More

    VIDEO| ಡ್ರೈವಿಂಗ್ ಪರೀಕ್ಷೆ ಮುಗಿಸಿ​ ಲೈಸೆನ್ಸ್​ ಪಡೆದ ಹತ್ತೇ ನಿಮಿಷದಲ್ಲಿ ಕಾರನ್ನು ನದಿಗೆ ಹಾರಿಸಿದ ಚಾಲಕ!

    ಬೀಜಿಂಗ್​: ಡ್ರೈವಿಂಗ್​ ಪರೀಕ್ಷೆ ಮುಗಿಸಿ ಲೈಸೆನ್ಸ್​ ಪಡೆದ ಹತ್ತೇ ನಿಮಿಷದಲ್ಲಿ ಚಾಲಕನೊಬ್ಬ ತನ್ನ ಕಾರನ್ನು ಸೇತುವೆಯಿಂದ ನದಿಗೆ ಹಾರಿಸಿದ ಘಟನೆ ಚೀನಾದಲ್ಲಿ ನಡೆದಿರುವುದಾಗಿ ಶುಕ್ರವಾರ ವರದಿಯಾಗಿದೆ.

    ಚಾಲಕನನ್ನು ಜಾಂಗ್​ ಎಂದು ಗುರುತಿಸಲಾಗಿದೆ. ಡ್ರೈವಿಂಗ್​ ಲೈಸೆನ್ಸ್​ ಪಡೆದ ಬಳಿಕ ಇಲಾಖೆಯಿಂದ ಬಂದ ಅಭಿನಂದನಾ ಸಂದೇಶಕ್ಕೆ ಪ್ರತಿಕ್ರಿಯಿಸುವ ಭರದಲ್ಲಿ ಕಾರಿನ ನಿಯಂತ್ರಣ ಕಳೆದುಕೊಂಡು ನದಿಗೆ ಹಾರಿಸಿದ್ದಾನೆ.

    ಫೆ. 21ರಂದು ಚೀನಾದ ಜುನಿ ನಗರದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜುನಿ ಸಂಚಾರಿ ಪೊಲೀಸರು ಘಟನೆಗೆ ಸಂಬಂಧಪಟ್ಟ ಫೋಟೋವನ್ನು ಚೀನಾ ಸಾಮಾಜಿಕ ಜಾಲತಾಣ ವೇದಿಕೆ “ವೈಬೊ”ದಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದಾರೆ.

    ಘಟನೆ ಸಂಬಂಧ ಮಾತನಾಡಿರುವ ಜಾಂಗ್​, ನಾನು ಡ್ರೈವಿಂಗ್​ ಮಾಡುವ ವೇಳೆ, ನನ್ನ ಮೊಬೈಲ್​ಗೆ ಬಂದ ಸಂದೇಶ ಓದುತ್ತಿದ್ದೆ. ಈ ವೇಳೆ ಸೇತುವೆ ಮೇಲೆ ಎದುರುಗಡೆಯಿಂದ ಇಬ್ಬರು ವ್ಯಕ್ತಿಗಳು ಬರುತ್ತಿದ್ದರು. ಅವರನ್ನು ನೋಡಿ ಇದಕ್ಕಿದ್ದಂತೆ ತಳಮಳಗೊಂಡು ತಕ್ಷಣ ಕಾರನ್ನು ಎಡಕ್ಕೆ ತಿರುಗಿಸಿದೆ. ಕಾರು ನದಿಗೆ ಹಾರಿತು. ಅದೃಷ್ಟವಶಾತ್​, ಕಾರಿನ ಬಾಗಿಲನ್ನು ಒದ್ದು ತೆಗೆಯುವ ಮೂಲಕ ಬಚಾವ್​ ಆದೆ ಎಂದು ಸ್ಥಳೀಯ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ಘಟನೆ ಬಳಿಕ ಜಾಂಗ್​ ಮತ್ತು ಅವರ ಕಾರನ್ನು ಕ್ರೇನ್​ ಸಹಾಯದಿಂದ ಹೊರ ತೆಗೆಯಲಾಯಿತು. ಅವಘಡದಲ್ಲಿ ಜಾಂಗ್​ ಭುಜಕ್ಕೆ ನೋವಾಗಿದೆ ಹೊರತು ಯಾವುದೇ ಗಂಭೀರ ಸಮಸ್ಯೆ ಎದುರಾಗಿಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts