More

    ಬಸ್ಸಿನ ರೂಪದಲ್ಲಿ ಬಂದರೆಗಿದ ಜವರಾಯ- ಒಬ್ಬ ಬಲಿ, ಐವರಿಗೆ ಗಾಯ

    ಬೆಂಗಳೂರು: ಹೆಸರಘಟ್ಟ ಬಸ್ ನಿಲ್ದಾಣ ಬಳಿಯ 8ನೇ ಮೈಲಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್​ವೊಂದು ನುಗ್ಗಿದ ಪರಿಣಾಮ ವ್ಯಕ್ತಿಯೊರ್ವ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.

    ಲಿಂಗನಸೂರು ಮೂಲದ ಜ್ಞಾನಪ್ಪ (35) ಮೃತ ವ್ಯಕ್ತಿ. ಗಾಯಗೊಂಡವರನ್ನು ಕಲಬುರಗಿ ಮೂಲದ ಮಲ್ಲಪ್ಪ, ಕೊಳ್ಳೆಗಾಲ ಮೂಲದ ನಾಗಮಾದಪ್ಪ, ವಿನಯ್, ಶಿವಕುಮಾರ್ ಹಾಗೂ ಆಂಜನೇಯ ಎಂದು ಗುರುತಿಸಲಾಗಿದೆ. ಖಾಸಗಿ ಬಸ್ ಚಾಲಕ ದೇವರಾಜ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಪೀಣ್ಯ ಸಂಚಾರ ಠಾಣೆ ಪೊಲೀಸರು ಹೇಳಿದ್ದಾರೆ.

    ಇದನ್ನೂ ಓದಿ: 12ರಿಂದ 7 ವಿಶೇಷ ರೈಲು ಸಂಚಾರ : ವಾರದಲ್ಲಿ 6 ದಿನ ಬೆಂಗಳೂರು- ಮೈಸೂರು ರೈಲು

    ಭಾನುವಾರ ಸಂಜೆ 7 ಗಂಟೆಗೆ ಪ್ರಯಾಣಿಕರು ಹೆಸರುಘಟ್ಟ ಮುಖ್ಯರಸ್ತೆಯ ಎಂಟನೇ ಮೈಲಿ ಬಸ್ ನಿಲ್ದಾಣದಲ್ಲಿ ಬಸ್​ಗಾಗಿ ಕಾಯುತ್ತಾ ನಿಂತಿದ್ದರು. ಈ ವೇಳೆ ಯಶವಂತಪುರ ಕಡೆಯಿಂದ ಹೆಸರುಘಟ್ಟ ಕಡೆ ವೇಗವಾಗಿ ಬಂದ ಖಾಸಗಿ ಬಸ್, ಚಾಲಕನ ನಿಯಂತ್ರಣ ಕಳೆದುಕೊಂಡು ಮುಂದೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಿಲ್ದಾಣಕ್ಕೆ ನುಗ್ಗಿದೆ. ಪರಿಣಾಮ ಬಸ್ ನಿಲ್ದಾಣದಲ್ಲಿ ಬಸ್​ಗಾಗಿ ಕಾಯುತ್ತಿದ್ದ ಜ್ಞಾನಪ್ಪ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉಳಿದು ಐವರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕನ ಅಜಾಗರೂಕತೆಯಿಂದ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ಪತ್ನಿ ಸಂಸಾರ ಮಾಡದೇ ತವರಿಗೆ ಹೋಗಿ ಕೂತಿದ್ದಾಳೆ, ವಾಪಸ್‌ ಬರಲು ಏನು ಮಾಡಲಿ?

    ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ನಡೆಸಿ ಬಸ್​ನಡಿ ಸಿಲುಕಿದ್ದ ಜ್ಞಾನಪ್ಪ ಅವರ ಮೃತದೇಹವನ್ನು ಹೊರ ತೆಗೆದಿದ್ದಾರೆ. ನಂತರ ಸಂಚಾರ ಪೊಲೀಸರು ಅಪಘಾತ ನಡೆದ ಸ್ಥಳಕ್ಕೆ ಬಂದು ಸಂಚಾರಕ್ಕೆ ಅಡಚಣೆ ಉಂಟಾದ ಬಸ್​ನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಎಡೆಮಾಡಿಕೊಟ್ಟರು. ಪೀಣ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನೇತ್ರದಾನ, ದೇಹ ದಾನದ ಮೂಲಕ ತಾಯಿಯ ಇಚ್ಛೆ ಪೂರೈಸಿದ ಕೇಂದ್ರ ಆರೋಗ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts