More

    ಕೊಲ್ಲೂರಿಂದ ಕೊಡಚಾದ್ರಿಗೆ ಕೇಬಲ್ ಕಾರ್

    ಕುಂದಾಪುರ: ಕೊಡಚಾದ್ರಿ ಬೆಟ್ಟ ಏರಲು ರಸ್ತೆ ಇದ್ದರೂ, ಜೀಪ್ ಬಿಟ್ಟರೆ ಬೇರೆ ವಾಹನ ಇಲ್ಲ. ಕಡಿದಾದ ರಸ್ತೆ ವಿಸ್ತರಣೆಗೆ ಪರಿಸರ ನಾಶ, ಬೆಟ್ಟದ ಸವಕಳಿ ಹಾಗೂ ಪರಿಸರ ಸೌಂದರ್ಯಕ್ಕೆ ಧಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ಸಂಪರ್ಕ ವ್ಯವಸ್ಥೆಗೆ ಹಿನ್ನೆಡೆಯಾಗಿತ್ತು. ಆದರೆ ಈಗ ಕೇಬಲ್ ಕಾರ್ ಸಂಪರ್ಕದಿಂದ ಸುಲಭವಾಗಿ ಕೊಡಚಾದ್ರಿ ಬೆಟ್ಟದ ನೆತ್ತಿ ಮೇಲೆ ಏರಬಹುದು. ಈ ಮಹತ್ವಾಕಾಂಕ್ಷಿ ಯೋಜನೆಯ ಡಿಪಿಆರ್‌ಗೆ ಸೆ.15ರಂದು ಬೆಳಗ್ಗೆ 8ಕ್ಕೆ ಶಾಸಕ ಬಿ.ಎಂ ಸುಕುಮಾರ ಶೆಟ್ಟಿಯವರು ಚಾಲನೆ ನೀಡುವರು.

    ಯೋಜನೆ ಅನುಷ್ಠಾನವಾದರೆ, ಕೊಲ್ಲೂರಿಂದ ಕೊಡಚಾದ್ರಿ ಬೆಟ್ಟದ ನೆತ್ತಿಯೇರಲು 15 ನಿಮಿಷ ಸಾಕು. ಹೊಸನಗರ ತಾಲೂಕು ವ್ಯಾಪ್ತಿಯ ಕೊಡಚಾದ್ರಿ ಬೆಟ್ಟದಿಂದ ಕೊಲ್ಲೂರಿಗೆ ಕೇಬಲ್ ಕಾರು ಸಂಪರ್ಕ ವ್ಯವಸ್ಥೆ ಕಲ್ಪಿಸುವ ಯೋಜನೆ ಸಂಸದ ಬಿ.ವೈ.ರಾಘವೇಂದ್ರ ಅವರ ಕನಸಿನ ಕೂಸು. ಕೊಲ್ಲೂರು ಮತ್ತು ಕೊಡಚಾದ್ರಿ ರಸ್ತೆ ಮಾರ್ಗ 32 ಕಿ.ಮೀ ಇದ್ದು, ಕೇಬಲ್ ಕಾರ್ ಮೂಲಕ ಹೋದರೆ 11 ಕಿ.ಮೀ. ಪರಿಸರದ ರಮ್ಯ ನೋಟಗಳ ನಡುವೆ ರೋಚಕ ಪ್ರಯಾಣದ ಅನುಭವ ಸಿಗುವ ಜತೆಗೆ, ಸಮಯವೂ ಉಳಿಯಲಿದೆ. ಪ್ರವಾಸೋದ್ಯಮ ಇಲಾಖೆ ಕೇಬಲ್ ಕಾರ್ ಯೋಜನೆಯ ಅನುಷ್ಠಾನ ಬಗ್ಗೆ ಸಮೀಕ್ಷೆ ನಡೆಸಿ ಪರಿಸರ ಅರಣ್ಯ ಇಲಾಖೆಗಳಿಂದ ನಿರಾಕ್ಷೇಪಣ ಪತ್ರ ಹಾಗೂ ಕೇಂದ್ರ ಸರ್ಕಾರದ ಅನುಮತಿ ಸಿಗುವ ನಿರೀಕ್ಷೆಯಲ್ಲಿ ಸಂಸದರಿದ್ದಾರೆ.

    ಕೊಡಚಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣದ ಯೋಜನೆ ಸಿದ್ಧಪಡಿಸಲಾಗುತ್ತಿದೆ. ರೋಪ್ ವೇ ಯೋಜನೆ ಪೂರ್ಣಗೊಂಡರೆ ಬೆಟ್ಟದ ಬುಡದಿಂದ 15 ನಿಮಿಷದಲ್ಲಿ ಸರ್ವಜ್ಞ ಪೀಠ ತಲುಪಬಹುದು. ಪ್ರಸ್ತಾವನೆ ರಚಿಸಿ, ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಹಲವು ಇಲಾಖೆಗಳ ಜತೆಗೆ ಮಾತುಕತೆ ನಡೆಸಲಾಗಿದೆ. ಅರಣ್ಯ ನಾಶವಾಗುವುದಿಲ್ಲ, ಜತೆಗೆ ರೋಪ್ ವೇ ನಿರ್ಮಾಣದಿಂದ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ.
    ಬಿ.ವೈ.ರಾಘವೇಂದ್ರ, ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts