More

    ರಾಜಧಾನಿಯಲ್ಲಿ ಕುಡಿಯುವ ನೀರಿಗೆ ಸಂಕಷ್ಟ! ಪೂರ್ವ ಭಾಗದಲ್ಲಿ ಮತ್ತೆ ಕೊಳವೆ ಬಾವಿ ಕೊರೆಸಲು ಸೂಚನೆ

    ಬೆಂಗಳೂರು: ನಗರದ ಪೂರ್ವಭಾಗದಲ್ಲಿ ನೀರಿನ ಕೊರತೆ ನಿಭಾಯಿಸುವ ನಿಟ್ಟಿನಲ್ಲಿ ಹೊಸದಾಗಿ 20 ಕೊಳವೆ ಬಾವಿಗಳನ್ನು ಕೊರೆಸುವಂತೆ ಹಾಗೂ ನಗರದಾದ್ಯಂತ ಕಡಿಮೆ ನೀರು ನೀಡುತ್ತಿರುವ ಕೊಳವೆ ಬಾವಿಗಳ ಪುನಶ್ಚೇತನಕ್ಕೆ ಒತ್ತು ನೀಡುವಂತೆ ಜಲಮಂಡಳಿ ಅಧ್ಯ ಡಾ.ವಿ. ರಾಮ್​ ಪ್ರಸಾತ್​ ಮನೋಹರ್​ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ನೇರ ಫೋನ್​ ಇನ್​ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಂದ ನೀರು ಮತ್ತು ಒಳಚರಂಡಿ ಕುರಿತ ವಿವಿಧ ಅಹವಾಲುಗಳನ್ನು ಆಲಿಸಿದರು. ಬಳಿಕ ಮಾತನಾಡುತ್ತಾ, ನಗರದ ಪೂರ್ವ ಭಾಗದಲ್ಲಿನ ನೀರಿನ ಕೊರತೆ ನಿಭಾಯಿಸುವ ನಿಟ್ಟಿನಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಈಗಾಗಲೇ ಅನುಮತಿ ನೀಡಲಾಗಿದ್ದು, ವಿವಿಧ ಭಾಗಗಳಲ್ಲಿ 30 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ ಎಂದರು.

    ಕೊಳವೆ ಬಾವಿಗಳ ನಿಷ್ಕ್ರೀಯತೆಯ ಬಗ್ಗೆ ದೂರುಗಳು:

    ಪೋನ್‌ ಇನ್‌ ಕಾರ್ಯಕ್ರಮದಲ್ಲಿ ನಗರದ ವಿವಿಧ ಭಾಗಗಳಲ್ಲಿ ನಿಷ್ಕ್ರೀಯಗೊಂಡಿರುವ ಹಾಗೂ ಕಡಿಮೆ ನೀರು ನೀಡುತ್ತಿರುವ ಕೊಳವೆ ಬಾವಿಗಳ ಬಗ್ಗೆ ದೂರುಗಳು ಬಂದಿವೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಾಗಿದ್ದು, ಕಾವೇರಿ ನೀರಿನ ಸಂಪರ್ಕ ಇಲ್ಲದ ಕಡೆಗಳಲ್ಲಿ ನೀರಿನ ಸರಬರಾಜಿನಲ್ಲಿ ಕೊಳವೆ ಬಾವಿಗಳು ಪ್ರಮುಖ ಪಾತ್ರವಹಿಸುತ್ತಿವೆ. ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಇವುಗಳನ್ನು ಪುನಃಶ್ಚೇತಗೊಳಿಸುವ ನಿಟ್ಟಿನಲ್ಲಿ ಜಲಮಂಡಳಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಮುಂದಿನ ವಾರ ಈ ಬಗ್ಗೆ ಪರಿಶೀಲನೆ ನಡೆಸಿ, ಯೋಜನೆಯ ಸಮರ್ಪಕ ಅನುಷ್ಠಾನದ ಬಗ್ಗೆಯೂ ಥರ್ಡ್‌ ಪಾರ್ಟಿ ಇನ್ಸ್ಪೆಕ್ಷನ್‌ ಕೂಡಾ ನಡೆಸಲಾಗುತ್ತದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts