More

    ಆರ್​ಸಿಬಿ ಬಗ್ಗೆ ಸಚಿನ್​ ಪುತ್ರಿ ಸಾರಾ ತೆಂಡೂಲ್ಕರ್​ ಮಾಡಿದ ಪೋಸ್ಟ್​ ಸಿಕ್ಕಾಪಟ್ಟೆ ವೈರಲ್​!

    ನವದೆಹಲಿ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಮಂದಿ ಇಷ್ಟಪಡುವ ಮತ್ತು ಅನುಸರಿಸುವ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ತಂಡ. ಇದೀಗ ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ಅವರ ಪುತ್ರಿ ಸಾರಾ ತೆಂಡೂಲ್ಕರ್​ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್​ ಆರ್​ಸಿಬಿ ಅಭಿಮಾನಿಗಳನ್ನು ಸಂತೋಷಕ್ಕೆ ದೂಡಿದೆ.

    “ನಾನು ತಪ್ಪಾಗಿ ಆರ್​ಬಿಸಿ ಎಂದು ಬರೆಯುವ ಬದಲು ಆರ್​ಸಿಬಿ ಅಂದೇ ಬರೆಯುತ್ತಿದ್ದೇನೆ” ಎಂದು ಸಾರಾ ತೆಂಡೂಲ್ಕರ್​ ಇನ್​ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡಿದ್ದಾರೆ. ಅಚ್ಚರಿ ಏನೆಂದರೆ, ಸಾರಾ ಅವರು ತಮ್ಮ ಯಾವುದೇ ಜಾಲತಾಣ ಖಾತೆಯಲ್ಲಿ ಆರ್​ಸಿಬಿ ಅನ್ನು ಫಾಲೋ ಮಾಡುತ್ತಿಲ್ಲ. ಅಲ್ಲದೆ, ಅವರ ತಂದೆ ಸಚಿನ್​ ಅವರು ತಮ್ಮ ಐಪಿಎಲ್​ ಕೆರಿಯರ್​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಮಾತ್ರ ಆಡಿದ್ದಾರೆ. ಈಗಲೂ ಮುಂಬೈ ತಂಡವನ್ನೇ ಪ್ರತಿನಿಧಿಸುತ್ತಾರೆ.

    ಸಾರಾ ಸಹೋದರ ಅರ್ಜುನ್​ ತೆಂಡೂಲ್ಕರ್​ ಕೂಡ ಮುಂಬೈ ತಂಡದಲ್ಲಿದ್ದಾರೆ. ಸಾರಾ ಕೂಡ ಅನೇಕ ಸಂದರ್ಭದಲ್ಲಿ ಮುಂಬೈ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಎಲ್ಲಿಯೂ ಆರ್​ಸಿಬಿ ಬಗ್ಗೆ ಮಾತನಾಡದ ಸಾರಾ ಇದೀಗ ಆರ್​ಸಿಬಿಯನ್ನೇ ಗುಣುಗುತ್ತಿರುವುದು ನಿಜಕ್ಕೂ ಅಚ್ಚರಿಯೇ. ಬರೆಯುವಾಗಲೆಲ್ಲ ಆರ್​ಬಿಸಿ ಎಂದು ಬರೆಯುವ ಬದಲು ಆರ್​ಸಿಬಿ ಎಂದು ಬರೆಯುತ್ತಾರಂತೆ ಸಾರಾ. ಅಷ್ಟರಮಟ್ಟಿಗೆ ಸಾರಾಗೆ ಗೊತ್ತಿಲ್ಲದೇ ಆರ್​ಸಿಬಿ ತಂಡ ಅವರ ಮೇಲೆ ಪ್ರಭಾವ ಬೀರಿದೆ.

    ಮೂರು ಬಾರಿ ಫೈನಲ್​ ತಲುಪಿರುವುದನ್ನು ಬಿಟ್ಟರೆ, ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ತಂಡ ಒಮ್ಮೆ ಟ್ರೋಫಿ ಗೆದ್ದಿಲ್ಲ. 2011ರಲ್ಲಿ ಆರ್​ಸಿಬಿ ಫೈನಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನು ಎದುರಿಸಿತ್ತು. ಆ ಸಮಯದಲ್ಲಿ ಹರ್ಭಜನ್​ ಸಿಂಗ್​ ಅವರು ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದರು. ಆರ್​ಸಿಬಿಗೆ ಡೇನಿಯಲ್​ ವಿಕ್ಟರಿ ನಾಯಕರಾಗಿದ್ದರು. (ಏಜೆನ್ಸೀಸ್​)

    ರಾಜಧಾನಿಯ ಈ ಪ್ರದೇಶದಲ್ಲಿ 15 ದಿನಗಳ ಕಾಲ ನಿಷೇಧಾಜ್ಞೆ: ಎಲ್ಲಿ, ಯಾಕೆ?

    ಬೆಂಗಳೂರಿನಲ್ಲಿ ಮಾ.23 ರಿಂದ 30ರ ತನಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

    ಪಠಾಣ್​ ಸಿನಿಮಾ ಇಷ್ಟ ಆಗಲಿಲ್ಲ ಎಂದ ಮಗುವಿಗೆ ಶಾರುಖ್​ ಖಾನ್​ ಕೊಟ್ಟ ಉತ್ತರ ವೈರಲ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts