More

    ವಾಲಿಕೊಂಡಿದೆ ಮೂರಂತಸ್ತಿನ ಕಟ್ಟಡ; ಯಾವ ಕ್ಷಣದಲ್ಲಾದರೂ ಬಿದ್ದೀತು ಎಂಬ ಆತಂಕದಲ್ಲಿ ಸ್ಥಳೀಯರು..

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೂರಂತಸ್ತಿನ ಕಟ್ಟಡವೊಂದು ವಾಲಿಕೊಂಡಿದ್ದು, ಯಾವ ಕ್ಷಣದಲ್ಲಾದರೂ ಬಿದ್ದೀತು ಎಂಬ ಆತಂಕದಲ್ಲಿ ಸ್ಥಳೀಯರು ದಿನ ಕಳೆಯುತ್ತಿದ್ದಾರೆ. ರಾಜಾಜಿನಗರ 6ನೇ ಬ್ಲಾಕ್​ನಲ್ಲಿರುವ ಈ ಕಟ್ಟಡ ಗೋವಿಂದರಾಜು ಎಂಬವರಿಗೆ ಸೇರಿದ್ದಾಗಿದೆ.

    ಬೆಂಗಳೂರು ಜಲಮಂಡಳಿ ಕಾಮಗಾರಿ ಸಂದರ್ಭದಲ್ಲಿ ಪಾಯದ ಕಲ್ಲು ಕಿತ್ತಿದ್ದರಿಂದ ಕಟ್ಟಡದ ತಳಕ್ಕೆ ಹಾನಿಯಾಗಿದೆ. ಪರಿಣಾಮವಾಗಿ ಕಟ್ಟಡದ ಅಡಿಪಾಯ ದುರ್ಬಲಗೊಂಡಿದ್ದು, ಕಟ್ಟಡ ಸ್ವಲ್ಪ ವಾಲಿಕೊಂಡಿದೆ. ಬೀಳಬಹುದಾದ ಆತಂಕ ಇರುವುದರಿಂದ ಕಟ್ಟಡದ ಬಳಿ ಪೊಲೀಸರು ಎರಡೂ ಕಡೆ ರಸ್ತೆ ಬಂದ್ ಮಾಡಿರುತ್ತಾರೆ.

    ಸ್ಥಳಕ್ಕೆ ಇಂಜಿನಿಯರ್​ಗಳು ಬಂದು ಪರಿಶೀಲನೆ ನಡೆಸಿದ್ದು, ತಾತ್ಕಾಲಿಕವಾಗಿ ಈ ಕಟ್ಟಡಕ್ಕೆ ಕಬ್ಬಿಣದ ಸರಳುಗಳನ್ನು ಆಧಾರವಾಗಿ ಒದಗಿಸಿ, ಸಂಭಾವ್ಯ ದುರಂತ ತಪ್ಪಿಸುವ ಸಲುವಾಗಿ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಇನ್ನು ಕಟ್ಟಡದ ಬಳಿ ಇರುವ ಶೀಟ್​ ಮನೆಗಳವರು ಅದು ತಮ್ಮ ಮನೆ ಮೇಲೆ ಬಿದ್ದೀತು ಎಂಬ ಆತಂಕದಲ್ಲಿದ್ದಾರೆ. ವಾಲಿಕೊಂಡಿರುವ ಕಟ್ಟಡದ ನಮ್ಮ ಮನೆ ಮೇಲೆ ಬೀಳಬಹುದು ಎಂದು ವೃದ್ಧೆಯೊಬ್ಬರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ತಕ್ಷಣ ಸೂಕ್ತ ಕ್ರಮಜರುಗಿಸುವಂತೆ ಅಂಗಲಾಚಿಕೊಂಡಿದ್ದಾರೆ.

    ದೇಶದ ಪ್ರಪ್ರಥಮ ಕೋವಿಡ್​ ಸೋಂಕಿತೆಗೆ ಈಗ ಮತ್ತೆ ಕರೊನಾ!

    ನಟ ದರ್ಶನ್​ ಪ್ರಕರಣದಲ್ಲಿ ಟ್ವಿಸ್ಟ್​: ಕೇಳಿ ಬಂತು ಮತ್ತೊಂದು ಹೆಸರು ನಂದಿತಾ!

    ದುಬಾರಿ ಕಾರ್​ಗೆ ತೆರಿಗೆ ವಿನಾಯಿತಿ ಕೇಳಿದ್ದ ಚಿತ್ರನಟ ವಿಜಯ್​ಗೆ 1 ಲಕ್ಷ ರೂ. ದಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts