More

    ಬೈಎಲೆಕ್ಷನ್​ಗೆ ಜೆಡಿಎಸ್ ಸ್ಪರ್ಧಿಸಲ್ಲ ಎಂದಿದ್ದ ದೇವೇಗೌಡ: ಮತ್ತೆ ಮಹತ್ವದ ನಿರ್ಧಾರ ಪ್ರಕಟಿಸಿದ ಎಚ್​ಡಿಕೆ

    ಬೆಂಗಳೂರು: ಚುನಾವಣೆ ಎದುರಿಸಲು ನಮ್ಮ ಬಳಿ ಹಣ ಇಲ್ಲ. ಹಾಗಾಗಿ ಬೆಳಗಾವಿ ಲೋಕಸಭಾ, ಮಸ್ಕಿ, ಸಿಂದಗಿ ಹಾಗೂ ಬಸವ ಕಲ್ಯಾಣ ಕ್ಷೇತ್ರಗಳ ಬೈ ಎಲೆಕ್ಷನ್​ಗೆ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕಲ್ಲ ಎನ್ನುವ ಮೂಲಕ ​ಪಕ್ಷದ ವರಿಷ್ಠ ಎಚ್​.ಡಿ. ದೇವೇಗೌಡ ಅಚ್ಚರಿ ಮೂಡಿಸಿದ್ದರು. ಎಚ್​ಡಿಡಿ ಈ ಹೇಳಿಕೆ ಕೊಟ್ಟು ನಾಲ್ಕು ದಿನ ಕಳೆದಿದೆಯಷ್ಟೆ. ಇದೀಗ ಮಸ್ಕಿ, ಸಿಂದಗಿ ಹಾಗೂ ಬಸವ ಕಲ್ಯಾಣ ಕ್ಷೇತ್ರಗಳಲ್ಲಿ ಜೆಡಿಎಸ್​ ಸ್ಪರ್ಧಿಸಲಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

    ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಜೆಡಿಎಸ್ ಪಕ್ಷ ಸಂಘಟನೆ ಸಮಾವೇಶ ಮತ್ತು ಗ್ರಾಪಂ ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ದೇವೇಗೌಡರು ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಸಿಂದಗಿ, ಬಸವ ಕಲ್ಯಾಣ, ಮಸ್ಕಿ ಕ್ಷೇತ್ರಗಳ ಬೈ ಎಲೆಕ್ಷನ್​ಗೆ ಜೆಡಿಎಸ್​ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲ್ಲ ಎಂದಿದ್ದರು. ಆದರೆ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಈ ಮೂರು ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಹಾಕ್ತೇವೆ. ಈ ಕುರಿತು ದೇವೇಗೌಡರ ಅನುಮತಿ ಪಡೆದುಕೊಂಡೇ ಮುಂದುವರಿಯಲಾಗುತ್ತಿದೆ ಎಂದರು. ಇದನ್ನೂ ಓದಿರಿ ಮಗಳ ಮದ್ವೆ ಸ್ಪೆಷಲ್: ಕ್ಷೇತ್ರದ ಜನ್ರಿಗೆ ದುಬಾರಿ ಗಿಫ್ಟ್​ ಕೊಟ್ಟ ಡಿಕೆಶಿ! ಪ್ರತಿ ಮನೆ-ಮನೆಗೂ ತಲುಪಿಸಿದ್ರು

    ಜೆಡಿಎಸ್​ ಬಿಟ್ಟು ಹೋದವರಿಗೆ ನಮ್ಮ ಪಕ್ಷದ ಬಗ್ಗೆ ಚಿಂತೆ ಏಕೆ? ಬೈ ಎಲೆಕ್ಷನ್​ಗೆ ಅಭ್ಯರ್ಥಿಯನ್ನು ಕಣಕ್ಕಿಳಿಸೋದಿಲ್ಲ ಎಂದು ದೇವೇಗೌಡರು ಹೇಳಿದ್ರೆ ಅವರು ಏಕೆ ತಲೆಕೆಡಿಸಿಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್​ಡಿಕೆ ಕಿಡಿಕಾರಿದರು.

    ದೇವೇಗೌಡರು ಸಾಲ ಮಾಡಿ ಜೆಡಿಎಸ್​ ಕಟ್ಟಿದ್ದಾರೆ. ಅವರ ಮಾರ್ಗದರ್ಶನವನ್ನು ನಾವು ಮುಂದುವರಿಸುತ್ತಲೇ ಪಕ್ಷ ಕಟ್ಟುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು. ದೇವೇಗೌಡರನ್ನು ಪ್ರಧಾನಿ ಮಾಡಿ ಎಂದು ಕಾಂಗ್ರೆಸ್ ಬಳಿ ನಾವು ಹೋಗಿರಲಿಲ್ಲ, ಕಾಂಗ್ರೆಸ್​ನವರೇ ಕಾಲು ಹಿಡಿದುಕೊಂಡು ದೇವೇಗೌಡರನ್ನು ಪ್ರಧಾನಿ ಮಾಡಿಕೊಂಡ್ರು ಎಂದರು.

    ನನ್ನ ತಂದೆ ಯಡಿಯೂರಪ್ಪ ಸುತ್ತಲೂ ಹಾವು-ಚೇಳುಗಳೇ ಇವೆ: ಮಾರ್ಮಿಕವಾಗಿ ನುಡಿದ ವಿಜಯೇಂದ್ರ

    ಬೇಡ ಬೇಡ ಅಂದ್ರೂ ಸಾವಿನ ಮನೆಯ ಕದ ತಟ್ಟಿದ 15ರ ಬಾಲಕ! ಕಳೆದ ವಾರವೇ ಪೊಲೀಸರು ಎಚ್ಚರಿಸಿದ್ದರು

    ಮಗಳ ಮದ್ವೆ ಸ್ಪೆಷಲ್: ಕ್ಷೇತ್ರದ ಜನ್ರಿಗೆ ದುಬಾರಿ ಗಿಫ್ಟ್​ ಕೊಟ್ಟ ಡಿಕೆಶಿ! ಪ್ರತಿ ಮನೆ-ಮನೆಗೂ ತಲುಪಿಸಿದ್ರು

    ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts