More

    ಪಾಕಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೋತ ಜಿಂಬಾಬ್ವೆ

    ರಾವಲ್ಪಿಂಡಿ: ನಾಯಕ ಬಾಬರ್ ಅಜಮ್ (82 ರನ್, 55 ಎಸೆತ, 9 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಎದುರು ಮಂಕಾದ ಪ್ರವಾಸಿ ಜಿಂಬಾಬ್ವೆ ತಂಡ ಪಾಕಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಸೋಲು ಕಂಡಿದೆ. ಈ ಮೂಲಕ ಪಾಕ್ ತಂಡ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಜಿಂಬಾಬ್ವೆ ತಂಡ 20 ವರ್ಷದ ವೆಸ್ಲೆ ಮಡೆವೆರ್ (70* ರನ್, 48 ಎಸೆತ, 9 ಬೌಂಡರಿ, 1 ಸಿಕ್ಸರ್) ಸಾಹಸದಿಂದ 6 ವಿಕೆಟ್‌ಗೆ 156 ರನ್ ಗಳಿಸಿತು. ಪ್ರತಿಯಾಗಿ ಪಾಕ್ 18.5 ಓವರ್‌ಗಳಲ್ಲಿ 4 ವಿಕೆಟ್‌ಗೆ 157 ರನ್ ಗಳಿಸಿ ಜಯಿಸಿತು. 2ನೇ ಟಿ20 ಪಂದ್ಯ ಭಾನುವಾರ ನಡೆಯಲಿದೆ. ಇದಕ್ಕೆ ಮುನ್ನ ಏಕದಿನ ಸರಣಿಯಲ್ಲಿ ಪಾಕಿಸ್ತಾನ ತಂಡ 2-1ರಿಂದ ಜಯ ದಾಖಲಿಸಿತ್ತು.

    ಜಿಂಬಾಬ್ವೆ: 6 ವಿಕೆಟ್‌ಗೆ 156 (ಮಡೆವೆರ್ 70*, ಟೇಲರ್ 20, ಚಿಗುಂಬುರ 21, ರವ್ೂ 25ಕ್ಕೆ 2, ರಿಯಾಜ್ 37ಕ್ಕೆ 2), ಪಾಕಿಸ್ತಾನ: 18.5 ಓವರ್‌ಗಳಲ್ಲಿ 4 ವಿಕೆಟ್‌ಗೆ 157 (ಬಾಬರ್ 82, ಹಫೀಜ್ 36, ಮುಜರಬಾನಿ 26ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts