More

    ಅಭ್ಯರ್ಥಿ ಭೀಮಸೇನ ಚಿಮ್ಮನಕಟ್ಟಿ ನಾಮಪತ್ರ ಸಲ್ಲಿಕೆ

    ಬಾದಾಮಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಾದಾಮಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಯುವ ಮುಖಂಡ ಭೀಮಸೇನ ಚಿಮ್ಮನಕಟ್ಟಿ ಅಪಾರ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಸೋಮವಾರ ಪಟ್ಟಣದ ಹೊರವಲಯದ ತಹಸೀಲ್ದಾರ್ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಮಂಜುನಾಥ ಅಂತರವಳ್ಳಿ ಅವರಿಗೆ ನಾಮಪತ್ರ ಸಲ್ಲಿಸಿದರು.

    ನಾಮಪತ್ರ ಸಲ್ಲಿಕೆಗೂ ಮುನ್ನ ಅಪಾರ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಪಟ್ಟಣದ ಬಸವೇಶ್ವರ ವೃತ್ತ (ಕಬ್ಬಲಗೇರಿ ಕ್ರಾಸ್) ದಿಂದ ಮುಖ್ಯ ರಸ್ತೆ, ರಾಮದುರ್ಗ ರಸ್ತೆ, ಅಂಬೇಡ್ಕರ್ ವೃತ್ತ ಮೂಲಕ ಪುನಃ ರಾಮದುರ್ಗ ರಸ್ತೆ, ಕಂಠಿ ವೀರಣ್ಣ ದೇವಸ್ಥಾನದವರೆಗೆ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ ನಡೆಯಿತು.

    ತೆರೆದ ವಾಹನದಲ್ಲಿ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ, ಅಭ್ಯರ್ಥಿ ಭೀಮಸೇನ ಚಿಮ್ಮನಕಟ್ಟಿ, ಮುಖಂಡರಾದ ಹೊಳಬಸು ಶೆಟ್ಟರ, ಪಿ.ಆರ್.ಗೌಡರ, ಡಾ.ಎಂ.ಎಚ್.ಚಲವಾದಿ, ಎಂ.ಬಿ.ಹಂಗರಗಿ, ಮಹೇಶ ಹೊಸಗೌಡರ, ಸಂಜಯ ಬರಗುಂಡಿ, ಹನುಮಂತ ಯಕ್ಕಪ್ಪನ್ನವರ, ಮಹಾಂತೇಶ ಹಟ್ಟಿ, ಮಧು ಯಡ್ರಾಮಿ, ಎಂ.ಡಿ.ಯಲಿಗಾರ ಇತರರು ಕಾರ್ಯಕರ್ತರಿಗೆ ಕೈಮುಗಿದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

    ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಪರ ಘೋಷಣೆಗಳನ್ನು ಕೂಗಿದರು. ಪುರಸಭೆ ಅಧ್ಯಕ್ಷ ರಾಜಮಹ್ಮದ ಬಾಗವಾನ, ಮುಖಂಡರಾದ ಮಂಜುನಾಥ ಹೊಸಮನಿ, ಾರೂಖ ದೊಡಮನಿ, ಹನುಮಂತ ಯಕ್ಕಪ್ಪನ್ನವರ, ಸಂಜಯ ಬರಗುಂಡಿ, ಎ್.ಆರ್.ಪಾಟೀಲ (ಮಣ್ಣೇರಿ), ಡಾ.ಬಸವರಾಜ ಕೋಲಾರ, ಮಹಾಂತೇಶ ಹಟ್ಟಿ, ಬಸವರಾಜ ಡೊಳ್ಳಿನ, ಬಸವರಾಜ ಬ್ಯಾಹಟ್ಟಿ, ಸಿದ್ದು ಗೌಡರ, ಶಿವು ಮಣ್ಣೂರ, ಹನುಮಂತ ದೇವರಮನಿ, ಪಾಂಡು ಕಟ್ಟಿಮನಿ ಹಾಗೂ ಮತಕ್ಷೇತ್ರದ ವಿವಿಧ ಗ್ರಾಮ, ನಗರಗಳಿಂದ ಆಗಮಿಸಿದ ಸಹಸ್ರಾರು ಕಾರ್ಯಕರ್ತರು, ಅಭಿಮಾನಿಗಳು, ಯುವಕರು, ಮುಖಂಡರು ಹಾಜರಿದ್ದರು.

    ಮೆರವಣಿಗೆ ವೇಳೆ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಅಂದಾಜು ಎರಡು ಗಂಟೆ ಬಸ್, ಖಾಸಗಿ ವಾಹನಗಳು, ಬೈಕ್ ಸವಾರರು ಬಾದಾಮಿ ಪಟ್ಟಣದ ಒಳ- ಹೊರಗೆ ಸಂಚರಿಸಲು ಪರದಾಡುವಂತಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts