More

  ಪೌರತ್ವ ತಿದ್ದುಪಡಿ ಕಾಯ್ದೆಯಿಂದ ತೊಂದರೆಯಾಗದು

  ಬ್ಯಾಡಗಿ: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ನಾಗರಿಕರಿಗೆ ಯಾವ ತೊಂದರೆಯೂ ಉದ್ಭವಿಸಲ್ಲ. ವಿಪಕ್ಷಗಳು ಜನರನ್ನು ಹಾದಿ ತಪ್ಪಿಸುತ್ತಿರುವುದು ಪ್ರಜ್ಞಾವಂತರಿಗೆ ತಿಳಿದಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

  ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಮಂಡಳ ಮಟ್ಟದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

  ದೇಶ ಹಾಗೂ ರಾಜ್ಯದಲ್ಲಿಯೂ ಕಾಂಗ್ರೆಸ್ ಮುಖಂಡರು ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಮೂಲಕ ಜನರ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಭಾರತ ಜಾತ್ಯತೀತ ಭಾವನೆ ಹೊಂದಿದ್ದು, ಯಾವ ಧರ್ವಿುಯರಿಗೂ ಈವರೆಗೂ ತೊಂದರೆಯಾಗಿಲ್ಲ. ಭಾರತೀಯ ಮುಸಲ್ಮಾನರಿಗೆ ದೇಶ ಸಾಕಷ್ಟು ರಕ್ಷಣೆ ಕೊಟ್ಟಿದೆ. ಉದ್ಯೋಗ, ಶಿಕ್ಷಣ, ಧಾರ್ವಿುಕ ಆಚರಣೆ ಸೇರಿ ಎಲ್ಲದಕ್ಕೂ ಅವಕಾಶವಿದೆ. ಪ್ರಧಾನಿ ನರೇಂದ್ರ ಮೋದಿಯವರು ತ್ರಿವಳಿ ತಲಾಖ್, 370 ವಿಧಿ ರದ್ದು, ಅಯೋಧ್ಯಾದಂತಹ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಅಭಿವೃದ್ಧಿಯತ್ತ ಸಾಗಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರೂ ಧೃತಿಗೆಡುವ ಅಗತ್ಯವಿಲ್ಲ ಎಂದರು.

  ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮಾತನಾಡಿ, ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾ ನುಸುಳುಕೋರರಿಗೆ ಹಾಗೂ ಕಾಯ್ದೆ ಉಲ್ಲಂಘಿಸುವರಿಗೆ ತೊಂದರೆಯಾಗಬಹುದೆ ಹೊರತು, ದೇಶವಾಸಿಗಳಿಗೆ ಏನೂ ತೊಂದರೆಯಾಗದು ಎಂದರು.

  ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಪ್ರಚಾರ ಸಮಿತಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಪಿಎಲ್​ಡಿ ಬ್ಯಾಂಕ್ ರಾಜ್ಯ ನಿರ್ದೇಶಕ ಸುರೇಶ ಯತ್ನಳ್ಳಿ ಮಾತನಾಡಿದರು. ಬಿಜೆಪಿ ತಾಲೂಕಾಧ್ಯಕ್ಷ ಸುರೇಶ ಆಸಾದಿ, ಮುಖಂಡರಾದ ವೀರೇಂದ್ರ ಶೆಟ್ಟರ್, ರವೀಂದ್ರ ಪಟ್ಟಣಶೆಟ್ಟಿ, ಪುರಸಭೆ ಸದಸ್ಯರಾದ ಕವಿತಾ ಸೊಪ್ಪಿನಮಠ, ಸರೋಜ ಉಳ್ಳಾಗಡ್ಡಿ, ಫಕೀರಮ್ಮ ಚಲವಾದಿ, ವಿನಯ ಹಿರೇಮಠ, ಜಯಣ್ಣ ಮಲ್ಲಿಗಾರ, ನಾಗರಾಜ ಹಾವನೂರು, ಸಂಜೀವ ಮಡಿವಾಳರ, ವಿಷ್ಣುಕಾಂತ ಬೆನ್ನೂರು, ಚಂದ್ರಪ್ಪ ಮುಚ್ಚಟ್ಟಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts