More

    ಐಟಿ ದಾಳಿ ಬಗ್ಗೆ ಪ್ರಚಾರ, ಲೋಕಾಯುಕ್ತ ಮೆಟ್ಟಿಲೇರಿದ ಕಾಂಗ್ರೆಸ್!

    ಬೆಂಗಳೂರು: ಆದಾಯ ತೆರಿಗೆ ಇಲಾಖೆಯು ರಾಜ್ಯದಲ್ಲಿ ದಾಳಿ ನಡೆಸಿ ಅಕ್ರಮ ಹಣ ಸಂಗ್ರಹಣೆ ಬಗ್ಗ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಬಿಜೆಪಿ ನಾಯಕರು ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ಕಾಂಗ್ರೆಸ್ ಮುಖಂಡರು ಮತ್ತು ಸರ್ಕಾರದ ವಿರುದ್ಧ ಮಾಡಿರುವ ಆರೋಪ ಸಂಬಂಧ ತನಿಖೆ ನಡೆಸುವಂತೆ ಕೆಪಿಸಿಸಿ ಲೋಕಾಯುಕ್ತರಿಗೆ ಮನವಿ ಸಲ್ಲಿಸಿದೆ.
    ಮಂಗಳವಾರ ಲೋಕಾಯುಕ್ತ ಕಚೇರಿಗೆ ಭೇಟಿಕೊಟ್ಟಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೇತೃತ್ವದ ನಿಯೋಗ, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಹೇಳಿಕೆಗಳನ್ನೊಳಗೊಂಡ ದೂರನ್ನು ಲೋಕಾಯುಕ್ತರಿಗೆ ಸಲ್ಲಿಸಿತು.
    ಕೂಡಲೇ ಪ್ರಕರಣ ದಾಖಲಿಸಿ, ಆರೋಪ ಮಾಡಿದ ನಾಯಕರನ್ನು ಬಂಧಿಸಿ ಮಾಹಿತಿ ಸಂಗ್ರಹಿಸಿ, ತನಿಖೆ ನಡೆಸಿ ರಾಜ್ಯದ ಜನರಿಗೆ ತಪ್ಪಿತಸ್ಥರು ಯಾರು, ಯಾವ ಪಕ್ಷದಲ್ಲಿದ್ದಾರೆಂದು ಬಹಿರಂಗಪಡಿಸಬೇಕೆಂದು ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನಲ್ಲಿ ಒತ್ತಾಯಿಸಿದ್ದೇವೆ ಎಂದು ಮನೋಹರ್ ತಿಳಿಸಿದ್ದಾರೆ.
    ಆದಾಯ ತೆರಿಗೆ ಇಲಾಖೆ ಅಕ್ರಮ ಹಣ ಸಂಗ್ರಹಣೆ ಬಗ್ಗೆ ತನಿಖೆ ನಡೆಸುತ್ತಿರುವಾಗಲೇ ಬಿಜೆಪಿ ನಾಯಕರು ಹಾಗೂ ಎಚ್. ಡಿ ಕುಮಾರಸ್ವಾಮಿ ಮತ್ತು ಕೆಲವು ನಾಯಕರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವು ಅಧಿಕೃತ ಮಾಹಿತಿಗಳನ್ನು ಪಕ್ಷದ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿಕೊಂಡಿವೆ. ಹೀಗಾಗಿ ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
    ಆದಾಯ ತೆರಿಗೆ ಇಲಾಖೆಯವರು ಕೈಗೊಂಡ ತನಿಖಾ ವರದಿಯನ್ನು ಪ್ರಕಟಿಸಿದ್ದಾರೆ. ಅದರ ಪ್ರಕಾರ ಸಂಗ್ರಹವಾಗಿರುವ ಹಣಕ್ಕೂ ಕಾಂಗ್ರೆಸ್‌ಗೂ ಸಂಬಂಧ ಇರುವುದಿಲ್ಲ. ಆದರೆ, ಬಿಜೆಪಿ ತನ್ನ ಜಾಲತಾಣದಲ್ಲಿ ಪಂಚ ರಾಜ್ಯ ಚುನಾವಣೆಗೆ ಹೈಕಮಾಂಡ್‌ಗೆ ಕೊಟ್ಟಿರುವ ಮೊದಲ ಕಂತು ಸಾವಿರ ಕೋಟಿ ಟಾರ್ಗೆಟ್, ಯಾವ ರಾಜ್ಯಕ್ಕೆ ಎಷ್ಟು ಎಂದು ಮಾಹಿತಿ ಪ್ರಕಟಿಸಿದ್ದಾರೆ. ಇದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts