More

    ಈ 7 ಬ್ಯಾಂಕ್​​​​​​​​ಗಳು ಫಿಕ್ಸೆಡ್ ಡೆಪಾಸಿಟ್​​​​ಗೆ ಅತಿ ಹೆಚ್ಚು ಬಡ್ಡಿ ನೀಡುತ್ತಿದ್ದು, 26 ಸಾವಿರ ರೂ.ವರೆಗೆ ಲಾಭ ಪಡೆಯಬಹುದು!

    ಬೆಂಗಳೂರು: ನಿಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಲು ಬಯಸುತ್ತೀರಿ? ನಿಮ್ಮ ಠೇವಣಿ ಸುರಕ್ಷಿತವಾಗಿರುವ ಸ್ಥಳ ಯಾವುದು? ನಿಮ್ಮ ಹೂಡಿಕೆಯ ಮೇಲೆ ನೀವು ಹೆಚ್ಚಿನ ಆದಾಯವನ್ನು ಪಡೆಯಬಹುದೇ?. ಹೌದು, ಇದಕ್ಕಾಗಿ ನೀವು ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್ ಅಥವಾ ಎಫ್​​ಡಿ​​)ಗಳಲ್ಲಿ ಹೂಡಿಕೆ ಮಾಡಬಹುದು. ದೇಶದ ಅನೇಕ ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳು ಎಫ್‌ಡಿ ಮೇಲೆ ಹೆಚ್ಚಿನ ಬಡ್ಡಿ ದರಗಳನ್ನು ನೀಡುತ್ತವೆ. ನೀವು ಸಹ ಫಿಕ್ಸೆಡ್ ಡೆಪಾಸಿಟ್ ಮಾಡಲು ಯೋಚಿಸುತ್ತಿದ್ದರೆ, ಎಫ್‌ಡಿಯಲ್ಲಿ ಹೆಚ್ಚಿನ ಬಡ್ಡಿ ದರವನ್ನು ನೀಡುವ ಬ್ಯಾಂಕ್ ಯಾವುವು? ಬಡ್ಡಿ ಅಥವಾ ಲಾಭ ಎಷ್ಟು ಸಿಗುತ್ತದೆ ನೋಡೋಣ…

    26 ಸಾವಿರದವರೆಗೆ ಲಾಭ 
    ಮೊದಲಿಗೆ ನೀವು 3 ವರ್ಷಗಳ ಕಾಲ ಫಿಕ್ಸೆಡ್ ಡೆಪಾಸಿಟ್ ಮಾಡಲು ಯೋಚಿಸುತ್ತಿದ್ದರೆ, ಯಾವ ಬ್ಯಾಂಕ್ ಹೆಚ್ಚಿನ ಬಡ್ಡಿ ದರವನ್ನು ನೀಡುತ್ತಿದೆ ಎಂಬುದನ್ನು ಗಮನಿಸಬೇಕು. ಅಂದಹಾಗೆ 1 ಲಕ್ಷ ರೂಪಾಯಿ ಹೂಡಿಕೆ ಮಾಡುವ ಮೂಲಕ ನೀವು 26,000 ರೂಪಾಯಿಗಳವರೆಗೆ ಲಾಭ ಪಡೆಯಬಹುದಾಗಿದ್ದು, ಆ ಬ್ಯಾಂಕುಗಳು ಯಾವುವು ನೋಡೋಣ…

    1. ಇಂಡಿಯನ್ ಬ್ಯಾಂಕ್
    ನೀವು 3 ವರ್ಷಗಳ ಅವಧಿಯೊಂದಿಗೆ 1 ಲಕ್ಷ ರೂ.ಎಫ್‌ಡಿ ಮಾಡಿದರೆ, ಅದರ ಮೇಲೆ ಶೇಕಡ 6.75 ಬಡ್ಡಿದರದ ಲಾಭವನ್ನು ಪಡೆಯುತ್ತೀರಿ. ಬ್ಯಾಂಕ್ ಹಿರಿಯ ನಾಗರಿಕರಿಗೆ 1 ಲಕ್ಷ ರೂಪಾಯಿ ಹೂಡಿಕೆಯಲ್ಲಿ 3 ವರ್ಷಗಳ ನಂತರ 22 ಸಾವಿರ ಲಾಭವನ್ನು ನೀಡುತ್ತದೆ. ನಿಮ್ಮ 1 ಲಕ್ಷ ರೂ. 3 ವರ್ಷಗಳ ನಂತರ 1.22 ಲಕ್ಷ ರೂ ಆಗಲಿದೆ.

    2. ಬ್ಯಾಂಕ್ ಆಫ್ ಇಂಡಿಯಾ 
    ಮೂರು ವರ್ಷಗಳ ಅವಧಿಯೊಂದಿಗೆ 1 ಲಕ್ಷ ರೂ.ವರೆಗೆ ಹೂಡಿಕೆ ಮಾಡಲು ನೀವು ಯೋಚಿಸುತ್ತಿದ್ದರೆ, ಬ್ಯಾಂಕ್ ಆಫ್ ಇಂಡಿಯಾದಿಂದ 7 ಪ್ರತಿಶತದಷ್ಟು ಬಡ್ಡಿಯ ಲಾಭವನ್ನು ಪಡೆಯಬಹುದು. ಬ್ಯಾಂಕಿನಲ್ಲಿ ನಿಮ್ಮ 1 ಲಕ್ಷ ರೂ.ಗಳ ಎಫ್​​​ಡಿ 3 ವರ್ಷಗಳಲ್ಲಿ 1.23 ಲಕ್ಷ ರೂ. ಆಗಲಿದೆ.

    3. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
    ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1 ಲಕ್ಷ ರೂಪಾಯಿ ಎಫ್‌ಡಿ ಮಾಡಲು ಯೋಚಿಸುತ್ತಿದ್ದರೆ, ನಿಮ್ಮ ಮೊತ್ತವು 3 ವರ್ಷಗಳ ಅವಧಿಗೆ 1.24 ಲಕ್ಷ ರೂಪಾಯಿ ಆಗಿರಬಹುದು. 7.25 ರಷ್ಟು ಬಡ್ಡಿದರದ ಲಾಭವನ್ನು ಎಸ್‌ಬಿಐ ನೀಡುತ್ತಿದೆ.

    4. ಕೆನರಾ ಬ್ಯಾಂಕ್
    ನೀವು 3 ವರ್ಷಗಳ ಅವಧಿಯೊಂದಿಗೆ 1 ಲಕ್ಷ ರೂ.ಎಫ್‌ಡಿ ಮಾಡಿದರೆ, ನೀವು ಅದರ ಮೇಲೆ ಶೇಕಡ 7.30 ಬಡ್ಡಿದರದ ಲಾಭವನ್ನು ಪಡೆಯುತ್ತೀರಿ. ಕೆನರಾ ಬ್ಯಾಂಕ್ ಹಿರಿಯ ನಾಗರಿಕರಿಗೆ 1 ಲಕ್ಷ ರೂಪಾಯಿ ಹೂಡಿಕೆಯ ಮೇಲೆ 3 ವರ್ಷಗಳ ನಂತರ 24 ಸಾವಿರ ರೂ. ಲಾಭವನ್ನು ನೀಡುತ್ತದೆ. ನಿಮ್ಮ 1 ಲಕ್ಷ ರೂ 3 ವರ್ಷಗಳ ನಂತರ 1.24 ಲಕ್ಷ ರೂ. ಆಗಬಹುದು.

    5. ಎಚ್​​​ಡಿಎಫ್​​​ಸಿ ಬ್ಯಾಂಕ್
    ಮೂರು ವರ್ಷಗಳ ಅವಧಿಯೊಂದಿಗೆ 1 ಲಕ್ಷ ರೂ.ವರೆಗೆ ಹೂಡಿಕೆ ಮಾಡಲು ನೀವು ಯೋಚಿಸುತ್ತಿದ್ದರೆ, ನೀವು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಶೇಕಡ 7.50 ರಷ್ಟು ಬಡ್ಡಿಯನ್ನು ಪಡೆಯಬಹುದು. ಬ್ಯಾಂಕಿನಲ್ಲಿ ನಿಮ್ಮ 1 ಲಕ್ಷ ರೂಪಾಯಿಯ ಎಫ್​​ಡಿ 3 ವರ್ಷಗಳಲ್ಲಿ 1.25 ಲಕ್ಷ ರೂಪಾಯಿ ಆಗುತ್ತದೆ.

    6. ಬ್ಯಾಂಕ್ ಆಫ್ ಬರೋಡಾ
    ನೀವು 3 ವರ್ಷಗಳ ಅವಧಿಯೊಂದಿಗೆ 1 ಲಕ್ಷ ರೂ.ಎಫ್‌ಡಿ ಮಾಡಿದರೆ, ನೀವು ಅದರ ಮೇಲೆ ಶೇಕಡ 7.75 ಬಡ್ಡಿದರದ ಲಾಭವನ್ನು ಪಡೆಯುತ್ತೀರಿ. ಬ್ಯಾಂಕ್ ಆಫ್ ಬರೋಡಾ 1 ಲಕ್ಷ ರೂಪಾಯಿ ಹೂಡಿಕೆಯ ಮೇಲೆ 3 ವರ್ಷಗಳ ನಂತರ ಹಿರಿಯ ನಾಗರಿಕರಿಗೆ 26 ಸಾವಿರ ರೂ. ಲಾಭವನ್ನು ನೀಡುತ್ತದೆ. ನಿಮ್ಮ 1 ಲಕ್ಷ ರೂ 3 ವರ್ಷಗಳ ನಂತರ 1.26 ಲಕ್ಷ ರೂ ಆಗಬಹುದು.

    7. ಆಕ್ಸಿಸ್ ಬ್ಯಾಂಕ್
    ನಿಮ್ಮ ಹಣವನ್ನು ಆಕ್ಸಿಸ್ ಬ್ಯಾಂಕ್‌ನಲ್ಲಿ 3 ವರ್ಷಗಳವರೆಗೆ ಹೂಡಿಕೆ ಮಾಡಲು ನೀವು ಬಯಸಿದರೆ, 7.60 ಪ್ರತಿಶತ ಬಡ್ಡಿಯ ಲಾಭವನ್ನು ಪಡೆಯಬಹುದು. ಹಿರಿಯ ನಾಗರಿಕರಿಗೆ 1 ಲಕ್ಷ ರೂಪಾಯಿ ಹೂಡಿಕೆಯಲ್ಲಿ 3 ವರ್ಷಗಳ ನಂತರ 25,000 ರೂಪಾಯಿಗಳ ಲಾಭವನ್ನು ನೀಡಲಾಗುತ್ತದೆ. ಹಾಗೆಯೇ ನಿಮ್ಮ 1 ಲಕ್ಷ ರೂ 3 ವರ್ಷಗಳ ನಂತರ 1.25 ಲಕ್ಷ ರೂ ಆಗಬಹುದು.

    ಜೈಲುಗಳಲ್ಲಿ ಗರ್ಭಿಣಿಯಾಗುತ್ತಿರುವ ಮಹಿಳಾ ಕೈದಿಗಳು; 196 ಶಿಶುಗಳ ಜನನ, ಕೊಲ್ಕತ್ತಾದಲ್ಲಿ ಬೆಳಕಿಗೆ ಬಂದ ಅಚ್ಚರಿಯ ಪ್ರಕರಣ

    ಮಾರ್ಷ್ ಕಪ್ ಪಂದ್ಯದ ವೇಳೆ ಬಾಲ್ ಬಡಿದು ಮೈದಾನದ ಮಧ್ಯದಲ್ಲಿ ಬಿದ್ದ ಕ್ರಿಕೆಟ್ ಆಟಗಾರ; ಕ್ಯಾಮರಾದಲ್ಲಿ ದಾಖಲಾದ ಆಘಾತಕಾರಿ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts