More

    ಆರ್​ಆರ್​ ನಗರ, ಶಿರಾ ಬೈ ಎಲೆಕ್ಷನ್: ಮೂರು ಪಕ್ಷಗಳಲ್ಲಿ ಗರಿಗೆದರಿದೆ ಕೊನೇ ಕ್ಷಣದ ಎಫರ್ಟ್

    ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನು 5 ದಿನ ಮಾತ್ರ ಬಾಕಿ ಇದೆ. ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಪಕ್ಷಗಳಲ್ಲಿ ಕೊನೇ ಕ್ಷಣದ ಎಫರ್ಟ್ ಗರಿಗೆದರಿದೆ.

    ವಿಜಯದಶಮಿ ಹಬ್ಬದ ದಿನವೂ ಮೂರೂ ಪಕ್ಷಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಸ್ಲಂಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಮುನಿರತ್ನ ಪರ ಕೊಟ್ಟಿಗೆಪಾಳ್ಯ, ಜ್ಞಾನಭಾರತಿ ಲೇಔಟ್, ಆರ್ ಆರ್ ನಗರ ವಾರ್ಡ್​ನಲ್ಲಿ ಸದಾನಂದ ಗೌಡ, ಎಸ್ಟಿ ಸೋಮಶೇಖರ್, ಬೈರತಿ ಬಸವರಾಜ್, ಸೋಮಣ್ಣ ಪ್ರಚಾರ ಮಾಡಲಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಕೂಡ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದು, ಉಪಸಮರದಲ್ಲಿ ವಿಜಯಶಾಲಿಯಾಗಲು ಮತದಾರರ ಆಶೀರ್ವಾದ ಕೋರುತ್ತಿದ್ದಾರೆ.

    ಈಗಾಗಲೇ ಶಿರಾದಲ್ಲಿ ಬಿಜೆಪಿ ರಾಜೇಶ್​ಗೌಡ ಪರವಾಗಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮತಯಾಚಿಸಿದ್ದ ಸಿಎಂ ಬಿ.ಎಸ್​.ಯಡಿಯೂರಪ್ಪ, ಅ.30ಕ್ಕೆ ಶಿರಾದಲ್ಲಿ ಮತ್ತೊಂದು ಸುತ್ತಿನ ಪ್ರಚಾರ ನಡೆಸುವರು. ಬಹಿರಂಗ ಪ್ರಚಾರದ ಕೊನೇ ದಿನವಾದ ಅ.31ಕ್ಕೆ ಆರ್​ಆರ್ ನಗರ ಕ್ಷೇತ್ರದಲ್ಲಿ ಮುನಿರತ್ನ ಪರವಾಗಿ ಸಿಎಂ ಮತಯಾಚಿಸಲಿದ್ದಾರೆ.

    ಮುನಿರತ್ನ ರಾಜೀನಾಮೆಯಿಂದ ತೆರವಾಗಿದ್ದ ರಾಜರಾಜೇಶ್ವರಿ ನಗರ‌ ಕ್ಷೇತ್ರಕ್ಕೆ ಮತ್ತು ಜೆಡಿಎಸ್ ಶಾಸಕ ಬಿ. ಸತ್ಯನಾರಾಯಣ ಅವರ ನಿಧನದಿಂದಾಗಿ ತೆರವಾಗಿದ್ದ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ.

    ಮುನಿಸಿಕೊಂಡವರ ಮನವೊಲಿಕೆಗೆ ದೊಡ್ಡಗೌಡರ ಕಸರತ್ತು!

    ‘ಕಾಂಗ್ರೆಸ್​ನ ಇನ್ನೂ 10 ಶಾಸಕರು ಬೆಜೆಪಿಗೆ ಬರಲು ಸಜ್ಜಾಗಿದ್ದಾರೆ!’

    ಒಂದು ವರ್ಷ ಎಲ್ಲರನ್ನೂ ಪಾಸ್ ಮಾಡಿದ್ರೆ ಜಗತ್ತೇನೂ ಪ್ರಳಯ ಆಗಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts