More

    ಬಸ್ ತಂಗುದಾಣ ರಸ್ತೆಗೆ ಹೊಸ ರೂಪ

    ಅನ್ಸಾರ್ ಇನೋಳಿ ಉಳ್ಳಾಲ
    ತೊಕ್ಕೊಟ್ಟು ಬಸ್ ತಂಗುದಾಣದ ಹಿಂಭಾಗದ ರಸ್ತೆ ಹಲವು ವರ್ಷಗಳಿಂದ ಪಾಳು ಕೊಂಪೆಯಂತಿದ್ದು ಅದಕ್ಕೀಗ ಹೊಸ ರೂಪ ಕೊಡಲಾಗಿದೆ. ರಸ್ತೆ ಅಗಲಗೊಳಿಸಿ ಇಂಟರ್‌ಲಾಕ್, ಪಾಳುಬಾವಿಗೆ ಮುಚ್ಚಳ ಅಳವಡಿದಲಾಗಿದೆ. ವ್ಯಾಪಾರಿ ಮಳಿಗೆಗಳೂ ಎದ್ದು ನಿಂತಿವೆ.

    ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಬಸ್ ತಂಗುದಾಣ, ನಗರಸಭಾ ಅಧೀನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದಿವೆ. ವಾಣಿಜ್ಯ ಸಂಕೀರ್ಣದ ಮುಂಭಾಗ ಸುಂದರವಾಗಿದ್ದರೂ ಹಿಂಬದಿ ಅವ್ಯವಸ್ಥೆಯ ಆಗರವಾಗಿತ್ತು. ಇಲ್ಲಿನ ತೆರೆದ ಬಾವಿಯೂ ಕಸದಿಂದ ತುಂಬಿ ಪಾಳು ಬಿದ್ದಿತ್ತು. ನಿರ್ಲಕ್ಷೃಕ್ಕೆ ಒಳಗಾಗಿದ್ದ ಈ ಸ್ಥಳಕ್ಕೆ ಹಗಲು ಹೊತ್ತಿನಲ್ಲೂ ಜನ ಹಗಲಲ್ಲೂ ಬರಲು ಅಸಹ್ಯ ಪಡುತ್ತಿದ್ದರು. ಗಾಂಜಾ ವ್ಯಸನಿಗಳು, ಗುಟ್ಕಾ ಜಗಿಯುವವರು, ಕುಡುಕರು, ಕೆಲಸವಿಲ್ಲದವರು ಈ ಭಾಗವನ್ನೇ ತಮ್ಮ ಆಶ್ರಯ ತಾಣವನ್ನಾಗಿ ಬಳಸಿಕೊಂಡಿದ್ದರು.

    ಬದಲಾದ ಚಿತ್ರಣ: ಪ್ರಸಕ್ತ ಈ ಪ್ರದೇಶ ಹೊಸ ರೂಪ ಪಡೆದಿದೆ. ಇಲ್ಲಿ ನಗರಸಭೆ ಅನುದಾನದಲ್ಲಿ ಇಂಟರ್‌ಲಾಕ್ ಅಳವಡಿಸಲಾಗಿದ್ದು, ರಸ್ತೆ ಅಗಲಗೊಳಿಸಲಾಗಿದೆ. ಬಾವಿಗೂ ಮುಚ್ಚಳ ಅಳವಡಿಸಲಾಗಿದೆ. ಜನಸಂಚಾರವೂ ಆರಂಭಗೊಂಡಿದ್ದು, ಹಲವು ವರ್ಷಗಳಿಂದ ಅಸಹ್ಯವಾಗಿದ್ದ ಈ ಪ್ರದೇಶದ ಚಿತ್ರಣವೇ ಬದಲಾಗಿದೆ.

    ವಾರದ ಸಂತೆಗೆ ಅವಕಾಶ: ಹಿಂದೆ ಕಿರಿದಾಗಿದ್ದ ಈ ಪ್ರದೇಶ ಇಂಟರ್‌ಲಾಕ್ ಹಾಕಿದ ಬಳಿಕ ಸೌಂದರ್ಯ ಹೆಚ್ಚಿಸಿಕೊಂಡಿದೆ. ಇದಕ್ಕಾಗಿ ನಗರಸಭೆಯ 14ನೇ ಹಣಕಾಸು ಯೋಜನೆಯಿಂದ 36 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದು, 26 ಲಕ್ಷ ರೂ. ಖರ್ಚಾಗಿದೆ. ಉಳಿದ ಹಣದಲ್ಲಿ ವಿದ್ಯುತ್ ದೀಪ ಸಹಿತ ವಾರದ ಸಂತೆಗೆ ಬೇಕಾದ ವ್ಯವಸ್ಥೆ ಕಲ್ಪಿಸಲು ನಗರಸಭೆ ಯೋಜನೆ ಸಿದ್ಧಪಡಿಸಿದೆ.

    —-ಕೋಟ್—-
    ಇಂಟರ್‌ಲಾಕ್ ಕಾಮಗಾರಿ ಆದ ಬಳಿಕ ತೊಕ್ಕೊಟ್ಟು ಜಂಕ್ಷನ್‌ನಂತೆಯೇ ಬಸ್ ತಂಗುದಾಣದ ಹಿಂಭಾಗವೂ ಸುಂದರವಾಗಿ ಗೋಚರಿಸುತ್ತಿದೆ. ಜಂಕ್ಷನ್‌ನಲ್ಲಿರುವ ತೆರೆದ ಬಾವಿ ಉಳಿಸುವ ಪ್ರಯತ್ನ ನಡೆದಿರುವುದು ಉತ್ತಮ ಕಾರ್ಯ.
    ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ
    ಸದಸ್ಯ ಮಂಗಳೂರು ತಾಲೂಕು ಪಂಚಾಯಿತಿ

    ತೊಕ್ಕೊಟ್ಟು ಸುಂದರವಾಗಿದ್ದರೆ ಉಳ್ಳಾಲವೂ ಸುಂದರವಾಗಿರುತ್ತದೆ. ಅದರಂತೆ ಹಿಂದೆ ಯಾರಿಗೂ ಬೇಡವಾಗಿದ್ದ ತೊಕ್ಕೊಟ್ಟು ಬಸ್ ತಂಗುದಾಣದ ಹಿಂಭಾಗ ನಗರಸಭೆಯ ಅನುದಾನದಲ್ಲಿ ಸುಂದರಗೊಳಿಸಲಾಗಿದೆ. ಮುಂದೆ ವಾರದ ಸಂತೆ ಆರಂಭಿಸಲಾಗುತ್ತದೆ.
    ಭಾರತಿ ಕೌನ್ಸಿಲರ್, ಉಳ್ಳಾಲ ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts