More

    ಗದ್ದಲದಿಂದ ಕಬ್ಬು ಬೆಳೆಗಾರರು, ರೈತರಿಗೆ ತೊಂದರೆ

    ಕಿಕ್ಕೇರಿ: ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಆರಂಭಿಸುವ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕರೆಯಲಾಗಿದ್ದ ಸಾರ್ವಜನಿಕ ಸಭೆ ಗದ್ದಲಗೂಡಾದ ಕಾರಣ ಕಬ್ಬು ಬೆಳೆಗಾರರು ಮತ್ತು ರೈತರಿಗೆ ತೊಂದರೆಯಾಯಿತೇ ಹೊರತು ಬೇರೆಯವರಿಗೆ ಅಲ್ಲ ಎಂದು ರೈತ ಮುಖಂಡ ಮಾರ್ಗೋನಹಳ್ಳಿ ವೆಂಕಟೇಶ್ ತಿಳಿಸಿದರು.

    ದಬ್ಬೇಘಟ್ಟ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು ಒಂದೂವರೆ ಗಂಟೆ ನಡೆಯಬೇಕಾದ ಸಭೆ 15 ನಿಮಿಷದಲ್ಲಿ ಮುಗಿಯಿತು. ಎಥೆನಾಲ್ ಘಟಕ ನಿರ್ಮಾಣ ಕುರಿತು ಚರ್ಚೆಯೇ ನಡೆಯಲಿಲ್ಲ. ಸುಮಾರು ಸಾವಿರಕ್ಕೂ ಹೆಚ್ಚು ಕಬ್ಬು ಬೆಳೆಗಾರರು, ರೈತರು ಭಾಗವಹಿಸಿದ್ದರು. ಘಟಕದಿಂದ ಆಗುವ ಅನುಕೂಲ, ಅನನುಕೂಲಗಳ ಬಗ್ಗೆ ಡಿಸಿ ಮಾಹಿತಿ ನೀಡಲಿಲ್ಲ. ರೈತರಿಗೆ ಎಲ್ಲ ವಿಷಯ ತಿಳಿಸಿದ್ದರೆ ನೈಜ ಚಿತ್ರಣ ತಿಳಿಯುತ್ತಿತ್ತು. ಈ ವಿಷಯದಲ್ಲಿ ಸಭೆ ಎಡವಿದಂತಾಗಿದೆ. ಚರ್ಚೆಗೆ ಇಲ್ಲಿ ಅವಕಾಶವೇ ಸಿಗದಂತಾಯಿತು ಎಂದರು.

    ರೈತ ಜಗದೀಶ್ ಮಾತನಾಡಿ, ಘಟಕ ಬೇಕೆಂದು ಹೇಳಲು ಅವಕಾಶವೇ ಸಿಗಲಿಲ್ಲ. ದೊಡ್ಡದಾಗಿ ಕೂಗಾಟ, ನೂಕಾಟ ನಡೆಯಿತು. ರಕ್ಷಣೆಗಾಗಿ ನಾವು ಪರಿತಪಿಸುವಂತಾಯಿತು. ಘಟಕಕ್ಕೆ ಅತ್ಯಾಧುನಿಕ ಯಂತ್ರ ಅಳವಡಿಸಿದರೆ ಸಣ್ಣ ಸಮಸ್ಯೆಯೂ ಕಾಡದು. ಕಾರ್ಖಾನೆಯ ಉಪ ಉತ್ಪನ್ನ ಘಟಕದಿಂದ ಕಬ್ಬು ಬೆಳೆಗಾರರಿಗೆ ಲಾಭವಾಗಲಿದೆ. ಅಲ್ಲದೆ ಕಾರ್ಖಾನೆಯೊಂದಿಗೆ ರೈತರು ಬದುಕು ಕಟ್ಟಿಕೊಳ್ಳಬಹುದಿತ್ತು. ಸಭೆಯಲ್ಲಿ ಗದ್ದಲ ನಿಯಂತ್ರಣ ಮಾಡುವಲ್ಲಿ ಡಿಸಿ, ಆರಕ್ಷಕ ಇಲಾಖೆ ಸೋತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ರೈತ ತಿಮ್ಮನಾಯಕ ಮಾತನಾಡಿ, ಡಿಸಿ ಮತ್ತೊಮ್ಮೆ ಸಭೆ ನಡೆಸುವ ಮೂಲಕ ಪರ ಮತ್ತು ವಿರೋಧವನ್ನು ಚರ್ಚಿಸಲು ಅವಕಾಶ ನೀಡಬೇಕು ಎಂದು ವಿನಂತಿಸಿದರು.

    ರೈತ ಮುಖಂಡರಾದ ಬಿದರಹಳ್ಳಿ ಪುಟ್ಟರಾಜು, ಕೆ.ಎ.ಪ್ರಕಾಶ್, ಚುಜ್ಜಲಕ್ಯಾತನಹಳ್ಳಿ ಮಂಜೇಗೌಡ, ದಬ್ಬೇಘಟ್ಟ ಜಗದೀಶ್, ಪುಟ್ಟರಾಜು, ಚಿಕ್ಕಮಂದಗೆರೆ ತಿಮ್ಮನಾಯಕ, ಬೇವಿನಹಳ್ಳಿಕೊಪ್ಪಲು ನಾಗರಾಜು, ಸಣ್ಣಪ್ಪ, ಬಿ.ಎಲ್. ಜಗದೀಶ್, ಕೋಟಹಳ್ಳಿ ಜವರೇಗೌಡ, ಚಂದ್ರಶೇಖರ್, ಗದ್ದೆಹೊಸೂರು ಸಂದೀಪ, ಶ್ರವಣನಹಳ್ಳಿ ಅಣ್ಣಾಜಿ, ಕೋಟಹಳ್ಳಿ ಚಂದ್ರಶೇಖರ್, ತೆಂಗಿನಘಟ್ಟ ಮೂರ್ತಿ ಮುಂತಾದವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts