More

    ರಾಜ್ಯಾದ್ಯಂತ ಬಸ್​ ಸಂಚಾರ ಆರಂಭ: ನಿಲ್ದಾಣಗಳಿಗೆ ಪ್ರಯಾಣಿಕರ ದೌಡು, ಮುನ್ನೆಚ್ಚರಿಕೆಗೆ ಕ್ರಮ

    ಬೆಂಗಳೂರು: ಕರೊನಾ ವೈರಸ್​ ತಡೆಗಟ್ಟಲು ಹೇರಲಾಗಿದ್ದ ಲಾಕ್​ಡೌನ್​ನಿಂದ ಕಳೆದ ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಸ್ತಬ್ಧವಾಗಿದ್ದ ಬಸ್​ ಸಂಚಾರ ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಿದ್ದು, ಹಲವು ಗೊಂದಲಗಳ ನಡುವೆಯೂ ಬಸ್​ ಓಡಾಡಲು ಶುರು ಮಾಡಿವೆ.

    ಇದನ್ನೂ ಓದಿ: 13 ವರ್ಷದ ಬಾಲಕನನ್ನು ಹೆಣ್ಣು ಮಗುವಿನ ತಂದೆಯಾಗಿ ಮಾಡಿದ ವಿವಾಹಿತೆಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?

    ಬಸ್​ ಸಂಚಾರಕ್ಕೆ ಅನುವು ಮಾಡಿಕೊಡುತ್ತಲೇ ಬೀದರ್​ ಸೇರಿದಂತೆ ಚಾಮರಾಜನಗರದ ಗಡಿ ಭಾಗದವರೆಗೂ ಬಸ್​ ನಿಲ್ದಾಣಗಳಿಗೆ ಪ್ರಯಾಣಿಕರು ದೌಡಾಯಿಸುತ್ತಿದ್ದಾರೆ. ಬಸ್ ಹತ್ತುವ ಮುನ್ನ ಪ್ರತಿ ಪ್ರಯಾಣಿಕರ ಥರ್ಮಲ್‌ ಸ್ಕ್ರೀನಿಂಗ್ ಮಾಡುವುದು ಸೇರಿದಂತೆ ಸ್ಯಾನಿಟೈಸರ್‌ ನೀಡಿ ಮುಂಜಾಗ್ರತೆ ಕಾಪಾಡಿಕೊಳ್ಳುವ ಕೆಲಸಕ್ಕೆ ಸರ್ಕಾರದ ಆದೇಶದಂತೆ ಬಸ್ ನಿರ್ವಾಹಕರು ಮುಂದಾಗಿದ್ದಾರೆ.

    ಪ್ರತಿ ಬಸ್​ನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದ್ದು, ಕೆಲವೆಡೆ ತಡವಾಗಿ ಬಸ್​ ಸಂಚಾರ ಆರಂಭವಾಗಿದ್ದರೆ, ಇನ್ನು ಕೆಲವೆಡೆ ಬೆಳಗ್ಗೆ ಏಳರಿಂದಲೇ ಬಸ್​ಗಳು ರಸ್ತೆ ಇಳಿದಿವೆ.

    ಇದನ್ನೂ ಓದಿ: ಯಾರೂ ಊಹಿಸಿರದ ಗುಟ್ಟೊಂದನ್ನು ರಟ್ಟು ಮಾಡಿದ್ರೂ ಡೊನಾಲ್ಡ್​ ಟ್ರಂಪ್​…!

    ಹತ್ತು ವರ್ಷ ಕೆಳಗಿನ ಮಗು ಮತ್ತು ವೃದ್ಧರಿಗೆ ಪ್ರಯಾಣಿಸಲು ಅನುಮತಿ ನೀಡಿಲ್ಲ. ಹೀಗಾಗಿ ಬೆಂಗಳೂರು ಸೇರಿದಂತೆ ಕೆಲವೆಡೆ ಕುಟುಂಬ ಸಮೇತ ಬಂದವರಲ್ಲಿ ಮಗು ಮತ್ತು ವೃದ್ಧರಿದ್ದ ಕಾರಣಕ್ಕೆ ವಾಪಸ್​ ಕಳುಹಿಸಲಾಗಿದೆ. (ದಿಗ್ವಿಜಯ ನ್ಯೂಸ್​)

    ಉರುಳಿಬಿದ್ದ ಟ್ರಕ್​: ಮೂವರು ಮಹಿಳಾ ಕಾರ್ಮಿಕರ ಸಾವು, 12 ಮಂದಿಯ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts