More

    ಪದೇಪದೇ ತಿರಸ್ಕಾರಗೊಂಡವರಿಂದ ದಂಗೆಕೋರರ ಮೇಲೆ ಸಹಾನುಭೂತಿ ಏಕೆ?; ಯೋಗಿ ಆದಿತ್ಯನಾಥ ಪ್ರಶ್ನೆ

    ಲಖನೌ (ಉತ್ತರಪ್ರದೇಶ): ಪದೇಪದೇ ಜನರಿಂದ ತಿರಸ್ಕಾರಗೊಂಡವರು ಸಮಾಧಾನದ ರಾಜಕಾರಣ ಮಾಡುತ್ತಿದ್ದಾರೆ. ಮತ್ತು ಅವರು ದಂಗೆಕೋರರಿಗೆ ಸಹಾನುಭೂತಿ ತೋರುತ್ತಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಿಡಿಕಾರಿದ್ದಾರೆ.

    ಸಾರ್ವಜನಿಕರ ಆಸ್ತಿಯನ್ನು ಧ್ವಂಸ ಮಾಡಿದವರ ಮೇಲೇಕೆ ನಿಮಗೆ ಸಹಾನುಭೂತಿ? ದೇಶದ ಶಾಂತಿ, ಭದ್ರತೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಗಲಭೆಕೋರರು, ಗೂಂಡಾಗಳೊಂದಿಗೆ ಏಕೆ ನಿಂತಿದ್ದೀರಿ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಚೇರಿಯ ಟ್ವೀಟ್ ಪ್ರಶ್ನಿಸಿದೆ.

    ಜನ ನಿಮ್ಮನ್ನು ನೋಡುತ್ತಿದ್ದಾರೆ. ಅವರಿಗೆ ಇದೆಲ್ಲ ಅರ್ಥವಾಗುತ್ತದೆ. ಜನರು ನಿಮ್ಮನ್ನು ತಿರಸ್ಕರಿಸಿದರೂ ನಿಮ್ಮತನ ಬಿಡುವುದಿಲ್ಲ ಎಂದು ಟ್ವೀಟ್​ನಲ್ಲಿ ಕೇಳಲಾಗಿದೆ.

    ಸಿಎಎ ವಿರೋಧಿಸಿ ಪ್ರತಿಭಟನೆಯಲ್ಲಿ ಹಿಂಸೆ ಅನುಭವಿಸಿದ ಮುಜಾಫರ್​ನಗರ ಮತ್ತು ಮೇರಠ್​ ನಗರಗಳ ಕುಟುಂಬದವರನ್ನು ಶನಿವಾರ ಪ್ರಿಯಾಂಕಾ ಗಾಂಧಿ ಭೇಟಿಯಾಗಿದ್ದರು. ಈ ವೇಳೆ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿತ್ತು.

    ಇದಾದ ಒಂದು ಗಂಟೆಯ ನಂತರ ಮುಖ್ಯಮಂತ್ರಿ ಕಾರ್ಯಾಲಯ ಈ ಟ್ವೀಟ್​ಗಳನ್ನು ಹಂಚಿಕೊಂಡಿದ್ದು, ಎಲ್ಲಿಯೂ ಪ್ರಿಯಾಂಕ ಗಾಂಧಿ ಅವರ ಹೆಸರನ್ನು ಬಳಸಿಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts