More

    ಮುಂಬರುವ ಈ ಚಿತ್ರದಲ್ಲಿ ಸಾಹಸ ದೃಶ್ಯವನ್ನು ಮಾಡಲಿದ್ದಾರೆ ನಟಿ ತ್ರಿಶಾ ಕೃಷ್ಣನ್?

    ಆಂಧ್ರಪ್ರದೇಶ: ತೆಲುಗು, ತಮಿಳು ಚಿತ್ರರಂಗದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ ಮುಂಬರುವ ಚಿತ್ರದಲ್ಲಿ ಸಾಹಸ ದೃಶ್ಯದಲ್ಲಿ ಭಾಗಿಯಾಗಲಿದ್ದಾರೆ ಎಂಬ ವದಂತಿಗಳು ಸದ್ಯ ಟಾಲಿವುಡ್​​ ಅಂಗಳದಲ್ಲಿ ಹರಿದಾಡುತ್ತಿದೆ.

    ಇದನ್ನೂ ಓದಿ: ಸಾರ್ಯ ಗ್ರಾಮದಲ್ಲಿ ನಾಯಿಯನ್ನು ನುಂಗಿ ಒದ್ದಾಡಿದ 13 ಅಡಿ ಉದ್ದದ ಹೆಬ್ಬಾವು

    ತ್ರಿಶಾ ಕೃಷ್ಣನ್ ಪ್ರಸ್ತುತ ಲೋಕೇಶ್ ಕನಕರಾಜ್ ಅವರ ನಿರ್ದೇಶನದ ‘ಲಿಯೋ’ ಚಿತ್ರದಲ್ಲಿ ನಟ ವಿಜಯ್ ಅವರೊಡನೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಸದ್ಯ ಈ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗಷ್ಟೇ ನಟಿ ತ್ರಿಶಾ ತಮ್ಮ ಮೂರನೇ ಮಲಯಾಳಂ ಚಿತ್ರ ‘ಐಡೆಂಟಿಟಿ’ಗೆ ಸಹಿ ಹಾಕಿದ್ದಾರೆ.

    ಇದನ್ನೂ ಓದಿ: VIDEO | ಹಣ ಕೊಡಿ ಎಂದು ಬೆದರಿಸಿದ ಕಳ್ಳ ವಾಪಸ್​​ ಬರಿಗೈಯಲ್ಲಿ ಹೋಗಿದ್ದೇಕೆ?; ವಿಡಿಯೋ ವೈರಲ್​​

    ‘ಐಡಿಂಟಿಟಿ’ ಚಿತ್ರದಲ್ಲಿ ಟೊವಿನೋ ಥಾಮಸ್ ಅವರಿಗೆ ನಾಯಕಿಯಾಗಿ ವಿಶೇಷ ಪಾತ್ರದಲ್ಲಿ ತ್ರಿಶಾ ಅಭಿನಯಿಸಲಿದ್ದಾರೆ. ಈ ಚಿತ್ರವನ್ನು ಅಖಿಲ್ ಪೌಲ್ ಮತ್ತು ಅನಸ್ ಖಾನ್ ನಿರ್ದೇಶಿಸಲಿದ್ದಾರೆ ಎಂದು ಸಿನಿ ವರದಿ ಹೇಳಿದೆ. ತ್ರಿಶಾ ಸೆಪ್ಟೆಂಬರ್ 2023 ರಲ್ಲಿ ಚಿತ್ರದ ಸೆಟ್​​ಗೆ ಆಗಮಿಸಲಿದ್ದು, ಚಿತ್ರೀಕರಣಕ್ಕೆ 45 ದಿನಗಳ ಡೇಟ್ಸ್ ಕೂಡ​ ನೀಡಿದ್ದಾರೆ. ಈ ಚಿತ್ರದಲ್ಲಿ ಅವರು ಆ್ಯಕ್ಷನ್ ಸೀಕ್ವೆನ್ಸ್ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂಬ ವದಂತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts