More

    ಕೇಂದ್ರ ಸಚಿವ ಸಂಪುಟ ಪುನಾರಚನೆ: ನೂತನ ಸಚಿವರ ಪದಗ್ರಹಣ; ಕರ್ನಾಟಕದ ನಾಲ್ವರಿಗೆ ಸ್ಥಾನ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಪುನರ್​ ರಚನೆ ಆಗಿದ್ದು, 43 ಹೊಸ ಹಾಗೂ ಹಳೆಯ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದ 4 ನಾಯಕರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

    ಕೇಂದ್ರ ಸಚಿವರಾಗಿ ನಾರಾಯಣ ರಾಣೆ ಅವರು ಮೊದಲಿಗರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

    ನಾರಾಯಣ ರಾಣೆ ನಂತರ ಅಸ್ಸಾಂನ ಮಾಜಿ ಸಿಎಂ ಆದ ಸರ್ಬಾನಂದ ಸೋನಾವಾಲ್​, ಡಾ.ವಿರೇಂದ್ರ ಕುಮಾರ್, ಜ್ಯೋತಿರಾದಿತ್ಯ ಮಾಧವರಾವ್ ಸಿಂಧಿಯಾ, ಆರ್​.ಪಿ.ಸಿಂಗ್, ಅಶ್ವಿನಿ ವೈಷ್ಣವ್, ಪಶುಪತಿ ಕುಮಾರ ಪಾರಸ್​, ಕಿರೆಣ್ ರಿಜಿಜು, ರಾಜಕುಮಾರ್ ಸಿಂಗ್, ಹರದೀಪ್​ಸಿಂಗ್ ಪುರಿ, ಪುರುಷೋತ್ತಮ್ ರೂಪಾಲಾ​ ಅವರು ಕ್ರಮವಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಜಿ.ಕಿಶನ್ ರೆಡ್ಡಿ, ಈ ಹಿಂದೆ ಹಣಕಾಸು ಖಾತೆಯ ರಾಜ್ಯ ಸಚಿವರಾಗಿದ್ದ ಅನುರಾಗ್ ಠಾಕೂರ್​, ಪಶ್ಚಿಮ ಬಂಗಾಳ ಮೂಲದ ಅನುಪ್ರಿಯಾ ಸಿಂಗ್ ಪಟೇಲ್​, ಉತ್ತರ ಪ್ರದೇಶದ ಆಗ್ರಾದ ಸಂಸದರಾದ ಸತ್ಯಪಾಲ್ ಸಿಂಗ್ ಬಘೇಲ್ ಪ್ರಮಾಣ ವಚನ ಸ್ವೀಕರಿಸಿದರು.

    ಆಂಗ್ಲಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ
    ಕರ್ನಾಟಕ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರ ಶೇಖರ್, ಉಡುಪಿ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ. ಚಿತ್ರದುರ್ಗದ ಸಂಸದರಾಗಿರುವ ಎ.ನಾರಾಯಣಸ್ವಾಮಿ ಆಂಗ್ಲಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಬೀದರ್​ ಸಂಸದ ಭಗವಂತ ಖೂಬಾ ಈಶ್ವರನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts