More

    ರಾಜತಾಂತ್ರಿಕ ಸಿಬ್ಬಂದಿ ಕಡಿತಕ್ಕೆ ಮುಂದಾದ ಕೆನಡಾ ದೆಹಲಿಯಿಂದ ಸಿಂಗಾಪುರ, ಮಲೇಷ್ಯಾಗೆ ವರ್ಗಾವಣೆ

    ಟೊರೊಂಟೊ: ಭಾರತ – ಕೆನಡಾ ಸಂಬಂಧ ಹದಗೆಟ್ಟ ನಂತರ ಕೆನಡಾ ದೆಹಲಿಯಲ್ಲಿನ ತನ್ನ ರಾಯಭಾರ ಕಚೇರಿಯಿಂದ ರಾಜತಾಂತ್ರಿಕರ ಸಂಖ್ಯೆ ಕಡಿತಗೊಳಿಸುತ್ತಿದೆ. ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕ ಸಿಬ್ಬಂದಿ ಇರುವ ಪ್ರಮಾಣದಲ್ಲೇ ಕೆನಡಾವು ಭಾರತದಲ್ಲಿ ಸಿಬ್ಬಂದಿಯನ್ನು ಹೊಂದಿರಬೇಕು. ಇದು ಅ.10ರೊಳಗೆ ಆಗಬೇಕು ಎಂದು ಭಾರತ ತಿಳಿಸಿದ್ದರಿಂದ ಕೆನಡಾ ದೆಹಲಿಯಲ್ಲಿನ ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು 41ಕ್ಕೆ ಕಡಿತಗೊಳಿಸಲು ತೀರ್ಮಾನಿಸಿದೆ. ಅದರಂತೆ ತನ್ನ ಬಹುಪಾಲು ರಾಜತಾಂತ್ರಿಕ ಸಿಬ್ಬಂದಿಯನ್ನು ಸಿಂಗಾಪುರ ಮತ್ತು ಮಲೇಷ್ಯಾಕ್ಕೆ ಸ್ಥಳಾಂತರಿಸಿದೆ.

    ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್​ ಸಿಂಗ್​ ನಿಜ್ಜರ್ ಹತ್ಯೆ ಹಿಂದೆ ಭಾರತೀಯ ಏಜೆಂಟ್‌ಗಳ ಕೈವಾಡವಿದೆ ಎಂದು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಆರೋಪದ ನಂತರ ಉಭಯ ರಾಷ್ಟ್ರಗಳ ನಡುವೆ ಸಂಬಂಧ ಹದಗೆಟ್ಟಿತ್ತು. ಆದರೆ ಭಾರತವು ಈ ಆರೋಪವನ್ನು ಅಸಂಬದ್ಧ ಮತ್ತು ರಾಜಕೀಯ ಪ್ರೇರಣೆ ಎಂದು ತಿರಸ್ಕರಿಸಿತ್ತು.

    ಇದನ್ನೂ ಓದಿ: ಎಲಾನ್​ ಮಸ್ಕ್​ನ ಒಂದು ಸೆಕೆಂಡ್​ನ ಆದಾಯ ಎಷ್ಟು?; ಒಂದು ರಾತ್ರಿಯ ಸಂಪಾದನೆ!

    ಇದರ ಬಳಿಕ ಭಾರತೀಯ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು ಕೆನಡಾ ವಾಪಸ್​ ಕರೆಸಿಕೊಳ್ಳುವಂತೆ ಸೂಚಿಸಿದ್ದು, ಇದಕ್ಕೆ ಪ್ರತಿಯಾಗಿ ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಭಾರತ ಹೊರಹಾಕಿತ್ತು. ಈ ಎಲ್ಲ ಬೆಳವಣಿಗೆಗಳ ಬಳಿಕ ಕೆನಡಾ ಈ ವಾರದ ಆರಂಭದಲ್ಲಿ ರಾಜತಾಂತ್ರಿಕ ಸಿಬ್ಬಂದಿಯನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಲು ಮುಂದಾಗಿದೆ ಎಂದು ಕೆನಡಾದ ಖಾಸಗಿ ವಾಹಿನಿ ವರದಿ ಮಾಡಿದೆ.

    ಕೆಲವು ರಾಜತಾಂತ್ರಿಕರಿಗೆ ಸಾಮಾಜಿಕ ಮಾಧ್ಯಮ ಮತ್ತು ಕೆಲವು ವೇದಿಕೆಗಳಲ್ಲಿ ಬೆದರಿಕೆಗಳು ಬಂದಿರುವುದರಿಂದ ಭಾರತದಲ್ಲಿನ ತನ್ನ ಸಿಬ್ಬಂದಿ ಅಗತ್ಯತೆ ಕುರಿತು ಪರಿಶೀಲಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ನಾವು ಭಾರತದಲ್ಲಿನ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಸರಿಹೊಂದಿಸಲು ನಿರ್ಧರಿಸಿದ್ದೇವೆ ಎಂದು ಕೆನಡಾದ ರಾಜತಾಂತ್ರಿಕ ಇಲಾಖೆ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts