More

  ಕಾಡಾನೆ ದಾಳಿಗೆ ಬೆಳೆ ನಾಶ

  ಬೂದಿಕೋಟೆ: ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೋಬಳಿಯ ಗುಲ್ಲಹಳ್ಳಿ ಹಾಗೂ ಗೊಲ್ಲಹಳ್ಳಿಗಳ ಸಮೀಪ ಬುಧವಾರ ರಾತ್ರಿ 7ಕ್ಕೂ ಹೆಚ್ಚು ಕಾಡಾನೆಗಳು ದಾಳಿ ಮಾಡಿ ಅಪಾರ ಪ್ರಮಾಣದ ಟೊಮ್ಯಾಟೊ. ರಾಗಿ ಮೆದೆ, ಆಲೂಗಡ್ಡೆ, ನೀರಿನ ಪೈಪ್ ಸೇರಿ ಹಲವು ಬೆಳೆಗಳನ್ನು ನಾಶ ಮಾಡಿವೆ.

  ಬೂದಿಕೋಟೆ ಹೋಬಳಿ ವ್ಯಾಪ್ತಿಯಲ್ಲಿ ತಿಂಗಳಿಂದ ಬೀಡು ಬಿಟ್ಟಿರುವ ಆನೆಗಳು ಗುಲ್ಲಹಳ್ಳಿ ಗ್ರಾಮದ ರೈತ ಕೌಸ್ ಕೋಡೆಪ್ಪ ಅವರ ಆಲೂಗಡ್ಡೆ ಮತ್ತು ರಾಗಿ ಮೆದೆ, ವೆಂಕಟೇಶ ಅವರಿಗೆ ಸೇರಿದ ನೀರಿನ ಹಾಗೂ ಡ್ರಿಪ್ ಪೈಪು, ಶಿವಪ್ಪ ಅವರ ಟೊಮ್ಯಾಟೊ ಬೆಳೆ ಡ್ರಿಪ್‌ಪೈಪ್ ಹಾಗೂ ಗೇಟ್ ವಾಲ್ವ್‌ಗಳನ್ನು ನಾಶಮಾಡಿವೆೆ.

  ಗೊಲ್ಲಹಳ್ಳಿ ಗ್ರಾಮಕ್ಕೆ ಗುರುವಾರ ಬೆಳಗಿನ ಜಾವ ಲಗ್ಗೆ ಇಟ್ಟ ಆನೆಗಳ ಗುಂಪು ಮುನಿಯಪ್ಪ ಅವರ ಟೊಮ್ಯಾಟೊ ಬೆಳೆ, ಮುನಿಯಪ್ಪ ಅವರಿಗೆ ರಾಗಿ ಬೆಳೆ, ರಾಗಿ ಮೇದೆ ಮತ್ತು ಟೊಮ್ಯಾಟೊ ಬೆಳೆ ನಾಶ ಮಾಡಿವೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts