More

  ದೈಹಿಕ ಚಟುವಟಿಕೆ ಮೂಲಕ ಕ್ಯಾನ್ಸರ್​ನಿಂದ ದೂರವಿರಬಹುದು ಎನ್ನುತ್ತದೆ ಈ ಅಧ್ಯಯನ: ಏನಿದೆ ಸಂಶೋಧನೆಯಲ್ಲಿ ಇಲ್ಲಿದೆ ಮಾಹಿತಿ

  ಬಿಡುವಿನ ಅವಧಿಯಲ್ಲಿ ಮಾಡುವ ದೈಹಿಕ ಚಟುವಟಿಕೆಗಳಿಂದ ಕ್ಯಾನ್ಸರ್​ನ ದೂರಾಗಿಸಬಹುದು. 9 ವಿವಿಧ ಬಗೆಯ ವ್ಯಾಯಾಮಗಳನ್ನು ಮಾಡಿದ 7,50,00 ಮಂದಿಗೆ 7 ಬಗೆಯ ಕ್ಯಾನ್ಸರ್​ನಿಂದ ದೂರವಾಗಿದ್ದಾರೆ.

  ಅಮೆರಿಕದ ಹಾರ್ವರ್ಡ್​ ಟಿ.ಎಚ್​. ಚಾನ್​ ಸ್ಕೂಲ್​ ಆಫ್​ ಪಬ್ಲಿಕ್​ ಹೆಲ್ತ್​ ಆ್ಯಂಡ್​ ನ್ಯಾಷನಲ್​ ಕ್ಯಾನ್ಸರ್​ ಇನ್​ಸ್ಟಿಟ್ಯೂಟ್​ನಲ್ಲಿ ಸಂಶೋಧಕರು ಈ ಅಧ್ಯಯನ ಕೈಗೊಂಡಿದ್ದರು. ವಾಷಿಂಗ್ಟನ್​ನಲ್ಲಿ ನಡೆದ ಈ ಅಧ್ಯಯನದ ಪ್ರಮುಖ ಅಂಶಗಳನ್ನು ಅಮೆರಿಕ ಕ್ಯಾನ್ಸರ್​ ಸೊಸೈಟಿಯ ಕ್ಲಿನಿಕಲ್​ ಆಂಕಾಲಜಿ ಎಂಬ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ.

  ಸಂಶೋಧನಾ ಹಿರಿಯ ವೈಜ್ಞಾನಿಕ ನಿರ್ದೇಶಕ ಅಲ್ಪಾ ಪಟೇಲ್​ ಹೇಳುವ ಪ್ರಕಾರ ದೈಹಿಕ ಚಟುವಟಿಕೆಗಳು ಮಧುಮೇಹ, ಹೃದಯ ಸಂಬಂಧಿ ಹಾಗೂ ಇನ್ನೀತರ ಕಾಯಿಲೆಗಳನ್ನು ನಿರ್ಧರಿಸುತ್ತವೆ ಎನ್ನುತ್ತಾರೆ.

  ವಾರದಲ್ಲಿ ಎರಡೂವರೆ ಗಂಟೆಯಿಂದ 5 ಗಂಟೆಗಳವರೆಗೆ ದೈಹಿಕ ಚಟುವಟಿಕೆಗಳನ್ನು ನಡೆಸಲಾಯಿತು. ಜತೆಗೆ ಇನ್ನು ಕೆಲವರಿಗೆ 1.25 ಗಂಟೆಯಿಂದ ಎರಡೂವರೆ ಗಂಟೆಗಳವರೆಗೆ ನಡೆಸಲಾಯಿತು. ಇದರಿಂದ ಆರೋಗ್ಯಕರ ಜೀವನ ಶೈಲಿ ಸಾಧ್ಯ ಎಂದು ಜರ್ನಲ್​ನ ಲೇಖನದಲ್ಲಿ ತಿಳಿಸಲಾಗಿದೆ.

  ದೈಹಿಕ ಚಟುವಟಿಕೆಗಳ ಕಾರಣದಿಂದ ಪುರುಷರಲ್ಲಿ ಕ್ಯಾನ್ಸರ್​ ಬರುವುದು ಕಡಿಮೆಯಾಗಿದೆ. ವಾರದಲ್ಲಿ 7 ಗಂಟೆಗೂ ಹೆಚ್ಚು ದೈಹಿಕ ಚುವಟಿಕೆಯಲ್ಲಿ ತೊಡಗಿಸಿಕೊಂಡವರಲ್ಲಿ ಶೇ. 8 ಹಾಗೂ ವಾರದಲ್ಲಿ 15 ಗಂಟೆ ತೊಡಗಿಸಿಕೊಂಡವರಲ್ಲಿ ಶೇ. 14 ಕ್ಯಾನ್ಸರ್​ ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನ ತಿಳಿಸಿದೆ.

  ಇದು ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್​ ಶೇ. 6ರಿಂದ 10, ಕಿಡ್ನಿ ಕ್ಯಾನ್ಸರ್​ 11ರಿಂದ 17, ಲಿವರ್​ ಕ್ಯಾನ್ಸರ್​ 18ರಿಂದ 27 ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನ ಸ್ಪಷ್ಟಪಡಿಸಿದೆ.

  ಈ ಡೇಟಾಗಳು ದೈಹಿಕ ಚಟುವಟಿಕೆಗಳಿಂದ ಕ್ಯಾನ್ಸರ್​ನ ಸಾಧ್ಯತೆಗಳಿಂದ ದೂರವಿರಬಹುದು ಎಂಬುದನ್ನು ಸಾಬೀತುಪಡಿಸುತ್ತವೆ. ಆದ್ದರಿಂದ ಸಂಶೋಧಕರ ಕ್ಯಾನ್ಸರ್​ನಿಂದ ದೂರವಿರಲು ದೈಹಿಕ ಚಟುವಟಿಕೆಗಳ ಅಗತ್ಯವನ್ನು ದೃಢಪಡಿಸುತ್ತಾರೆ ಎಂದು ಸಂಶೋಧನೆ ಸ್ಪಷ್ಟಪಡಿಸುತ್ತದೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts