More

    ರೈತರ ಪಾದಯಾತ್ರೆ ರದ್ದು; ಪ್ರತಿಭಟನೆ ಮುಂದುವರಿಕೆ

    ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಕೊನೆಭಾಗಕ್ಕೆ ನೀರು ಹರಿಸುವಂತೆ ನಗರದ ಹೊರವಲಯದ ಸಾಥ್‌ಮೈಲ್ ಕ್ರಾಸ್ ಬಳಿ ರೈತರು ನಡೆಸುತ್ತಿರುವ ಪ್ರತಿಭಟನೆ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪಾದಯಾತ್ರೆ ಮೂಲಕ ಜಿಲ್ಲಾಕಾರಿ ಕಚೇರಿ ಆಗಮಿಸಲು ನಿರ್ಧರಿಸಿದ್ದ ರೈತರು ಜಿಲ್ಲಾಕಾರಿ ಚಂದ್ರಶೇಖರ ನಾಯಕ ಭರವಸೆ ಮೇರೆಗೆ ಪಾದಯಾತ್ರೆ ಮುಂದೂಡಿದರು.
    ಸಂಚಾರ ತಡೆಸಿದ ಸಂದರ್ಭದಲ್ಲಿ ಮಂಗಳವಾರ ಬೆಳಗ್ಗೆ ನೀರು ಹರಿಸುವಂತೆ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಮೇಲ್ಭಾಗದಲ್ಲಿ ವ್ಯರ್ಥವಾಗಿ ನೀರು ಹರಿಯುತ್ತಿದೆ. ಆದರೆ ಕೆಳಭಾಗದ ಜಮೀನುಗಳಿಗೆ ನೀರು ನೀಡಲು ಸಾಧ್ಯವಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ರೈತರು ಸಂಪೂರ್ಣ ನಷ್ಟಕ್ಕೆ ಗುರಿಯಾಗಬೇಕಾಗಲಿದೆ.
    ಈಗಾಗಲೇ ಎಲ್ಲ ರೀತಿಯ ಹೋರಾಟಗಳನ್ನು ನಡೆಸಲಾಗಿದ್ದು, ರೈತರ ತಾಳ್ಮೆಯನ್ನು ಜನಪ್ರತಿನಿಗಳು ಅಕಾರಿಗಳು ಪರೀಕ್ಷೆ ಮಾಡಬಾರದು. ಗುರುವಾರ ಕಾಲುವೆಗೆ ನೀರು ಹರಿಸದಿದ್ದಲ್ಲಿ ಪುನಃ ಅನಿರ‌್ಷ್ಟ ಸಂಚಾರ ತಡೆ ಆರಂಭಿಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.
    ಜಿಲ್ಲಾಕಾರಿ ಚಂದ್ರಶೇಖರ ನಾಯಕ ಮಾತನಾಡಿ, ಕೊನೆಭಾಗಕ್ಕೆ ನೀರು ಹರಿಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ. ನೀರಾವರಿ ನಿಗಮದ ವ್ಯವಸ್ಥಾಪಕ ಹಾಗೂ ಪ್ರಾದೇಶಿಕ ಆಯುಕ್ತರಿಗೆ ವಸ್ತುಸ್ಥಿತಿ ಬಗ್ಗೆ ಮಾಹಿತಿ ನೀಡಲಾಗಿದೆ. ನೀರು ಹರಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ರೈತರು ಸಹಕರಿಸುವಂತೆ ಮನವಿ ಮಾಡಿದರು.
    ಸ್ಥಳಕ್ಕೆ ಆಗಮಿಸಿದ್ದ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಲು ಮುಂದಾಗುತ್ತಿದ್ದಂತೆ ಹೋರಾಟ ಸಮಿತಿ ಕಾರ್ಯದರ್ಶಿ ಸಿದ್ಧನಗೌಡ ನೆಲಹಾಳ ವಿರೋಧ ವ್ಯಕ್ತಪಡಿಸಿ, ಹೋರಾಟ ನೀಡಿದಾಗ ಮಾತ್ರ ಭರವಸೆ ನೀಡಲಾಗುತ್ತದೆ. ನಂತರ ಆ ಗಮನ ಹರಿಸುವುದಿಲ್ಲ ಎಂದಾಗ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
    ಪ್ರತಿಭಟನೆಯಲ್ಲಿ ಎಸ್ಪಿ ಬಿ.ನಿಖಿಲ್, ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ಪದಾಕಾರಿಗಳಾದ ಚಾಮರಸ ಮಾಲಿಪಾಟೀಲ್, ಶರಣಪ್ಪ ಕಲ್ಮಲಾ, ಅಮರೇಶ ಪಾಟೀಲ್, ಸಂಗಮೇಶ ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts