More

    ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ನಿರ್ಮಲಾ ಸೀತಾರಾಮನ್

    ನವದೆಹಲಿ: ಮಧ್ಯಂತರ ಬಜೆಟ್ ಅನ್ನು ಮಂಡಿಸುವಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರದ ಮೋದಿ ಸರ್ಕಾರದ ಅನೇಕ ಸಾಧನೆಗಳನ್ನು ವಿವರಿಸಿದ್ದಾರೆ.

    ಅಂದಹಾಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಸಾಮಾನ್ಯ ತೆರಿಗೆದಾರರಿಗೆ ಯಾವುದೇ ಪರಿಹಾರ ನೀಡಿಲ್ಲ. ಟ್ಯಾಕ್ಸ್​​​​ ಸ್ಲ್ಯಾಬ್ ಮತ್ತು ಪದ್ಧತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಇದರರ್ಥ ನೀವು ತೆರಿಗೆಯನ್ನು ಪಾವತಿಸುವ ಅದೇ ದರದಲ್ಲಿ ನೀವು ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

    ಜಿಡಿಪಿ ವಿರುದ್ಧ ದೇಶದ ವಿತ್ತೀಯ ಕೊರತೆಯನ್ನು ಶೇಕಡ 5.8 ಕ್ಕೆ ಪರಿಷ್ಕರಿಸಲಾಗಿದೆ ಎಂದು ಹಣಕಾಸು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು. ನಾವು ಹಣಕಾಸಿನ ಬಲವರ್ಧನೆಯ ಗುರಿಯನ್ನು ಪರಿಷ್ಕರಿಸುತ್ತಿದ್ದೇವೆ. 24-25 ಕ್ಕೆ ದೇಶದ ವಿತ್ತೀಯ ಕೊರತೆ ಗುರಿಯನ್ನು ಜಿಡಿಪಿಯ ಒಟ್ಟು ಗಾತ್ರದ 5.1 ಪ್ರತಿಶತಕ್ಕೆ ಇಳಿಸಲಾಗುತ್ತಿದೆ ಎಂದರು.

    ದೇಶದಲ್ಲಿ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ನಡೆಸಲಾಗುತ್ತಿದೆ. ಅದು ಅವರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಸಚಿವರು ಹೇಳಿದರು. ಲಖಪತಿ ದೀದಿ ಯೋಜನೆಯಡಿ ದೇಶದಲ್ಲಿ 1 ಕೋಟಿ ಲಖಪತಿ ದೀದಿಗಳಿದ್ದಾರೆ. ಇದರ ಗುರಿಯನ್ನು 2 ಕೋಟಿಯಿಂದ 3 ಕೋಟಿಗೆ ಹೆಚ್ಚಿಸಲಾಗಿದ್ದು, 3 ಕೋಟಿ ಲಕ್ಷಪತಿ ದೀದಿಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. 9 ರಿಂದ 14 ವರ್ಷದ ಬಾಲಕಿಯರಿಗೆ ಗರ್ಭಕಂಠದ ಕ್ಯಾನ್ಸರ್ ಲಸಿಕೆಯನ್ನು ನೀಡಲಾಗುವುದು ಇದರಿಂದ ಈ ಕ್ಯಾನ್ಸರ್ ತಡೆಗಟ್ಟಬಹುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. 

    ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿರುವ ಆ ಮೂರು ಯೋಜನೆಗಳ ಬಗ್ಗೆ ಇಲ್ಲಿದೆ ನೋಡಿ ವಿವರ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts