More

    ಹೋಟೆಲ್​ನವರಿಗೆ ನಷ್ಟವಾಗುತ್ತದೆ ಅಂತ ಎಲ್ಲರನ್ನೂ ಕಷ್ಟಕ್ಕೆ ತಳ್ಳಲು ಸರ್ಕಾರ ಸಿದ್ಧವಿಲ್ಲ: ಸಚಿವ ಆರ್. ಅಶೋಕ

    ಬೆಂಗಳೂರು: ಕೋವಿಡ್ ನಿರ್ಬಂಧದಿಂದಾಗಿ, ಅದರಲ್ಲೂ ನೈಟ್​ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂನಿಂದಾಗಿ ಕಂಗೆಟ್ಟು ಹೋಗಿದ್ದೇವೆ ಎಂದು ಹೋಟೆಲ್ ಹಾಗೂ ಪ್ರವಾಸೋದ್ಯಮ ಕ್ಷೇತ್ರದವರು ಕಳೆದ ಕೆಲವು ದಿನಗಳಿಂದ ಅಲವತ್ತುಕೊಳ್ಳುತ್ತಿದ್ದಾರೆ. ಈ ನಡುವೆ ಸದ್ಯ ನೈಟ್ ಕರ್ಫ್ಯೂ ಮುಂದುವರಿದಿದ್ದು, ವಾರಾಂತ್ಯ ಕರ್ಫ್ಯೂ ಕೂಡ ಮುಂದುವರಿಯುವ ಸಾಧ್ಯತೆಗಳು ಗೋಚರಿಸಿವೆ.

    ಕರೊನಾ ತಡೆ ಹಾಗೂ ನಿಯಂತ್ರಣ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಎಲ್ಲ ನಿಯಮಗಳೂ ಜ. 21ರ ವರೆಗೂ ಮುಂದುವರಿಯಲಿವೆ ಎಂಬುದಾಗಿ ಕರೊನಾ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ಸಂಜೆ ಬಳಿಕ ನಡೆದ ಸಭೆಯಲ್ಲಿ ಈ ನಿರ್ಧರಿಸಲಾಗಿದೆ.

    ಸಿಎಂ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಆರ್. ಅಶೋಕ, ಸಭೆಯ ಮುಖ್ಯಾಂಶಗಳನ್ನು ತಿಳಿಸಿದರು. ತಜ್ಞರ ಪ್ರಕಾರ ಜ.25, 26ರಂದು ಕರೊನಾ ಪ್ರಕರಣಗಳ ಸಂಖ್ಯೆ ಅತಿಯಾಗಲಿದೆ. ಆ ಬಳಿಕ ಪ್ರಕರಣಗಳು ಕಡಿಮ ಆಗಬಹುದು ಎಂದು ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ ಜ. 21ರವರೆಗೂ ಈ ವರೆಗೆ ಇರುವ ಎಲ್ಲ ನಿರ್ಬಂಧಗಳೂ ಮುಂದುವರಿಯಲಿವೆ ಎಂದಿದ್ದಾರೆ.

    ಇನ್ನು ನೈಟ್​ ಹಾಗೂ ವಾರಾಂತ್ಯದ ಕರ್ಫ್ಯೂ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ, ನೈಟ್​ ಕರ್ಫ್ಯೂ ಕೂಡ ಯಥಾವತ್ ಮುಂದುವರಿಯಲಿದೆ. ಆದರೆ ಶುಕ್ರವಾರ ಸಿಎಂ ನೇತೃತ್ವದಲ್ಲಿ ಇನ್ನೊಂದು ಸಭೆ ನಡೆಸಲಿದ್ದು, ಅಂದು ವಾರಾಂತ್ಯ ಕರ್ಫ್ಯೂ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು.

    ಶುಕ್ರವಾರದವರೆಗೂ ನೈಟ್ ಕರ್ಫ್ಯೂ ಯಥಾವತ್ತಾಗಿ ಇರುತ್ತದೆ. ಶುಕ್ರವಾರದ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ಬಗ್ಗೆ ಮಾತ್ರ ನಿರ್ಧಾರ ಮಾಡಲಾಗುತ್ತದೆ. ಹೋಟೆಲ್​ನವರಿಗೆ ನಷ್ಟ ಆಗುತ್ತದೆ ಅಂತ ಎಲ್ಲ ಜನರನ್ನು ಕಷ್ಟಕ್ಕೆ ದೂಡಲು ಸರ್ಕಾರ ಸಿದ್ಧವಿಲ್ಲ. ಕೇಂದ್ರ ಸರ್ಕಾರ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ತಜ್ಞರು ಹೇಳುವ ಪ್ರಕಾರ ನಾವು ತೀರ್ಮಾನ ಮಾಡುತ್ತೇವೆ ಎಂಬುದಾಗಿ ಅವರು ಪ್ರತಿಕ್ರಿಯಿಸಿದರು.

    ಹಿಸ್ಟರಿ ರಿಪೀಟ್ಸ್​.. ಇದು ಚರಿತ್ರೆ ಸೃಷ್ಟಿಸೋ ಅವತಾರ: ಭಕ್ತರ ಆವೇಶಕ್ಕೆ ಪೊಲೀಸರ ಸರ್ಪಗಾವಲೂ ತತ್ತರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts