More

    ಬೈಪಾಸ್ ರಸ್ತೆ ಕಾಮಗಾರಿ ನಿಲ್ಲಿಸಿ

    ಬೆಳಗಾವಿ: ಬೆಳಗಾವಿ ನಗರದ ಹೊರ ವಲಯದಲ್ಲಿ ಕೈಗೊಂಡಿರುವ ಬೈಪಾಸ್ ರಸ್ತೆ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಶನಿವಾರ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಬೆಳಗಾವಿಯ ಅನಗೋಳ- ಕಣಬರ್ಗಿ ಸೇರಿದಂತೆ ಹಲಗಾದ ರೈತರ ತದ್ವಿರುದ್ಧವಾಗಿ ಕೈಗೊಂಡ ನಿರ್ಣಯ ಕೈಬಿಟ್ಟು ರೈತರ ಹಿತ ಕಾಯಬೇಕು. ಹಲಗಾ ಮಚ್ಛೆ ಬಳಿ ಯಾವುದೇ ವರ್ಕ್ ಆರ್ಡ್‌ರ್ ಇಲ್ಲದೆ ನಿಯಮ ಉಲ್ಲಂಘಿಸಿ ಕಾಮಗಾರಿ ಪ್ರಾರಂಭಿಸಲಾಗಿದೆ. ರೈತರು ನಿನ್ನೆ ಕಾಮಗಾರಿ ಸ್ಥಗಿತಗೊಳಿಸಿದ್ದರೂ ಮತ್ತೆ ಪ್ರಾರಂಭಿಸಲಾಗಿದೆ. ರೈತರ ಕಡೆಗಣಿಸಿದರೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಬೈಪಾಸ್ ರಸ್ತೆಗೆ ವಿರೋಧಿಸಿ ಹಲವು ಬಾರಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ನಿಮಗೆ ಬೆಳಗಾವಿಯ ಅಭಿವೃದ್ಧಿಯೇ ಬೇಕಾದರೆ ಬಂಜರು ಭೂಮಿಗಳನ್ನು ಬಳಸಿಕೊಳ್ಳಿ. ಅನಗೋಳ ಕಣಬರ್ಗಿ ಸೇರಿದಂತೆ ಯಾವುದೇ ಭಾಗದಲ್ಲಿ ಫಲವತ್ತಾದ ಭೂಮಿ ಸ್ವಾಧೀನ ಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿದರು.
    ಸಂಘದ ಜಿಲ್ಲಾಧ್ಯಕ್ಷ ರವಿ ಸಿದ್ಧಮ್ಮನವರ, ರಾಜು ಮರವೆ, ತಾನಾಜೀ ಹಲಗೇಕರ, ಹನುಮಂತ ಬಾಳೇಕುಂದ್ರಿ, ಅನಿಲ ಅನಗೋಳಕರ, ಭೂಮೇಶ ಬಿರ್ಜೆ, ರಮಾಕಾಂತ ಬಾಳೇಕುಂದ್ರಿ, ನಿತಿನ ಪೈಲವಾನಾಚೆ, ಭೈರು ಕಂಗ್ರಾಳಕರ, ಮನೋಹರ ಕಂಗ್ರಾಳಕರ ಇನ್ನಿತರರು ಇದ್ದರು.

    ಕೃಷಿ ಮಸೂದೆ ಮಂಡನೆಗೆ ಆಮ್ ಆದ್ಮಿ ಪಾರ್ಟಿ ಖಂಡನೆ

    ಕೇಂದ್ರ ಸರ್ಕಾರವು ಅಧಿವೇಶನದಲ್ಲಿ ಕೃಷಿ ಮಸೂದೆ ಮಂಡಿಸಿರುವುದನ್ನು ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರದ ರೈತ ವಿರೋಧಿ ಹಾಗೂ ಅಸಂವಿಧಾನಿಕ ಕಾನೂನು ರೂಪಿಸುತ್ತಿದೆ. ಲೋಕಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ, ರಾಜ್ಯಸಭೆಯಲ್ಲಿ ಬಹುಮತ ಹೊಂದಿಲ್ಲ. ಆದರೂ ಸಂಸತ್‌ನ ಸಂಪ್ರದಾಯ ಮುರಿದು ರೈತ ವಿರೋಧಿ ಮಸೂದೆಗಳನ್ನು ಅಸಂವಿಧಾನಿಕವಾಗಿ ಅಂಗೀಕರಿಸುತ್ತಿರುವುದು ಸರಿಯಲ್ಲ. ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ತಡೆ ಹಿಡಿಯಬೇಕು ಎಂದು ಆಗ್ರಹಿಸಿದರು. ಆನಂದ ಹಂಪಣ್ಣವರ, ಅಬ್ದುಲ್ ಶೇಖ, ಯುನೂಸ್ ಪಠಾಣ, ಈರಪ್ಪ ಹಂಪಣ್ಣವರ, ಸಂಧ್ಯಾ ಧರ್ಮದಾಸ್, ಟೈಸಿನ್ ನಬೀವಾಲೇ, ತುಕಾರಾಂ, ಆನಂದ, ಅಬ್ದುಲ್ ಖಾರ್ದಿ, ಮಂಜುನಾಥ, ಉದಯ ಕುಂದರಗಿ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts