More

    ರಾಯಬಾಗದಲ್ಲಿ ಅಭ್ಯರ್ಥಿಗಳ ವಿಜಯೋತ್ಸವ

    ರಾಯಬಾಗ: ತಾಲೂಕಿನಲ್ಲಿ ಕುತೂಹಲ ಕೆರಳಿಸಿದ್ದ ಗ್ರಾಪಂ ಫಲಿತಾಂಶ ಬುಧವಾರ ಸಂಪೂರ್ಣವಾಗಿ ಹೊರಬೀಳಲು ತಡವಾಯಿತು. ಪರಿಣಾಮ ಅಭ್ಯರ್ಥಿಗಳ ಬೆಂಬಲಿಗರು ಚುನಾವಣೆ ಎಣಿಕೆ ಕೇಂದ್ರದ ಹೊರಗೆ ರಾತ್ರಿವರೆಗೂ ಕಾಯುವಂತಾಯಿತು.

    ಬೆಳಗ್ಗೆ ಪಟ್ಟಣದ ಮಹಾವೀರ ಶಾಲೆಯಲ್ಲಿ ಬಿಗಿ ಬಂದೋಬಸ್ತ್ ನಡುವೆ ತಡವಾಗಿ ಮತ ಎಣಿಕೆ ಪ್ರಾರಂಭವಾಯಿತು. ಮೊದಲ ಸುತ್ತಿನಲ್ಲಿ 9 ಗ್ರಾಪಂಗಳ ಎಣಿಕೆ ನಡೆಯಿತು. ಸಂಜೆ 4 ಗಂಟೆ ನಂತರ ಎರಡನೇ ಹಂತದ ಮತ ಎಣಿಕೆ ಪ್ರಾರಂಭವಾಗಿದ್ದು, ರಾತ್ರಿವರೆಗೂ ಮುಂದುವರಿದಿದೆ. ಗ್ರಾಪಂ ಫಲಿತಾಂಶವನ್ನು ಸಂಬಂಧಿಸಿದ ಗ್ರಾಪಂಗಳ ಚುನಾವಣಾಧಿಕಾರಿಗಳು ಸ್ಪೀಕರ್ ಮೂಲಕ ಘೋಷಣೆ ಮಾಡುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಹೊರಗೆ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿಗಳ ಬೆಂಬಲಿಗರು ಸಂಭ್ರಮಿಸಿದರು. ಆದರೆ, ಬೆಂಬಲಿಗರು ಕರೊನಾ ನಿಯಮ ಮೀರಿದ್ದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಯಿತು. ಜನರನ್ನು ಚದುರಿಸಲು ಪೊಲೀಸರು ಮೇಲಿಂದ ಮೇಲೆ ಲಾಠಿ ಬೀಸಿದರು. ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶಕುಮಾರ ಎಸ್. ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಿದರು.

    ಫಲಿತಾಂಶದ ವಿವರ: ರಾಯಬಾಗ ಗ್ರಾಮೀಣ ಒಟ್ಟು 36 ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ-6, ಪಕ್ಷೇತರರು-30 ವಿಜೇತರಾಗಿದ್ದಾರೆ. ನಿಪನಾಳ 17(ಬಿಜೆಪಿ-13, ಕಾಂಗ್ರೆಸ್-4), ಕುಡಚಿ 41(ಬಿಜೆಪಿ-7, ಕಾಂಗ್ರೆಸ್-34), ಶಿರಗೂರ 13(ಬಿಜೆಪಿ-13), ಸವದತ್ತಿ 24(ಬಿಜೆಪಿ-12, ಕಾಂಗ್ರೆಸ್-12, ಅವಿರೋಧ ಆಯ್ಕೆ 22), ನಂದಿಕುರಳಿ 23(ಬಿಜೆಪಿ-21, ಪಕ್ಷೇತರರು-2), ಮೇಖಳಿ 26( ಬಿಜೆಪಿ-20, ಕಾಂಗ್ರೆಸ್-3, ಪಕ್ಷೇತರರು-3), ಅಲಖನೂರ 28(ಬಿಜೆಪಿ-8, ಕಾಂಗ್ರೆಸ್-19, ಪಕ್ಷೇತರರು-1)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts