More

    ಉತ್ತಮ ವಿಚಾರಗಳಿಂದ ಸಂಸ್ಕಾರವಂತ ಸಮಾಜ ನಿರ್ಮಾಣ

    ಹಾವೇರಿ: ವ್ಯಕ್ತಿ ಜೀವನದಲ್ಲಿ ಉತ್ತಮ ವಿಚಾರಗಳ ಅಳವಡಿಕೆಯೊಂದಿಗೆ ಸಹಬಾಳ್ವೆ, ಸಹಕಾರ ಭಾವನೆ ರೂಪಿಸಿಕೊಂಡು ಸದೃಢ ಆಲೋಚನೆಗಳಿಂದ ಮುನ್ನಡೆದಲ್ಲಿ ಸಂಸ್ಕಾರವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಹೇಳಿದರು.

    ನಗರದ ಕೆಎಲ್​ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ 2023-24ನೇ ಶೈಕ್ಷಣಿಕ ವರ್ಷದ ಕಾಲೇಜ್ ಒಕ್ಕೂಟ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಸಾಂಸ್ಕೃತಿಕ ಚಟುವಟಿಕೆ ಮನುಷ್ಯನ ವಿಕಾಸಕ್ಕೆ ಮಾರ್ಗವಾದರೆ, ಕ್ರೀಡೆ ಮತ್ತು ಪಠ್ಯ ಚಟುವಟಿಕೆ ದೈಹಿಕ, ಮಾನಸಿಕ ಅಭಿವೃದ್ಧಿಗೆ ಪ್ರೇರಕವಾಗುತ್ತದೆ. ಪ್ರಕೃತಿ, ಸಂಸ್ಕೃತಿ, ವಿಕೃತಿಗಳ ಸಂಗಮದಂತಿರುವ ಜೀವನದಲ್ಲಿ ಉತ್ತಮದ ಆಯ್ಕೆ ಅವರವರಿಗೆ ಬಿಟ್ಟಿದ್ದು. ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ, ಸಂಸ್ಕೃತಿಯಿಂದ ಸಂಸ್ಕಾರದೆಡೆಗೆ ಸಾಗಿದಾಗ ಬಾಳು ಉಜ್ವಲವಾಗುವುದು. ಕರ್ನಾಟಕ ರಾಜ್ಯವೆಂದು ನಾಮಕರಣವಾದ ಐವತ್ತನೇ ವರ್ಷದ ಹರ್ಷದಲ್ಲಿ ನಾವಿದ್ದೇವೆ ಎಂಬುದು ಎಲ್ಲ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.

    ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ನಾಡು, ನುಡಿ, ಗಡಿಗಾಗಿ ಪ್ರತಿಯೊಬ್ಬರಲ್ಲೂ ಸ್ವಾಭಿಮಾನದ ಭಾವನೆ ಮೇಳೈಸಬೇಕಿದೆ. ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಅತಿ ಹೆಚ್ಚು ಪಾತ್ರ ನಿರ್ವಹಿಸಿದ ಹೆಗ್ಗಳಿಕೆ ನಮ್ಮ ಜಿಲ್ಲೆಗಿದೆ. ದೇಶ, ಭಾಷೆಗಳ ಅಭಿಮಾನ ಒಡಮೂಡಿ ಅದು ನಡೆಯಲ್ಲಿ ಬಂದಾಗ ಹಿಂದಿನ ಹೋರಾಟಗಳಿಗೆ ಅರ್ಥ ಬರುತ್ತದೆ ಎಂದರು.

    ಕೆಎಲ್​ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ. ಕೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜ್ ಸ್ಥಾನಿಕ ಮಂಡಳಿ ಕಾರ್ಯಾಧ್ಯಕ್ಷ ಡಾ. ಎಸ್.ಎಲ್. ಬಾಲೇಹೊಸೂರ, ಸದಸ್ಯರಾದ ಜೆ.ಎಸ್. ಅರಣಿ, ಎಸ್.ಎಂ. ಹುರಳಿಕುಪ್ಪಿ, ಪ್ರಾಚಾರ್ಯು ಡಾ. ಸಂಧ್ಯಾ ಕುಲಕರ್ಣಿ, ಡಿ.ಎ. ಕೊಲ್ಲಾಪುರೆ, ಡಾ. ಎಂ. ಪಿ. ಕಣವಿ, ಶ್ರೀದೇವಿ ದೊಡ್ಡಮನಿ, ಕೆ.ಎಚ್. ಬ್ಯಾಡಗಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts