More

    ಡಿಕೆಶಿ v/s ಸಿದ್ದು! ಬೈ ಎಲೆಕ್ಷನ್​ನಲ್ಲಿ ಕಾಂಗ್ರೆಸ್​ಗೆ ಮುಳುವಾಗುತ್ತಾ ಮುಸುಕಿನ ಗುದ್ದಾಟ?

    ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚನಾವಣೆ ಅಖಾಡ ರಂಗೇರಿದ್ದು ಮೂರೂ ಪಕ್ಷಗಳು ಜಿದ್ದಾಜಿದ್ದಿಗೆ ಬಿದ್ದಂತೆ ಪ್ರಚಾರದಲ್ಲಿ ಬಿಜಿಯಾಗಿದ್ದು, ಗೆಲುವಿನ ಮಾಲೆ ಹಾಕಿಸಿಕೊಳ್ಳಲು ಮತದಾರರ ಓಲೈಕೆಗೆ ಕಸರತ್ತು ನಡೆಸುತ್ತಿವೆ. ಈ ನಡುವೆ ಕಾಂಗ್ರೆಸ್​ನ ಒಳ ಜಗಳ ವಿರೋಧಿ ಅಭ್ಯರ್ಥಿಗಳಿಗೆ ಪ್ಲಸ್ ಆಗುತ್ತಾ? ಎಂಬ ಚರ್ಚೆಯೂ ಶುರುವಾಗಿದೆ.

    ಬಹಿರಂಗ ಪ್ರಚಾರಕ್ಕೆ ಅ.31 ಕೊನೇ ದಿನ. ಆರ್ ಆರ್ ನಗರ ಬೈ ಎಲೆಕ್ಷನ್​ನನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರು ಈ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಶಿರಾ ಕಡೆ ಹೆಚ್ಚು ಗಮನ ಕೊಡುತ್ತಿಲ್ಲ. ಇನ್ನು ಆರ್​ಆರ್​ ನಗರದ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ನಾಮಪತ್ರ ಸಲ್ಲಿಕೆ ವೇಳೆ ಹೋಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಪ್ರಚಾರದಿಂದ ಅಂತರ ಕಾಯ್ದುಕೊಂಡಿದ್ದಾರೆ.

    ಆರ್​ಆರ್ ನಗರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ನಾನೇ ಎಂದು ಭಾವಿಸಿ ಗೆಲ್ಲಿಸಬೇಕು ಎಂದು ಡಿಕೆ ಬ್ರದರ್ಸ್‌ ಹೇಳಿದ್ದರು. 4.5 ಲಕ್ಷ ಮತ ಇರುವ ಕಡೆ 80 ಲಕ್ಷ ಮತಗಳಿರುವ ಸಮುದಾಯವನ್ನೇ ಟಾರ್ಗೆಟ್ ಮಾಡಿದ್ದಕ್ಕೆ ಸಿದ್ದರಾಮಯ್ಯಗೆ ಒಳಗೊಳಗೆ ಅಸಮಾಧಾನ ಇದೆ ಎಂಬ ಚರ್ಚೆಯೂ ಸಾರ್ವಜನಿಕ ವಲಯದಲ್ಲಾಗುತ್ತಿದೆ. ಸಿದ್ದರಾಮಯ್ಯ ಅವರು ಶಿರಾದಲ್ಲಿ ಮಾತ್ರ ಆಸಕ್ತಿ ತೋರಿಸಿ, ಆರ್​ಆರ್​ ನಗರದಲ್ಲಿ ನಿರಾಸಕ್ತಿ ತೋರಿಸುತ್ತಿದ್ದಾರೆ. ಹಾಗೇ ಕೆಪಿಸಿಸಿ ಅಧ್ಯಕ್ಷರಾದರೂ ಶಿರಾ ಕಡೆ ಡಿಕೆಶಿ ಹೆಚ್ಚು ಗಮನ ಕೊಡುತ್ತಿಲ್ಲ. ಸಿದ್ದರಾಮಯ್ಯ ಮತ್ತು ಡಾ.ಜಿ.ಪರಮೇಶ್ವರ ಅವರೇ ಶಿರಾ ಕ್ಷೇತ್ರವನ್ನು ನೋಡಿಕೊಳ್ಳಲಿ ಎಂದು ಆ ಕ್ಷೇತ್ರವನ್ನು ಡಿಕೆಶಿ ನೆಗ್ಲೆಕ್ಟ್​ ಮಾಡುತ್ತಿದ್ದಾರೆ ಎಂಬ ಎಂಬ ಮಾತೂ ಕೇಳಿ ಬಂದಿದೆ.

    ಶಿರಾದಲ್ಲಿ ಮಾತ್ರ ಪ್ರಚಾರ ಮಾಡಿ ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳತ್ತ ಸಿದ್ದರಾಮಯ್ಯ ಪ್ರವಾಸ ಹೋಗಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್​ನ ಆಂತರಿಕ ಕಲಹ ಬಿಜೆಪಿ ಮತ್ತು ಜೆಡಿಎಸ್​ ಪಾಲಿಗೆ ಪ್ಲಸ್​ ಆದರೂ ಅಚ್ಚರಿ ಇಲ್ಲ.

    ಆರ್​ಆರ್​ ನಗರ, ಶಿರಾ ಬೈ ಎಲೆಕ್ಷನ್: ಮೂರು ಪಕ್ಷಗಳಲ್ಲಿ ಗರಿಗೆದರಿದೆ ಕೊನೇ ಕ್ಷಣದ ಎಫರ್ಟ್

    ಮುನಿಸಿಕೊಂಡವರ ಮನವೊಲಿಕೆಗೆ ದೊಡ್ಡಗೌಡರ ಕಸರತ್ತು!

    ಗ್ರಾಪಂ ಚುನಾವಣೆಗೆ ಇದ್ದ ಅಡ್ಡಿಯನ್ನು ದೂರ ಸರಿಸಿದ ಹೈಕೋರ್ಟ್​! ಸರ್ಕಾರಕ್ಕೂ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts