More

    ನನ್ನ ತಂದೆ ಯಡಿಯೂರಪ್ಪ ಸುತ್ತಲೂ ಹಾವು-ಚೇಳುಗಳೇ ಇವೆ: ಮಾರ್ಮಿಕವಾಗಿ ನುಡಿದ ವಿಜಯೇಂದ್ರ

    ಮೈಸೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪರ ಸುತ್ತಲೂ ಹಾವು ಮತ್ತು ಚೇಳುಗಳಿವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾರ್ಮಿಕವಾಗಿ ಹೇಳಿದರು.

    ನಗರದ ಜೆಎಸ್​ಎಸ್​ ಬಡಾವಣೆಯಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯೇಂದ್ರ, ನಮ್ಮ ತಂದೆ (ಬಿಎಸ್​ವೈ)ಗೆ ಸಮಸ್ಯೆಗಳೇನೂ ಹೊಸದಲ್ಲ, ವಿಶೇಷವೂ ಅಲ್ಲ. ಅವರು ಇಡೀ ರಾಜಕೀಯ ಜೀವನವನ್ನು ಹೋರಾಟದ ಮೂಲಕ ಕಟ್ಟಿಕೊಂಡಿದ್ದಾರೆ. ಆದರೀಗ ಅವರ ಸುತ್ತಲು ಹಾವು-ಚೇಳುಗಳೇ ತುಂಬಿವೆ. ಆದರೂ ಅವುಗಳ ಮಧ್ಯೆದಲ್ಲೇ ವಾಸವಿದ್ದು, ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂಬುದು ವಿರೋಧಿಗಳಿಗೆ ಗೊತ್ತಿಲ್ಲ. ನಾಡಿನ ಜನರ ಮತ್ತು ವಿವಿಧ ಮಠಾಧೀಶರ ಆಶೀರ್ವಾದ ಇರುವವರೆಗೂ ನನ್ನ ತಂದೆ ರಾಜ್ಯದ ಸೇವೆ ಮಾಡಲಿದ್ದಾರೆ ಎಂದು ಸೂಚ್ಯವಾಗಿ ನುಡಿದರು. ಇದನ್ನೂ ಓದಿರಿ ಬೈಎಲೆಕ್ಷನ್​ಗೆ ಜೆಡಿಎಸ್ ಸ್ಪರ್ಧಿಸಲ್ಲ ಎಂದಿದ್ದ ದೇವೇಗೌಡ: ಮತ್ತೆ ಮಹತ್ವದ ನಿರ್ಧಾರ ಪ್ರಕಟಿಸಿದ ಎಚ್​ಡಿಕೆ

    ರಾಜ್ಯದಲ್ಲಿ ಮೀಸಲಾತಿಗಾಗಿ ಅನೇಕ ಸಮುದಾಯಗಳು ಹೋರಾಟ ನಡೆಸಿವೆ. ಕುರುಬ, ವಾಲ್ಮೀಕಿ, ವೀರಶೈವ ಲಿಂಗಾಯತ ಮಠಗಳ ಸ್ವಾಮೀಜಿಗಳು ತಮ್ಮ ಸಮುದಾಯದ ಹಕ್ಕುಗಳನ್ನು ಪ್ರತಿಪಾದನೆ ಮಾಡುತ್ತಿದ್ದಾರೆ. ಈ ವಿಷಯವಾಗಿ ನುಡಿದಂತೆ ನಡೆದುಕೊಳ್ಳುವ ಶಕ್ತಿ ಬಿ.ಎಸ್​.ಯಡಿಯೂರಪ್ಪ ಅವರಿಗಿದೆ. ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿ ಆಡಳಿತ ನಡೆಸಿದವರಲ್ಲ. ಹೀಗಾಗಿ, ಎಲ್ಲ ಸಮುದಾಯಗಳಿಗೂ ನ್ಯಾಯ ಕಲ್ಪಿಸುವ ಕೆಲಸ ಮಾಡಲಿದ್ದಾರೆ ಎಂದರು.

    ನನ್ನ ತಂದೆ ಯಡಿಯೂರಪ್ಪ ಸುತ್ತಲೂ ಹಾವು-ಚೇಳುಗಳೇ ಇವೆ: ಮಾರ್ಮಿಕವಾಗಿ ನುಡಿದ ವಿಜಯೇಂದ್ರರಾಜ್ಯದಲ್ಲಿ ನಡೆಯುತ್ತಿರುವ ಅನೇಕ ಮೀಸಲಾತಿ ಹೋರಾಟಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನಾಯಕತ್ವ ವಹಿಸಬೇಕು. ಈ ಮೂಲಕ ಎಲ್ಲ ಸಮುದಾಯಗಳಿಗೆ ನ್ಯಾಯ ಕಲ್ಪಿಸುವ ಕೆಲಸ ಮಾಡಬೇಕು. ಜತೆಗೆ, ಈ ವಿಷಯವಾಗಿ ಮುಖ್ಯಮಂತ್ರಿಗೂ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ಕೋರಿದರು. ಇದನ್ನೂ ಓದಿರಿ ಮಗಳ ಮದ್ವೆ ಸ್ಪೆಷಲ್: ಕ್ಷೇತ್ರದ ಜನ್ರಿಗೆ ದುಬಾರಿ ಗಿಫ್ಟ್​ ಕೊಟ್ಟ ಡಿಕೆಶಿ! ಪ್ರತಿ ಮನೆ-ಮನೆಗೂ ತಲುಪಿಸಿದ್ರು

    ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಬಿ.ವೈ.ವಿಜಯೇಂದ್ರ ಒಳ್ಳೆಯ ಜನನಾಯಕ ಆಗುವ ಲಕ್ಷಣ ಹೊಂದಿದ್ದಾರೆ. ಅವರು ಸಿಎಂ ಮಗ ಅನ್ನೋದಕ್ಕಿಂತ ಜನರ ನಾಡಿಮಿಡಿತ ಅರಿತಿದ್ದಾರೆ. ಎಲ್ಲರ ಕಷ್ಟಕ್ಕೆ ಸ್ಪಂದಿಸುತ್ತಾರೆ. ಇದೀಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಟ್ಟಡದ ಶಿಲಾನ್ಯಾಸ ಮಾಡಿದ್ದಾರೆ. ಇದರಿಂದ ಇನ್ನೂ ಹೆಚ್ಚಿನ ಜವಬ್ದಾರಿ ಅವರ ಮೇಲಿದೆ. ಈ ಕಟ್ಟಡ ಪೂರ್ಣಗೊಳಿಸಲಿ ಎಂದು ಶುಭ ಹಾರೈಸಿದರು.

    ಒಂದೇ ವೇದಿಕೆಯಲ್ಲಿ ಹಾಲಿ ಸಿಎಂ-ಮಾಜಿ ಸಿಎಂ ಪುತ್ರರು
    ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ, ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಯತೀಂದ್ರ ಅವರ ವಿರುದ್ಧ ಸ್ಪಧಿರ್ಸಲು ವಿಜಯೇಂದ್ರ ಸಜ್ಜಾಗಿದ್ದರು. ಆದರೆ, ಕೊನೆಯ ಣದಲ್ಲಿ ಅಖಾಡದಿಂದ ದೂರ ಸರಿದಿದ್ದರು. ಆದರಿಂದು ವೇದಿಕೆಗೆ ಆಗಮಿಸುತ್ತಿದ್ದಂತೆ ಇಬ್ಬರು ಕುಶಲೋಪರಿ ವಿಚಾರಿಸಿದರು.

    ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಸಚಿವ ಎಸ್​.ಟಿ. ಸೋಮಶೇಖರ್​, ಶಾಸಕರಾದ ತನ್ವೀರ್​ಸೇಠ್​, ಎಲ್​.ನಾಗೇಂದ್ರ, ಸಿ.ಎಸ್​.ನಿರಂಜನ್​ಕುಮಾರ್​ ಇನ್ನಿತರರು ಉಪಸ್ಥಿತರಿದ್ದರು.

    ಬೇಡ ಬೇಡ ಅಂದ್ರೂ ಸಾವಿನ ಮನೆಯ ಕದ ತಟ್ಟಿದ 15ರ ಬಾಲಕ! ಕಳೆದ ವಾರವೇ ಪೊಲೀಸರು ಎಚ್ಚರಿಸಿದ್ದರು

    ಮಗಳ ಮದ್ವೆ ಸ್ಪೆಷಲ್: ಕ್ಷೇತ್ರದ ಜನ್ರಿಗೆ ದುಬಾರಿ ಗಿಫ್ಟ್​ ಕೊಟ್ಟ ಡಿಕೆಶಿ! ಪ್ರತಿ ಮನೆ-ಮನೆಗೂ ತಲುಪಿಸಿದ್ರು

    ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts