More

    ಕ್ಯಾಬೇಜ್ ಸುರಿದು ರೈತರ ಪ್ರತಿಭಟನೆ

    ಬೆಳಗಾವಿ: ದರ ಕುಸಿತದಿಂದ ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಎಲೆಕೋಸು (ಕ್ಯಾಬೇಜ್) ಸುರಿದು ಸೋಮವಾರ ಪ್ರತಿಭಟನೆ ನಡೆಸಿದರು. ಬಳಿಕ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

    ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ಪ್ರತಿಭಟಿಸಿದ ಬೆಳೆಗಾರರು, ನೆರೆ ನೋವಿನ ಮಧ್ಯೆಯೇ ಕಡೋಲಿ ಮತ್ತು ದೇವಗಿರಿ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಲೆಕೋಸು ಬೆಳೆಯಲಾಗಿದೆ. ಆದರೆ, ಬೆಳಗಾವಿ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ಕೇವಲ 50 ಪೈಸೆ ದರ ನಿಗದಿಪಡಿಸಿದ್ದಾರೆ.

    ಈ ಕನಿಷ್ಠ ಹಣದಿಂದ ಬೆಳೆಗಾಗಿ ಮಾಡಿದ ವೆಚ್ಚವೂ ದಕ್ಕುವುದಿಲ್ಲ. ಇದರಿಂದ ಆರ್ಥಿಕ ಮುಗ್ಗಟ್ಟು ಎದುರಿಸುವಂತಾಗಿದೆ. ಸರ್ಕಾರ ತಕ್ಷಣವೇ ನೆರವಿಗೆ ಧಾವಿಸಿ, ಸೂಕ್ತ ಪರಿಹಾರ ವಿತರಿಸಬೇಕು. ತರಕಾರಿ ಬೆಳೆಗಳಿಗೂ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.

    ಸಂಘದ ತಾಲೂಕು ಘಟಕ ಅಧ್ಯಕ್ಷ ಅಪ್ಪಾಸಾಬ ದೇಸಾಯಿ, ಸುಭಾಷ ದಾಯಗೊಂಡೆ, ಬಾಳು ಮಾಯಣ್ಣ, ರಾಮಚಂದ್ರ ಫಡಕೆ, ರಾಮನಗೌಡ ಪಾಟೀಲ, ಟೋಪಣ್ಣ ಬಸರಿಕಟ್ಟಿ, ಮಾರುತಿ ಬುರಲಿ, ನಾಮದೇವ ದುಡಂ, ನಿಂಗಪ್ಪ ಚುರಮುರಿ, ರಾಜು ಕಾಗಣಿಕರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts