More

    ಪ್ರಧಾನಿ ಮೋದಿ- ಅಧ್ಯಕ್ಷ ಟ್ರಂಪ್ ಸಿಎಎ ಕುರಿತು ಚರ್ಚಿಸಿದರೇ?; ವಿದೇಶಾಂಗ ಕಾರ್ಯದರ್ಶಿ ಹೇಳಿದ್ದೇನು?

    ನವದೆಹಲಿ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳು ಮುಂದುವರಿದಿರುವ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾರತ ಪ್ರವಾಸ ಕೈಗೊಂಡಿರುವುದರಿಂದ ಸಹಜವಾಗಿಯೇ ಸಿಎಎ ಬಗ್ಗೆ ಟ್ರಂಪ್​ ಏನಾದರು ಉಲ್ಲೇಖ ಮಾಡುತ್ತಾರೆಯೇ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. ಆದರೆ, ಆ ರೀತಿಯಾದ ಯಾವುದೇ ಚರ್ಚೆಗಳು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್​ ನಡುವಿನ ದಿಪಕ್ಷೀಯ ಸಭೆಯಲ್ಲಿ ನಡೆದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್​ ಶ್ರಿಂಗ್ಲಾ ಮಂಗಳವಾರ ತಿಳಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಭೆಯಲ್ಲಿ ಸಿಎಎ ವಿಚಾರ ಪ್ರಸ್ತಾಪವಾಗಲೇ ಇಲ್ಲ. ಧಾರ್ಮಿಕ ಸ್ವಾತಂತ್ರ್ಯ ಕುರಿತು ಉಭಯ ದೇಶಗಳು ಮೆಚ್ಚುಗೆಯನ್ನು ಸೂಚಿಸಿದವು. ಬಹುತ್ವ ಮತ್ತು ವೈವಿಧ್ಯತೆಯು ಉಭಯ ರಾಷ್ಟ್ರಗಳ ಸಾಮಾನ್ಯ ಸಂಕೋಲೆಯ ಸಂಗತಿಯಾಗಿದೆ ಎಂದರು.

    ಗಡಿ ಭಯೋತ್ಪಾದನೆ, ಮಾದಕ ವಸ್ತು ಜಾಲ ಹಾಗೂ ಭಯೋತ್ಪದಾನೆಗೆ ಹಣಕಾಸಿನ ನೆರವಿನಂತಹ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಧನಾತ್ಮಕ ಬೆಳವಣಿಗೆ ಕುರಿತಾದ ಶ್ರೇಷ್ಠ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಸರಿಯಾದ ಮಾರ್ಗದಲ್ಲಿ ನಡೆಸುವಂತಹ ಒಪ್ಪಂದಗಳೆಡೆ ಮಾತ್ರ ಗಮನ ನೀಡಲಾಯಿತು ಎಂದು ಹರ್ಷವರ್ಧನ್​ ಶ್ರಿಂಗ್ಲಾ ಅವರು ಮಾಹಿತಿ ನೀಡಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts