More

    ಇಂದಿನಿಂದ 30ಕ್ಕೂ ಹೆಚ್ಚು ಮಾರ್ಗದಲ್ಲಿ ಬಸ್ ಓಡಾಟ

    ವಿಜಯವಾಣಿ ಸುದ್ದಿಜಾಲ ಕಾರವಾರ/ದಾಂಡೇಲಿ

    ಎನ್​ಡಬ್ಲ್ಯುಕೆಆರ್​ಟಿಸಿ ಮೇ 19ರಿಂದ ಜಿಲ್ಲೆಯಿಂದ 30 ಕ್ಕೂ ಅಧಿಕ ಪ್ರಮುಖ ರೂಟ್​ಗಳಲ್ಲಿ ಬಸ್ ಓಡಿಸಲಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗಡೆ ತಿಳಿಸಿದ್ದಾರೆ.

    ಜಿಲ್ಲೆಯ ಭಟ್ಕಳ ಹೊರತುಪಡಿಸಿ ಉಳಿದ ಎಲ್ಲ ಪ್ರಮುಖ ಪಟ್ಟಣಗಳಿಂದ ಪ್ರಮುಖ ನಗರಗಳಿಗೆ ಬಸ್ ಓಡಾಟ ಮೇ 19ರಿಂದ ಆರಂಭವಾಗಲಿದೆ. ಕಾರವಾರ-ಶಿರಸಿ, ಕಾರವಾರ-ಹುಬ್ಬಳ್ಳಿ, ಶಿರಸಿ-ಹಾವೇರಿ, ಶಿರಸಿ-ಬೆಂಗಳೂರು ಮುಂತಾದ ದೂರದ ಮಾರ್ಗಗಳನ್ನು ಪ್ರಾರಂಭಿಸಲಾಗುವುದು.

    ಮೇ 20ರಿಂದ ಸ್ಥಳೀಯ ಗ್ರಾಮೀಣ ಭಾಗದ ಬಸ್​ಗಳು ಹಾಗೂ ಪಟ್ಟಣದೊಳಗಿನ ಬಸ್ ರೂಟ್​ಗಳು ಪ್ರಾರಂಭವಾಗಲಿವೆ. ಮುಂದೆ ಹಂತ ಹಂತವಾಗಿ ಎಲ್ಲ ನಿಗದಿದ ಮಾರ್ಗಗಳನ್ನು ಪ್ರಾರಂಭಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

    48 ರಿಂದ 55 ಜನರ ಆಸನದ ವ್ಯವಸ್ಥೆ ಇರುವ ಬಸ್​ಗಳಲ್ಲಿ 30 ಜನರನ್ನು ಮಾತ್ರ ಕೊಂಡೊಯ್ಯಲು ಅವಕಾಶವಿದೆ. ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯವಾಗಿದೆ. ಹೊರ ಜಿಲ್ಲೆಗಳಿಗೆ ತೆರಳುವುದಿದ್ದರೂ ಯಾವುದೇ ಪಾಸ್ ಅವಶ್ಯಕತೆ ಇಲ್ಲ. ಎಲ್ಲ ಬಸ್ ನಿಲ್ದಾಣದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಔಷಧಿ ಹಾಕಿ ಶುದ್ಧೀಕರಣ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.

    ದಾಂಡೇಲಿಯಿಂದಲೂ ಪ್ರಾರಂಭ ಧಾರವಾಡ ವಿಭಾಗಕ್ಕೆ ಸೇರಿದ ಹಳಿಯಾಳದಿಂದ ಅಳ್ನಾವರ, ಧಾರವಾಡ ಮುಂತಾದ ಮಾರ್ಗಗಳು ಪ್ರಾರಂಭವಾಗಲಿವೆ. ದಾಂಡೇಲಿಯಿಂದ ಕಾರವಾರ, ಕುಮಟಾ(ಯಲ್ಲಾಪುರ ಮಾರ್ಗವಾಗಿ) ಜೊಯಿಡಾ, ಧಾರವಾಡ, ಹಳಿಯಾಳ, ಗಣೇಶಗುಡಿ, ರಾಮನಗರ ನಿಗದಿತ ಮಾರ್ಗಕ್ಕೆ ಬಸ್ಸುಗಳ ಓಡಾಟ ಆರಂಭವಾಗಲಿದೆ ಎಂದು ನಗರದ ಸಂಚಾರಿ ನೀರಿಕ್ಷಕ ಸಿದ್ದಣ್ಣ ನಾಗಿನಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts