More

    ಮಮತಾ ಸರ್ಕಾರದ ವಿರುದ್ಧದ ಜನಾಕ್ರೋಶದ ಅರಿವಾಗುತ್ತಿದೆ- ಪಶ್ಚಿಮ ಬಂಗಾಳದಲ್ಲಿ ಅಮಿತ್ ಷಾ

    ಬಂಕುರಾ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ಜನಾಕ್ರೋಶದ ಕಾವು ತೀವ್ರವಾಗಿದೆ. ಅದರ ಬಿಸಿಯ ಅನುಭವವೂ ಆಗುತ್ತಿದೆ ಎಂದು ಬಿಜೆಪಿ ನಾಯಕ ಅಮಿತ್ ಷಾ ಗುರುವಾರ ಹೇಳಿದ್ದಾರೆ.

    ಅವರು ಪಕ್ಷ ಸಂಘಟನೆಯ ದೃಷ್ಟಿಯಿಂದ ಪಶ್ಚಿಮ ಬಂಗಾಳ ಪ್ರವಾಸದಲ್ಲಿದ್ದು, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಬಡವರಿಗೆ ತಲುಪದಂತೆ ಮುಖ್ಯಮಂತ್ರಿ ಮಾಡಿದ್ದಾರೆ. ಯೋಜನೆಗಳ ಅನುಷ್ಠಾನಕ್ಕೆ ಅನೇಕ ಅಡ್ಡಿಗಳನ್ನು ಸೃಷ್ಟಿಸಿರುವ ಮಮತಾ ಬ್ಯಾನರ್ಜಿ ಜನ ಹಿತವನ್ನು ಕಡೆಗಣಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆಯುತ್ತಿರುವುದೂ ಗಮನದಲ್ಲಿದೆ ಎಂದು ಮಮತಾ ಸರ್ಕಾರದ ಕ್ರಮಗಳನ್ನು ಟೀಕಿಸಿದರು.

    ಇದನ್ನೂ ಓದಿ: ಬೆದರಿಕೆಗೆ ₹1 ಸಾವಿರ, ಕೊಲೆ ಮಾಡಲು ₹55 ಸಾವಿರ… ಹಲವು ‘ಸೇವೆ’ ನಮ್ಮಲ್ಲಿ ಲಭ್ಯ…

    ನಿನ್ನೆ ರಾತ್ರಿಯಿಂದ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಸರ್ಕಾರದ ವಿರುದ್ಧ ಜನಾಕ್ರೋಶದ ಬಿಸಿ ತೀವ್ರವಾಗಿದೆ. ಅದು ನಮಗೂ ಅಂದಾಜಾಗುತ್ತಿದೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಈ ರಾಜ್ಯದಲ್ಲೂ ನಾವು ಬದಲಾವಣೆ ತರುತ್ತೇವೆ ಎಂಬ ವಿಶ್ವಾಸವಿದೆ ಎಂದು ಷಾ ಹೇಳಿದ್ದಾರೆ. (ಏಜೆನ್ಸೀಸ್)

    ಕರ್ನಾಟಕ, ತಮಿಳುನಾಡಿನ ಎರಡು ಸಹಕಾರಿ ಬ್ಯಾಂಕ್​ಗಳಿಗೆ 15 ಲಕ್ಷ ರೂಪಾಯಿ ದಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts