More

    ಯಾರ ಮೇಲೆ ನಂಬಿಕೆ ಇದೆಯೋ ಅವರನ್ನೇ ಆಯ್ಕೆ ಮಾಡಲಿ: ರಾಜೀನಾಮೆ ನೀಡಿದ ಕ್ಯಾಪ್ಟನ್​ ಉದ್ಗಾರ

    ಚಂಡೀಗಢ: ಪಂಜಾಬ್​ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತನ್ಮೂಲಕ ತಮ್ಮ ವಿರುದ್ಧ ಆಗಾಗ್ಗೆ ಬಂಡೇಳುತ್ತಿದ್ದ ಕಾಂಗ್ರೆಸ್​ ಶಾಸಕರ ನಾಯಕತ್ವ ಬದಲಾವಣೆಯ ಆಗ್ರಹಕ್ಕೆ ತಾರ್ಕಿಕ ಅಂತ್ಯ ಹಾಡಿದ್ದಾರೆ. ಪಂಜಾಬ್​ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಸಮಯದಲ್ಲಿ ಈ ಮಹತ್ವದ ಬೆಳವಣಿಗೆ ಕಂಡುಬಂದಿದೆ.

    ಇಂದು ತಮ್ಮ ಅಧಿಕೃತ ನಿವಾಸದಲ್ಲಿ ತಮ್ಮ ನಿಷ್ಠಾವಂತ ಶಾಸಕರೊಂದಿಗೆ ಸಭೆ ನಡೆಸಿದ ನಂತರ ರಾಜಭವನಕ್ಕೆ ತೆರಳಿದ ಅಮರಿಂದರ್​ ಸಿಂಗ್​, ಪಂಜಾಬ್​ ರಾಜ್ಯಪಾಲರಾದ ಬನ್​ವಾರಿಲಾಲ್​ ಪುರೋಹಿತ್​ ಅವರಿಗೆ ತಮ್ಮ ಮತ್ತು ತಮ್ಮ ಸಚಿವ ಸಂಪುಟದ ರಾಜೀನಾಮೆ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಲಂಚ ಪಡೆಯುತ್ತಿದ್ದ ಇಂಜಿನೀಯರ್ ಎಸಿಬಿ ಬಲೆಗೆ

    ರಾಜೀನಾಮೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕ್ಯಾಪ್ಟನ್​, “ನಾನು ಇಂದು ಬೆಳಿಗ್ಗೆಯೇ ನಿರ್ಣಯ ತೆಗೆದುಕೊಂಡಿದ್ದೆ. ನಾನು ಕಾಂಗ್ರೆಸ್​ ಅಧ್ಯಕ್ಷರಿಗೆ ಹೇಳಿದ್ದೆ – ಇಂದು ನಾನು ರಾಜೀನಾಮೆ ಕೊಡುತ್ತೇನೆಂದು” ಎಂದರು.

    “ಕೆಲವೇ ತಿಂಗಳಲ್ಲಿ ನನ್ನ ವಿರುದ್ಧ ಹಲವು ಬಾರಿ ಸಭೆ ನಡೆಸಲಾಗಿದೆ… ಇಂದು ಮೂರನೇ ಬಾರಿ ಅದೇ ರೀತಿಯ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ನನ್ನ ಬಗ್ಗೆ ಏನೋ ಸಂಶಯ ಇದೆ…. ಇದೆಲ್ಲದರಿಂದ ನನಗೆ ತುಂಬಾ ಅವಮಾನವಾದಂತಾಗಿದೆ. ಆದ್ದರಿಂದ ನಾನು ಮುಖ್ಯಮಂತ್ರಿ ಸ್ಥಾನ ತ್ಯಜಿಸುವ ನಿರ್ಧಾರ ತೆಗೆದುಕೊಂಡಿದ್ದೇನೆ. ಅವರಿಗೆ ಯಾರ ಮೇಲೆ ನಂಬಿಕೆ ಇದೆಯೋ ಅವರನ್ನೇ ಆಯ್ಕೆ ಮಾಡಿಕೊಳ್ಳಲಿ” ಎಂದು ಕ್ಯಾಪ್ಟನ್​ ಅಮರೀಂದರ್​ ಸಿಂಗ್ ಉದ್ಗರಿಸಿದರು. (ಏಜೆನ್ಸೀಸ್)

    “ನನ್ನ ಬರ್ತ್​ಡೇಗೆ ದಾಖಲೆ ಲಸಿಕೆ ನೀಡಿದ್ದಕ್ಕೆ ಒಂದು ರಾಜಕೀಯ ಪಕ್ಷಕ್ಕೆ ಜ್ವರ ಬಂತು”

    ನಟ ಸೋನು ಸೂದ್​​ಗೆ ಐಟಿ ಕಂಟಕ: 20 ಕೋಟಿ ರೂ. ತೆರಿಗೆ ವಂಚನೆ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts