More

    ಬಸ್ ನಿಲ್ದಾಣ ಸ್ವಚ್ಛಗೊಳಿಸಿ ಹೊಸ ವರ್ಷ ಆಚರಿಸಿದ ಕುಡಿಬೈಲ್ ಯುವಕರು!

    ಹೆಬ್ರಿ: ಪ್ರಸ್ತುತ ಸನ್ನಿವೇಶದಲ್ಲಿ ಯುವಕರು ಮೋಜು-ಮಸ್ತಿ, ಪಾರ್ಟಿ ಮೂಲಕ ಹೊಸ ವರ್ಷ ಆಚರಿಸುವುದು ಸಾಮಾನ್ಯ. ಆದರೆ ಹೆಬ್ರಿ ತಾಲೂಕು ಕುಡಿಬೈಲ್ ಕುಚ್ಚೂರಿನ ಶಾಂತಿನಿಕೇತನ ಯುವವೃಂದ ಯುವಕರು ವಿಭಿನ್ನ ರೀತಿಯಲ್ಲಿ ಆಚರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

    ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಚ್ಚೂರ್ ಹಾಲಿಕೋಡ್ಲಿನಲ್ಲಿ ಪಾಳು ಬಿದ್ದಿದ್ದ ಬಸ್ಸು ತಂಗುದಾಣ ಛಾವಣಿಗೆ ಹೊಸ ಸಿಮೆಂಟ್ ಶೀಟ್, ಟೈಲ್ಸ್ ಅಳವಡಿಸಿ, ಸುಣ್ಣ-ಬಣ್ಣ ಬಳಿದು, ಬಸ್ಸು ತಂಗುದಾಣವನ್ನು ಸುಂದರಗೊಳಿಸಿದ್ದು, ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.

    ಹೆಬ್ರಿಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಶಾಂತಿನಿಕೇತನ ಯುವ ವೃಂದದ ತಂಡ ಮುಂಚೂಣಿಯಲ್ಲಿದೆ. ಬಸ್ಸು ತಂಗುದಾಣ ಸ್ವಚ್ಛಗೊಳಿಸುವ ಕಾರ‌್ಯದಲ್ಲಿಯುವವೃಂದ ಅಧ್ಯಕ್ಷ ರಾಜೇಶ್, ಉಪಾಧ್ಯಕ್ಷ ಗಣೇಶ್ ಶೆಟ್ಟಿ, ಪ್ರಧಾನ ಕಾರ‌್ಯದರ್ಶಿ ಜಯಕರ ಆಚಾರ‌್ಯ, ಸಂಘದ ಸದಸ್ಯರಾದ ದೀಕ್ಷಿತ್, ನಾಗರಾಜ, ಸುಧೀರ್ ನಾಯಕ್, ಉದಯ ನಾಯ್ಕ, ಜಯೇಶ್, ಶರತ್, ನಿತೀನ್, ಚೇತನ್ ಸಹಕರಿಸಿದರು. ಸಾಮಾಜಿಕ ಕಾರ‌್ಯಕರ್ತರಾದ ಶ್ರೀಕಾಂತ್ ಕುಚ್ಚೂರು, ಸುಧಾಕರ್ ಶೆಟ್ಟಿ ದೇವಳಬೈಲ್ ಪಾಲ್ಗೊಂಡಿದ್ದರು.
    ಯುವಕರ ವಿಭಿನ್ನ ಕಾರ‌್ಯ ವೈಖರಿಯನ್ನು ಹೆಬ್ರಿಯ ತಹಸೀಲ್ದಾರ್ ಪುರಂದರ ಕೆ.ಶ್ಲಾಘಿಸಿ, ಶುಭ ಹಾರೈಸಿದ್ದಾರೆ.

    ಮೋಜು ಮಸ್ತಿಯಲ್ಲಿ ತೊಡಗಿ ಹೊಸ ವರ್ಷ ಆಚರಿಸುವುದಕ್ಕೆ ಭಿನ್ನವಾಗಿ ಸಂದರ್ಭದಲ್ಲಿ ಶಾಂತಿ ನಿಕೇತನದ ಯುವಕರು ರಾತ್ರಿ ಬೆಳಗಾಗುವುದರೊಳಗೆ ಪಾಳು ಬಿದ್ದಿದ್ದ ಬಸ್ಸು ತಂಗುದಾಣಕ್ಕೆ ಸುಣ್ಣ ಬಣ್ಣ ಬಳಿದಿದ್ದಾರೆ. ಇಂತಹ ಸಾಮಾಜಿಕ ಕೆಲಸಗಳು ಇನ್ನಷ್ಟು ಯುವಕರಿಗೆ ಪ್ರೇರಣೆಯಾಗಲಿ.
    ಶ್ರೀಕಾಂತ್ ಕುಚ್ಚೂರು, ಸಾಮಾಜಿಕ ಕಾರ‌್ಯಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts