More

    ಕೇಂದ್ರ ಬಜೆಟ್ 2020ಕ್ಕೆ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ: ಸಂಸತ್ ಭವನದ ಎದುರು ಹಳದಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ಸಚಿವೆ

    ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಶನಿವಾರ ಬೆಳಗ್ಗೆ ಕೇಂದ್ರ ಬಜೆಟ್ 2020 ಮಂಡನೆಗೆ ಅನುಮೋದನೆಯನ್ನು ನೀಡಿದೆ. ಈ ಮುಂಗಡ ಪತ್ರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸುತ್ತಿದ್ದಾರೆ.

    ಕೇಂದ್ರ ಬಜೆಟ್ 2020ಕ್ಕೆ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ: ಸಂಸತ್ ಭವನದ ಎದುರು ಹಳದಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ಸಚಿವೆ

    ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಇದನ್ನು ಮಂಡಿಸುವ ಮುನ್ನ ತಮ್ಮ ತಂಡದೊಂದಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರನ್ನು ಭೇಟಿ ಮಾಡಿದ್ದಾರೆ. ಇದು ಅವರು ಮಂಡಿಸುತ್ತಿರುವ ಎರಡನೇ ಮುಂಗಡಪತ್ರ. ರಾಷ್ಟ್ರಪತಿಯವರನ್ನು ಭೇಟಿ ಮಾಡಿದಾಗ ನಿರ್ಮಲಾ ಅವರ ಜತೆಗೆ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್​, ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಮತ್ತು ಸಚಿವಾಲಯದ ಇತರೆ ಹಿರಿಯ ಅಧಿಕಾರಿಗಳು ಜತೆಗೆ ಇದ್ದರು.

    ಕಳೆದ ಸಲದಂತೆಯೇ ಈ ಸಲವೂ ಅವರು ಕೆಂಪು ಬಣ್ಣದ ಬಟ್ಟೆಯಲ್ಲಿ ಬಜೆಟ್ ಡಾಕ್ಯುಮೆಂಟ್​ಗಳನ್ನು ಸುತ್ತಿಕೊಂಡು ಸಂಸತ್ತಿಗೆ ಆಗಮಿಸಿದ್ದಾರೆ. ಕ್ರಿಸ್ಪ್ ಹಳದಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ವಿತ್ತ ಸಚಿವೆ, ಸಂಸತ್​ ಭವನದ ಗೇಟ್ ಎದುರು ಕೆಂಪು ರೇಷ್ಮೆ ಬಟ್ಟೆಯಲ್ಲಿ ಸುತ್ತಿ ಗೋಲ್ಡನ್ ಕಲರ್​ನ ಭಾರತದ ಲಾಂಛನ ಹೊಂದಿದ ಬಜೆಟ್​ ಡಾಕ್ಯುಮೆಂಟ್​ಗಳನ್ನು ಕ್ಯಾಮೆರಾಮೆನ್​ಗಳ ಕಡೆಗೆ ತೋರಿಸಿ ಪೋಸ್​ ನೀಡಿದ್ದರು.

    ಈ ಮುಂಗಡ ಪತ್ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಹನ್ನೊಂದು ವರ್ಷಗಳ ಅವಧಿಯಲ್ಲೇ ಕನಿಷ್ಠ ಮಟ್ಟ ತಲುಪಿದ ಆರ್ಥಿಕ ಮಂದಗತಿಗೆ ಪರಿಹಾರವನ್ನು ಈ ಬಜೆಟ್ ಹೊಂದಿದೆ ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts