ಹರಿಬಿಟ್ಟ ಯೋಗೇಶ್ವರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts