More

    ಬಾಡಿಗೆಗೂ ಸಿಗಲಿವೆ ಪಠ್ಯಪುಸ್ತಕಗಳು: ಇದು ಟೆಕ್ಕಿಗಳ ಬುಕ್ ರೂಟ್ ನವೋದ್ಯಮ

    ದೇವರಾಜ್ ಎಲ್.
    ಬೆಂಗಳೂರು: ಹೊಸ ಪುಸ್ತಕ ಖರೀದಿಗೆ ದುಡ್ಡಿಲ್ಲ, ಒಂದೊಮ್ಮೆ ಖರೀದಿಸಿದರೂ ಮುಂದಿನ ಸೆಮಿಸ್ಟರ್​ಗೆ ವೇಸ್ಟ್ ಆಗಲಿದೆ.. ಹೀಗೆ ಆಲೋಚಿಸುವವರು ಪುಸ್ತಕ ಖರೀದಿ ಮಾಡುವ ಬದಲು ಬಾಡಿಗೆ ಪಡೆಯಬಹುದು! ಇಂಜಿನಿಯರಿಂಗ್, ಸಾಮಾನ್ಯ ಪದವಿ, ಡಿಪ್ಲೊಮಾ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುವವರ ಅನುಕೂಲಕ್ಕಾಗಿ ಪುಸ್ತಕಗಳನ್ನು ಬಾಡಿಗೆಗೆ ಕೊಡುವ ಹೊಸ ಉದ್ಯಮವೇ ‘ಬುಕ್ ರೂಟ್’.

    ಸದ್ಯ ಈ ಸೌಲಭ್ಯ ಬೆಂಗಳೂರಿನವರಿಗೆ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಬೇರೆ ನಗರಗಳಿಗೂ ವಿಸ್ತರಿಸುತ್ತೇವೆ.
    | ಪ್ರಭಂಜನ್                                ಬುಕ್​ರೂಟ್ ನವೋದ್ಯಮ ಸಂಸ್ಥಾಪಕ

    ಪ್ರಸ್ತುತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿಗಳಿಬ್ಬರು ಸೇರಿ ಈ ಹೊಸ ಪರಿಕಲ್ಪನೆ ಹುಟ್ಟುಹಾಕಿದ್ದು, Bukroot ಎಂಬ ಮೊಬೈಲ್ ಆಪ್ ರೂಪಿಸಿದ್ದಾರೆ. ವಿದ್ಯಾರ್ಥಿಗಳು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್​ಲೋಡ್ ಮಾಡಿಕೊಂಡು ಅವಶ್ಯಕ ಠೇವಣಿ ಪಾವತಿಸಿದರೆ ಉಚಿತವಾಗಿ ಹೋಮ್ ಡೆಲಿವರಿ ಸಿಗಲಿದೆ. ಬುಕ್ ವಾಪಸ್ ಮಾಡಿದ ಬಳಿಕ ಠೇವಣಿ ಹಣ ವಿದ್ಯಾರ್ಥಿಗೆ ತಲುಪಲಿದೆ. ಇಂಜಿನಿಯರಿಂಗ್ ವಿದ್ಯಾರ್ಥಿ ಪುಸ್ತಕಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿದರೆ 3,500 ರಿಂದ 4 ಸಾವಿರ ರೂ. ಬೇಕು. ಇದೇ ವಿದ್ಯಾರ್ಥಿ ಪುಸ್ತಕಗಳನ್ನು ಬಾಡಿಗೆಗೆ ಪಡೆದರೆ 1 ಸಾವಿರದಿಂದ 1,200 ರೂ. ವೆಚ್ಚವಾಗಲಿದೆ.

    ಇದನ್ನೂ ಓದಿ:  ವಿಶ್ವಗುರು: ಚೀನಾದೊಂದಿಗೆ ಯುದ್ಧವಾದ್ರೆ ಯಾರ್ ಗೆಲ್ತಾರೆ?!

    ಹುಟ್ಟಿದ್ದು ಹೇಗೆ?: ಈ ನವೋದ್ಯಮ ಹುಟ್ಟಿಹಾಕಿದವರಿಬ್ಬರೂ ಟೆಕ್ಕಿಗಳು. ಪ್ರಭಂಜನ್ ಮತ್ತು ಕೆ.ಸಿ. ಅನಿಲ್ ಬಡ ಕುಟುಂಬದಿಂದ ಬಂದವರು. ವಿದ್ಯಾರ್ಥಿ ಜೀವನದಲ್ಲಿ ಪುಸ್ತಕ ಖರೀದಿ ಮಾಡಲು ಸಾಧ್ಯವಿಲ್ಲದೆ ಕಾಲೇಜು ಮತ್ತು ಖಾಸಗಿ ಗ್ರಂಥಾಲಯಗಳಲ್ಲಿ ಪುಸ್ತಕ ಪಡೆದು ವ್ಯಾಸಂಗ ಮಾಡುತ್ತಿದ್ದರು. ಆ ವೇಳೆ ವಿದ್ಯಾರ್ಥಿಗಳಿಗೆ ಪುಸ್ತಕ ಬಾಡಿಗೆ ನೀಡುವ ಐಡಿಯಾ ಬಂದಿದೆ. ಆರಂಭದಲ್ಲಿ ಬಂಡವಾಳದ ಕೊರತೆ ಕಾರಣ ಉದ್ಯೋಗ ಮಾಡಿ ಅದರಲ್ಲಿ ಉಳಿಸಿದ ಹಣವನ್ನು ಪುಸ್ತಕದ ಮೇಲೆ ಹೂಡಿಕೆ ಮಾಡಿದ್ದಾರೆ.

    ಬಡ ವಿದ್ಯಾರ್ಥಿಗಳೇ ಹೆಚ್ಚು: ಎರಡು ತಿಂಗಳ ಹಿಂದೆ ಆರಂಭವಾದ ಈ ನವೋದ್ಯಮಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಸದ್ಯ ಬೆಂಗಳೂರಿನಲ್ಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲವಾಗಲಿದೆ. ಹಾಸ್ಟೆಲ್, ಪಿ.ಜಿ.ಗಳಲ್ಲಿ ವಾಸ ಮಾಡಿಕೊಂಡು ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಹೆಚ್ಚಾಗಿ ಪುಸ್ತಕ ಬಾಡಿಗೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ 805 ಪದವಿ ಕಾಲೇಜು, 303 ಪಾಲಿಟೆಕ್ನಿಕ್ ಕಾಲೇಜು, 252 ಇಂಜಿನಿಯರಿಂಗ್ ಕಾಲೇಜುಗಳಿವೆ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಕಾಲೇಜುಗಳಿಗೆ ಪ್ರವೇಶ ಪಡೆಯುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಸೌಲಭ್ಯ ಬಳಸಿಕೊಳ್ಳಬಹುದು.

    ಬಿಎಂಟಿಸಿಯ ಇಬ್ಬರು ಸಿಬ್ಬಂದಿಗೆ ಕರೊನಾ ಸೋಂಕು: 10 ಲಕ್ಷ ಜನರ ಮೇಲಿದೆ ಕರೊನಾ ಕತ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts