More

    ಕಾರು ಅಪಘಾತ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​: ಅಪಘಾತ ನಂತರ ಆಗಿದ್ದೇನು? ಇಲ್ಲಿದೆ ವಿವರ

    ಮಂಗಳೂರು: ಸೇತುವೆಗೆ ಡಿಕ್ಕಿ ಹೊಡೆದು ನೀರಿಗೆ ಕಾರು ಬಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಅಪಘಾತದ ನಂತರವೂ ಯುವಕರಿಬ್ಬರು ಮೊಬೈಲ್​ ಬಳಸಿರುವುದು ತನಿಖೆಯಿಂದ ಬಯಲಾಗಿದೆ.

    ಹಾಗಾದರೆ ಈ ಇಬ್ಬರು ಯುವಕರು ಎಲ್ಲಿಗೆ ಹೋದ್ರು, ಹೊಳೆಯಲ್ಲೂ ಇಬ್ಬರು ಪತ್ತೆಯಾಗಲಿಲ್ಲ ಎಂದ ಕೂಡಲೇ ತನಿಖೆಗೆ ಇಳಿದ ಪೊಲೀಸರೇ ಶಾಕ್​ ಆಗಿದ್ದಾರೆ.

    ಅಪಘಾತದ ನಂತರ ಮನೆಯವರಿಗೆ ಕಾಲ್ ಮಾಡಿದ್ದ ಕಾರಿನಲ್ಲಿದ್ದ ಯುವಕರು ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ ಎಂದಷ್ಟೇ ಹೇಳಿರುವುದು ತಿಳಿದುಬಂದಿದೆ. ಯುವಕರು ಸದ್ಯ ಮನೆಗೆ ಕರೆ ಬಂದ ನಂಬರ್​​ನಿಂದ ಲೊಕೇಶನ್ ಟ್ರೇಸ್ ಮಾಡುತ್ತಿದೆ. ಸ್ಥಳೀಯ ಆಸ್ಪತ್ರೆಗಳಲ್ಲಿಯೂ ವಿಚಾರಿಸಲಾಗುತ್ತಿದ್ದು, ಶೀಘ್ರದಲ್ಲೇ ಇಬ್ಬರನ್ನು ಪತ್ತೆ ಹಚ್ಚುವ ಸಾಧ್ಯತೆ ಇದೆ.

    ಕಾರನ್ನು ತಡೆದಿದ್ದ ಪೊಲೀಸರು: ನಿನ್ನೆ ರಾತ್ರಿ ಕಾರಿನಲ್ಲಿ ಬಂದ ಈ ಇಬ್ಬರನ್ನು ತಡೆದಿದ್ದ ಪೊಲೀಸರು ವಿಚಾರಿಸಿ ಕಳುಹಿಸಿದ್ದಾರೆ.ಸವಣೂರು ಚೆಕ್ ಪೋಸ್ಟ್​​ನಲ್ಲಿ ಸಿಂಗಲ್ ಹೆಡ್ ಲೈಟ್ ಹಾಕಿ ಬಂದಿದ್ದ ಕಾರನ್ನು ತಡೆದಿದ್ದ ಪೊಲೀಸರು, ಎಲ್ಲಿಂದ ಎಲ್ಲಿಗೆ ಪ್ರಯಾಣ ಎಂದು ವಿಚಾರಿಸಿದ್ದರು. ಈ ವೇಳೆ ಪುತ್ತೂರಿನಿಂದ ಗುತ್ತಿಗಾರಿಗೆ ಹೋಗುವುದಾಗಿ ಈ ಯುವಕರು ಹೇಳಿದ್ದರು.

    ಗುತ್ತಿಗಾರಿನ ಅಕ್ಕನ ಮನೆಗೆ ಹೋಗುವುದಾಗಿ ಹೇಳಿದ್ದರಿಂದ, ಯುವಕರುನಿದ್ದೆಯ ಮಂಪರಿನಲ್ಲಿ ಇದ್ದಂತೆ ಕಂಡುಬಂದಿದ್ದ ಕಾರು ಚಾಲಕನನ್ನು ಹುಷಾರಾಗಿ ಹೋಗುವಂತೆ ಹೇಳಿ ಎಚ್ಚರಿಕೆ ನೀಡಿ ಕಳುಹಿಸಿದ್ದರು ಎಂದು ಪೊಲೀಸರೇ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಉರುಳಿದ ಕಾರು ನುಜ್ಜುಗುಜ್ಜಾದ ಸ್ಥಿತಿಯಲ್ಲಿ ಪತ್ತೆ: ಕಾರಿನಲ್ಲಿದ್ದ ಇಬ್ಬರು ನಾಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts