More

    36 ಲಕ್ಷ ಮಹಿಳೆಯರಿಗೆ ಕ್ಯಾನ್ಸರ್ ತಪಾಸಣೆ

    ಬೆಂಗಳೂರು: ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ 36 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಕ್ಯಾನ್ಸರ್ ಪತ್ತೆಗೆ ತಪಾಸಣೆ ನಡೆಸಲಾಗಿದ್ದು, 2,023 ಮಹಿಳೆಯರಲ್ಲಿ ಕ್ಯಾನ್ಸರ್‌ನ ಪ್ರಾರಂಭಿಕ ಲಕ್ಷಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

    ಕಾನ್ಸರ್ ನಿಯಂತ್ರಿಸಲು ಹಾಗೂ ನಿಗಾವಹಿಸಲು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಲಾಗುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಕ್ಯಾನ್ಸರ್ ಕೇರ್ ಟಾಸ್ಕ್‌ಪೋರ್ಸ್ ರಚಿಸಿ ತಪಾಸಣೆಗೆ ವೇಗ ನೀಡಲಾಗಿದೆ. ಹೆಚ್ಚಾಗಿ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿದೆ. ತಪಾಸಣೆ ವೇಳೆ ಕಾನ್ಸರ್ ದೃಢಪಟ್ಟವರಲ್ಲಿ 532 ಮಹಿಳೆಯರು ಸರ್ಕಾರದ ನೆರವಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.


    ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ 19.34 ಲಕ್ಷ ಮಹಿಳೆಯರಿಗೆ ತಪಾಸಣೆ ನಡೆಸಲಾಗಿದ್ದು, ಅವರಲ್ಲಿ 890 ಮಂದಿಯಲ್ಲಿ ಆರಂಭಿಕ ಲಕ್ಷಣಗಳು ದೃಢಪಟ್ಟಿವೆ. ಗರ್ಭಕಂಠ ಕ್ಯಾನ್ಸರ್ ತಪಾಸಣೆಗೆ ಒಳಗಾದ 16.84 ಲಕ್ಷ ಮಹಿಳೆಯರಲ್ಲಿ 1,133 ಮಂದಿಯಲ್ಲಿ ಕಾಯಿಲೆ ಖಚಿತಪಟ್ಟಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts