More

    ಒಂಟೆ ಸವಾರಿ ಬಲು ಖುಷಿರಿ ಬಯಲು ಸೀಮೆಯಲ್ಲೂ ಕ್ಯಾಮಲ್ ಕಮಾಲ್

    ನರೇಗಲ್ಲ: ಮರುಳುಗಾಡಿನಲ್ಲಿ ಓಡುವ ಕುದರೆಗಳು ಎಂಬ ಖ್ಯಾತಿಯ ಒಂಟೆಗಳು ಈಗ ಬಯಲು ಸೀಮೆಯ ನಾಡಿಗೆ ಲಗ್ಗೆ ಇಟ್ಟು ಚಿಣ್ಣರನ್ನು ರಂಜಿಸುತ್ತಿವೆ. ಒಂಟೆ ಸವಾರಿಯ ಮೋಜು ಪಡೆದ ಮಕ್ಕಳು ಕೇಕೇ ಹಾಕಿ ನಗುತ್ತಿದ್ದಾರೆ.


    ಪಟ್ಟಣದಲ್ಲಿ ಒಂಟೆ ನಿಧಾನವಾಗಿ ಹೆಜ್ಜೆ ಮೇಲೊಂದು ಹೆಜ್ಜೆ ಹಾಕುತ್ತಾ ಉದ್ದನೆಯ ಕತ್ತನ್ನು ಮೇಲೆ ಕೆಳಗೆ ಬಳುಕಿಸುತ್ತಾ, ಉಸ್ ಎಂದು ಉದ್ದನೆಯ ಉಸಿರು ಎಳೆದುಕೊಳ್ಳುತ್ತಾ ಸಾಗುತ್ತಿದೆ.

    ಒಂಟೆ ಕಂಡು ಮಕ್ಕಳು ಖುಷಿಯಿಂದ ಓಡಿ ಬರುತ್ತಿದ್ದಾರೆ. ಒಂಟೆ ಸುತ್ತುವರಿದು ಸವಾರಿಗಾಗಿ ತಡವರಿಸುತ್ತಿದ್ದಾರೆ. ಪಾಲಕರಿಂದ ಹಣ ಪಡೆದು ಒಂಟೆ ಮಾಲೀಕನಿಗೆ ಕೊಟ್ಟು ಒಂಟೆ ಮೇಲೇರಿ ಸಂಭ್ರಮಿಸುತ್ತಿದ್ದಾರೆ.


    ಮರಭೂಮಿ ನಿವಾಸಿಗಳಿಗೆ ಹೆಚ್ಚು ಆಧಾರವಾದ ಒಂಟೆಗಳು ಪಟ್ಟಣದ ಎಲ್ಲ ಓಣಿಗಳಲ್ಲಿ ಹೆಜ್ಜೆ ಹಾಕಿವೆ. ಅದರ ಹಿಂದೆ ಮಕ್ಕಳ ಹಿಂಡು ಹಿಂಬಾಲಿಸುತ್ತಿದೆ. ಮಕ್ಕಳನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಕಾಲಿಗೆ ಕಟ್ಟಿರುವ ಗೆಜ್ಜೆನಾದ ಜತೆ ಅತ್ತಿಂದಿತ್ತ ಇತ್ತಿಂದತ್ತ ಹೆಜ್ಜೆ ಹಾಕುವ ಒಂಟೆ ಎಲ್ಲರ ಗಮನ ಸೆಳೆದಿದೆ. ಓಡಾಡಿಸುವ ಮಾಲೀಕನ ಅಣತಿ ಪಾಲಿಸುತ್ತಿದ್ದ ಒಂಟೆಯ ಬಗ್ಗೆ ಜನರಿಗೆ ಇನ್ನಿಲ್ಲದ ಕುತೂಹಲ ಮೂಡಿಸಿದೆ.


    ಮಕ್ಕಳಿಗೆ ಒಂಟೆ ಇಷ್ಟ: ಮಕ್ಕಳಿಗೆ ಒಂಟೆ ಇಷ್ಟವಾಗಲು ಒಂದಲ್ಲ ಹತ್ತು ಕಾರಣಗಳು ಸಿಗುತ್ತವೆ. ಒಂಟೆಯ ನಿಲುವು, ಎಂಥ ಕಷ್ಟಕ್ಕೂ ಜಗ್ಗದ ಪರಿಶ್ರಮದ ಬದುಕು. ಸನ್ನಿವೇಶಕ್ಕೆ ಹೊಂದಿಕೊಂಡು ಬದುಕುವ ಕಲೆ, ಬಲಾಢ್ಯದಿಂದ ಜನರನ್ನು ಆಕರ್ಷಿಸುತ್ತಿವೆ. ಚದುರಂಗ ಆಟದಲ್ಲಿ ಉಪಯೋಗಿಸುವ ಕಾಯಿಗಳಲ್ಲಿ ಒಂದಾದ ಒಂಟೆ, ನೀರೇ ಇಲ್ಲದ ವರ್ಷಕ್ಕೆ 10 ಮಿ.ಮೀ. ಮಳೆ ಬೀಳುವ ಮರಳುಗಾಡಿನಲ್ಲಿ ಹೇಗೆ ಬದುಕುತ್ತವೆ ಎಂಬುದೇ ವಿಶೇಷ.


    ಆಕರ್ಷಿಸುವ ಪ್ರಾಣಿ

    ಒಂಟೆ ಮರುಳುಗಾಡಿನ ಏಕೈಕ ವಾಹನವಾಗಿದೆ. ಅದರ ದೊಡ್ಡ- ದೊಡ್ಡ ಕಣ್ಣುಗಳು ಹಗಲಲ್ಲೂ ಇರುಳಲ್ಲೂ ದೂರದ ತನಕ ನೋಡುತ್ತವೆ. ಕಣ್ಣುಗಳಂತೆಯೇ ಒಂಟೆಗಳು ಮೂಗು ಮತ್ತು ಕಿವಿಯೂ ವಿಶಿಷ್ಟ ಪೂರ್ಣತೆಯಿಂದ ಮಕ್ಕಳು ಸಹಿತ ನಾಗರಿಕರನ್ನು ತನ್ನತ್ತ ಸೆಳೆಯುತ್ತಿವೆ. ವರ್ಷದಲ್ಲಿ 10 ತಿಂಗಳು ಒಂಟೆ ಸವಾರಿಯನ್ನೇ ತಮ್ಮ ಉದ್ಯೋಗವನ್ನಾಗಿಸಿಕೊಂಡು ಪಟ್ಟಣ ಸೇರಿ ನಗರ ಪ್ರದೇಶಗಳಿಗೆ ಅಲೆದಾಡುತ್ತಾ ಅಲೆಮಾರಿ ಜೀವನ ನಡೆಸುತ್ತಿದ್ದಾರೆ. ಒಂಟೆಗಳ ಮೂಲಕ ನಿತ್ಯ ಪ್ರಮುಖ ಬೀದಿಗಳಲ್ಲಿ ಸಂಚಾರ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts