More

    ಜ್ವರಕ್ಕಿಂತ ಕೊರೊನಾ ಕೆಟ್ಟದ್ದಾ, ಸೆಕ್ಸ್​ನಿಂದ ಸೋಂಕು ಬರುತ್ತಾ?: ಜನರ ನಾನಾ ಪ್ರಶ್ನೆಗೆ ಗೂಗಲ್​ ಉತ್ತರವೇನು?

    ವುಹಾನ್​: ಮಾರಕ ಕೊರೊನಾ ವೈರಸ್​ ಭೀತಿ ಜಗತ್ತಿನೆಲ್ಲೆಡೆ ಆವರಿಸಿದೆ. ಹೀಗಾಗಿ ವೈರಸ್​ ಸೋಂಕು ತಗುಲದೇ ಇರುವ ಹಾಗೇ ನೋಡಿಕೊಳ್ಳಲು ತಮಗಿರುವ ಕೆಲವು ಸಂದೇಹಗಳನ್ನು ಗೂಗಲ್​ ಮೂಲಕ ಹೋಗಿ ಸಾಕಷ್ಟು ಮಂದಿ ಪಡೆದುಕೊಂಡಿದ್ದಾರೆ. ಅಂತಹ ಆಸಕ್ತಿದಾಯಕ ಪ್ರಶ್ನೋತ್ತರಗಳು ಇಲ್ಲಿವೆ.

    ಕೊರೊನಾ ವೈರಸ್​ ಲಕ್ಷಣಗಳೇನು? ಜ್ವರಕ್ಕೂ ಅದಕ್ಕೂ ಇರುವ ವ್ಯತ್ಯಾಸವೇನು?
    ಕೊರೊನಾ ವೈರಸ್​​ನಲ್ಲಿ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಸೋಂಕು ತಗುಲಿನ 2 ರಿಂದ 14 ದಿನಗಳಲ್ಲಿ ಬಹಿರಂಗವಾಗುತ್ತದೆ. ಆದರೆ, ಜ್ವರ ಬಂದಾಗ ಶೀತ, ನೆಗಡಿ, ಕೆಮ್ಮು, ಗಂಟಲು ಕೆರೆತ ಹಾಗೂ ಮೂಗು ಸೋರುವುದು ಮತ್ತು ಕಟ್ಟುವುದು, ಮೈಕೈ ನೋವು, ತಲೆ ನೋವು, ವಾಂತಿ-ಭೇದಿಯಾಗುತ್ತದೆ. ಕೊರೊನಾ ಮತ್ತು ಜ್ವರ ಎರಡು ಸಣ್ಣದಾಗಿ ಆರಂಭವಾಗುತ್ತದೆ. ಆದರೆ ಎರಡು ಕೂಡ ಅಪಾಯಕಾರಿ ಎಂದು ಗೂಗಲ್​ ಉತ್ತರಿಸಿದೆ.

    ಕೊರೊನಾ ಏಕಾಏಕಿ ಸಂಭವಿಸಿದಾಗ ನಾನು ಏನನ್ನು ಸಂಗ್ರಹಿಸಿಕೊಳ್ಳಬೇಕು?
    ನೀರು, ಒಣ ಆಹಾರ ಸಿದ್ಧಪಡಿಸಿಕೊಳ್ಳಿ, ಚಿಪ್ಸ್​ ಮತ್ತು ಚಾಕೋಲೆಟ್​ ಕೂಡ ಒಳ್ಳೆಯದೇ. ಸಾಬೂನು, ಬಟ್ಟೆ ಸೋಪು, ಟಾಯ್ಲೆಟ್​ ಪೇಪರ್​, 30 ದಿನಕ್ಕೆ ಆಗುವಷ್ಟು ಔಷಧ, ಬೇಸರವಾದರೆ, ಪುಸ್ತಕ ಹಾಗೂ ಬೋರ್ಡ್​​ ಗೇಮ್ಸ್​ಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಿ ಎಂದು ಉತ್ತರಿಸಿದೆ.

    ಜ್ವರಕ್ಕಿಂತ ಕೊರೊನಾ ವೈರಸ್​ ಕೆಟ್ಟದ್ದಾ?
    ಜ್ವರಕ್ಕಿಂತ ಕೊರೊನಾ ಮರಣ ಪ್ರಮಾಣ ಅಧಿಕವಾಗಿದೆ. ಕೊರೊನಾ ರೋಗಿಗಳಲ್ಲಿ ಶೇ.3 ರಷ್ಟು ಮಂದಿ ಸತ್ತರೆ, ಜ್ವರ ಬಂದವರಲ್ಲಿ ಅದರ ಪ್ರಮಾಣ ಕೇವಲ 1ರಷ್ಟಿರುತ್ತದೆ. ಹೀಗಾಗಿ ಕೊರೊನಾ ತುಂಬಾ ಅಪಾಯಕಾರಿ.

    ಮಾಸ್ಕ್​ ಕೆಲಸ ಮಾಡಲಿದೆಯೇ?
    ರೋಗಕ್ಕೆ ತುತ್ತಾಗದೇ ಇದ್ದರೆ ಮಾಸ್ಕ್​ ಧರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಮಾಸ್ಕ್​ ತನ್ನಷ್ಟಕ್ಕೆ ಕಲುಷಿತಗೊಳ್ಳುವುದರಿಂದ ಮತ್ತು ಸೋಂಕಿನ ಮೂಲವಾಗಿ ಕೆಲಸ ಮಾಡುವುದರಿಂದ ಅದರಿಂದ ಒಳ್ಳೆಯದಕ್ಕಿಂತ ಅಪಾಯವೇ ಹೆಚ್ಚು. ವೈದ್ಯರು ಸೂಚಿಸಿದರೆ ಮಾತ್ರ ಮಾಸ್ಕ್​ ಬಳಸಿ. ಕೊರೊನಾ ಲಕ್ಷಣಗಳಿಂದ ಬಳಲುತ್ತಿರುವರು ಮಾತ್ರ ಮಾಸ್ಕ್​ ಉಪಯೋಗಿಸಬೇಕು.

    ಒಂದು ಕ್ಷಣ ಉಪಯೋಗಿಸಿದ ಮಾಸ್ಕ್​ ಅನ್ನು ಮರು ಬಳಸಬಹುದೇ? ಇಲ್ಲ ಅದನ್ನು ಎಸೆಯಬೇಕೆ?
    ಈಗಾಗಲೇ ಹೇಳಿದಂತೆ ಸೋಂಕು ತಗುಲದ ಸಾಮಾನ್ಯ ಜನರು ಮಾಸ್ಕ್​ ಉಪಯೋಗಿಸುವ ಅವಶ್ಯಕತೆ ಇಲ್ಲ.

    ಜ್ವರದ ಔಷಧ ಕೊರೊನಾ ವೈರಸ್​ ವಿರುದ್ಧ ರಕ್ಷಿಸಲಿದೆಯೇ?
    ಕೊರೊನಾ ತುಂಬಾ ವಿಭಿನ್ನವಾದ ವೈರಸ್​. ಎರಡು ಕೂಡ ವಿಭಿನ್ನವಾದ ವೈರಸ್​ ಆಗಿರುವುದರಿಂದ ರಕ್ಷಣೆಯ ನಿರೀಕ್ಷೆ ಸಾಧ್ಯವಿಲ್ಲ. ನಿಮಗೆ ಜ್ವರವಿದ್ದರೆ ಜ್ವರದ ಔಷಧಿ ಇತರೆ ವೈರಸ್​ನಿಂದ ರಕ್ಷಿಸುತ್ತದೆ ಹೊರತು. ಕೊರೊನಾ ವೈರಸ್​ನಿಂದಲ್ಲ.

    ಬೆಕ್ಕು ಮತ್ತು ನಾಯಿಯಿಂದ ಕೊರೊನಾ ಸೋಕು ತಗುಲುತ್ತದೆಯೇ?
    ಬಹಳಷ್ಟು ಕೊರೊನಾ ವೈರಸ್​ಗಳು ಸೇರಿದಂತೆ ನಮಗೆ ತಿಳಿದಿರುವ ಬಹಳಷ್ಟು ವೈರಸ್​ಗಳು ಪ್ರಾಣಿಗಳಲ್ಲಿ ಹುಟ್ಟಿಕೊಂಡಿವೆ. ಅದು ಬಾವಲಿಯಾಗಿರಬಹುದು, ಹಂದಿಯಾಗಿರಬಹುದು ಅಥವಾ ಚಿಕನ್ ಆಗಿರಬಹುದು, ಅದು ವೈರಸ್​ ಮೇಲೆ ನಿರ್ಧಾರವಾಗಿರುತ್ತದೆ.​ ಆದರೆ ಸಾಕು ಪ್ರಾಣಿಗಳಿಂದ ಮಾನವನಿಗೆ ಸೋಂಕು ತಗುಲುತ್ತದೆ ಎಂಬುದಕ್ಕೆ ಯಾವುದೇ ವರದಿಗಳು ಇಲ್ಲ.

    ಪ್ಯಾಕೇಜ್​ಗಳಿಂದ ಕೊರೊನಾ ವೈರಸ್​ ಬರುತ್ತದೆಯೇ?
    ಕೊರೊನಾ ವೈರಸ್​ ವಿವಿಧ ಮೇಲ್ಮೈಗಳಲ್ಲಿ ಬದುಕುತ್ತವೆ. ಹೆಚ್ಚಾಗಿ ಶೀತ ವಲಯದಲ್ಲಿ ಉತ್ತಮವಾಗಿ ಜೀವಿಸುತ್ತವೆ. ಸುಮಾರು 9 ದಿನಗಳವರೆಗೆ ಉಳಿದುಕೊಳ್ಳುತ್ತದೆ. ಬಹು ಕಾಲದವರೆಗೆ ವೈರಸ್​ ಮೇಲ್ಮೈನಲ್ಲಿ ಉಳಿಯುವುದರಿಂದ ಸರಿಯಾಗಿ ಕೈತೊಳೆಯುವುದರಿಂದ ತೊಂದರೆಯಾಗುವುದಿಲ್ಲ.

    ರಕ್ತದಿಂದ ಕೊರೊನಾ ವೈರಸ್​ ಸೋಂಕು ಹರಡಲಿದೆಯೇ?
    ಕೊರೊನಾ ಸೋಂಕು ತುಗಲಿದ ವ್ಯಕ್ತಿಯ ರಕ್ತವನ್ನು ಸ್ಪರ್ಶಿಸಿ ಅದನ್ನು ನಮ್ಮ ಬಾಯಿಗೆ, ಮೂಗಿಗೆ ಸ್ಪರ್ಶಿಸಿದರೆ ಸೋಂಕು ತಗುಲುವ ಸಾಧ್ಯತೆ ಇದೆ.

    ಸೆಕ್ಸ್​ನಿಂದ ಕೊರೊನಾ ವೈರಸ್​ ತಗುಲುತ್ತದೆಯೇ?
    ಲೈಂಗಿಕವಾಗಿ ಕೊರೊನಾ ವೈರಸ್​ ವರ್ಗಾವಣೆಯಾಗುತ್ತದೆ ಎಂಬುದಕ್ಕೆ ಯಾವುದೇ ಸೂಚನೆ ಇಲ್ಲ. ಆದರೆ, ರೋಗದ ಲಕ್ಷಣಗಳಿರುವ ವ್ಯಕ್ತಿಯೊಂದಿಗೆ ಹತ್ತಿರದ ಸಂಪರ್ಕ ಹೊಂದಿದರೆ, ಆಗ ಕೆಮ್ಮು, ಸೀನು, ನೆಗಡಿಯಿಂದ ಸೋಂಕು ಹರಡುವ ಸಾಧ್ಯತೆ ಇದೆ.

    ಬೆಳ್ಳುಳ್ಳಿ ತಿನ್ನುವುದು ಮತ್ತು ಮದ್ಯ ಸುರಿದುಕೊಳ್ಳುವುದರಿಂದ ಕೊರೊನಾ ತಡೆಗಟ್ಟಬಹುದೇ?
    ಬೆಳ್ಳುಳ್ಳಿ ಆರೋಗ್ಯಕ್ಕೆ ಉಪಯುಕ್ತ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಕೊರೊನಾ ವೈರಸ್​ ಮೇಲೆ ಅದು ಪ್ರಭಾವ ಬೀರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಇನ್ನು ಮದ್ಯವನ್ನು ದೇಹದ ಮೇಲೆ ಸುರಿದುಕೊಳ್ಳುವುದು ಒಳ್ಳೆಯದಲ್ಲ. ಅದರಿಂದ ಸೋಂಕು ಆಗುವ ಸಾಧ್ಯತೆ ಇರುತ್ತದೆ.

    ಹೀಗೆ ಅನೇಕ ಪ್ರಶ್ನೆಗಳನ್ನು ಜನರು ಗೂಗಲ್​ ಬಳಿ ಕೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ಗೂಗಲ್​ ಕೂಡ ಉಪಯುಕ್ತ ಉತ್ತರಗಳನ್ನು ನೀಡುವ ಮೂಲಕ ಜನರ ಗೊಂದಲಗಳನ್ನು ಬಗೆಹರಿಸಿದೆ. (ಏಜೆನ್ಸೀಸ್​)

    ಕೊರೊನಾ ವೈರಸ್​ ಬಗೆಗಿನ 13 ಕಟ್ಟುಕತೆಗಳಿಗೆ ಸ್ಪಷ್ಟನೆ ನೀಡಿ ಎಚ್ಚರಿಕೆ ಸಂದೇಶ ರವಾನಿಸಿದ ವಿಶ್ವ ಆರೋಗ್ಯ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts