More

    ಬುದ್ಧ ಆಧ್ಯಾತ್ಮಿಕ ಮನೊ ಚಿಕಿತ್ಸಕ; ವಿಶ್ರಾಂತ ಪ್ರಾಚಾರ್ಯ ಎಸ್.ಎಂ. ಶೇಖ

    ವಿಜಯಪುರ: ಭಗವಾನ ಬುದ್ಧರು ಪ್ರಥಮ ಆಧ್ಯಾತ್ಮಿಕ ಮನೊ ಚಿಕಿತ್ಸಕರು. ಬುದ್ಧನ ಚಿಂತನೆಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ ಎಂದು ವಿಶ್ರಾಂತ ಪ್ರಾಚಾರ್ಯ ಎಸ್.ಎಂ. ಶೇಖ ಹೇಳಿದರು.

    ನಗರದ ಕಸಾಪ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಆಚರಣೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
    ಧರ್ಮ ಇರುವುದು ಮನುಷ್ಯನ ಏಳಿಗೆಗಾಗಿ. ಧರ್ಮಕಿಂತ ದೇಶ ದೊಡ್ಡದು. ಅಷ್ಟಾಂಗ ಮಾರ್ಗಗಳಾದ ಸಮ್ಮೆಕ್ ದೃಷ್ಟಿ, ವಿಚಾರ, ಮಾತು, ಜೀವನ, ಪ್ರಯತ್ನ, ಏಕಾಗ್ರತೆ, ಕಾರ್ಯ, ಜಾಗೃತಿ ಅಳವಡಿಸಬೇಕು. ಜಗತ್ತಿನ ಅತ್ಯಂತ ವೈಜ್ಞಾನಿಕ ಧರ್ಮ ಬೌದ್ಧ ಧರ್ಮ ಎಂದರು.
    ಬುದ್ಧ ಪೂರ್ಣಿಮಾ ಮಹತ್ವ ಎಂದರೆ ಜನ್ಮ, ಜ್ಞಾನೋದಯ, ಮಹಾಪರಿ ನಿರ್ವಾಣ ವೈಶಾಖ ಪೂರ್ಣಿಮೆಯಂದೇ ಘಟಿಸಿರುವುದು. ಶಾಂತಿ ಅಹಿಂಸೆ ತತ್ವದಿಂದ ಬುದ್ಧರು ವಿಶ್ವ ತತ್ವ ಜ್ಞಾನಿಗಳಾದರು ಎಂದರು.

    ಇತಿಹಾಸ ಉಪನ್ಯಾಸಕ ಡಾ.ಆನಂದ ಕುಲಕರ್ಣಿ ಮಾತನಾಡಿ, ಬುದ್ಧರ ಮೊದಲ ಹೆಸರು ಸಿದ್ಧಾರ್ಥ ಗೌತಮ. ಕ್ರಿಶ ಆರನೇಯ ಶತಮಾನದಲ್ಲಿ ಲುಂಬನಿಯಲ್ಲಿ ಜನಿಸಿದರು. ಬುದ್ಧ ಆಗಿನ ಕಾಲದಲ್ಲಿ ಪಾಲಿ ಭಾಷೆಯಲ್ಲಿ ತಮ್ಮ ವಿಚಾರಗಳನ್ನು ತಿಳಿಸುತ್ತಾ ಆಸೆಯೆ ದು:ಖಕ್ಕೆ ಕಾರಣ, ಅಹಿಂಸೆ ಪರಮೋ ಧರ್ಮ ಎಂದು ಹೇಳಿದರು. ಅವರ ವಿಚಾರ ಅತ್ಯಂತ ಸೂಕ್ತ. ಬುದ್ಧನ ತತ್ವಗಳು ಸಾರ್ವಕಾಲಿಕ ಎಂದರು.

    ನಗರ ಘಟಕದ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳೆನವರ, ಮಹೇಶ ಕ್ಯಾತನ್, ಎಸ್.ಎಲ್. ಇಂಗಳೇಶ್ವರ ಮಾತನಾಡಿದರು. ಅಡಿವೆಪ್ಪ ಸಾಲಗಲ್ಲ ಅಧ್ಯಕ್ಷತೆ ವಹಿಸಿದ್ದರು.

    ಲಕ್ಷ್ಮಿ ಕಾತ್ರಾಳ, ಆನಂದ ಹೊನವಾಡ, ಮಹೆತಾಬ ಕಾಗವಾಡ ಬುದ್ಧರ ಕುರಿತು ಕವನ ವಾಚಿಸಿದರು. ಪರಶುರಾಮ ಪೋಳ, ರವಿ ಕಿತ್ತೂರ, ಸುಭಾಷ ಗುಡಿಮನಿ, ರಾಜೇಸಾಬ ಶಿವನಗುತ್ತಿ, ಸೌಜನ್ಯಾ ಲಂಬು, ಬಸನಗೌಡ ಬಿರಾದಾರ, ಬಸವರಾಜ ಅಜೂರ, ಟಿ.ಆರ್. ಹಾವಿನಾಳ, ಅಹಮ್ಮದ ವಾಲಿಕಾರ, ಕಾಶಿನಾಥ ಹೊಸೂರ, ಕೆ.ಎಸ್. ಹಣಮಾನಿ, ಶಾಂತಾ ವಿಬೂತಿ, ಜಿ.ಎಸ್. ಬಳ್ಳೂರ, ಎಂ.ಡಿ. ಕಂಟಿಕರ, ಗಂಗಮ್ಮ ರಡ್ಡಿ, ಉಮೇಶ ಕಾಂಬಳೆ, ಎಂ.ಎಚ್. ಬೀಳಗಿ, ನಿಂಗರಾಜ ಬಿರಾದಾರ, ಶಶಿಕಲಾ ನಾಯ್ಕೋಡಿ ಮತ್ತಿತರರಿದ್ದರು.

    ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ ವಂದಿಸಿದರು.
    ಇಂಡಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಗೌರವ ಕಾರ್ಯದರ್ಶಿ ಅನಿತಾ ರಾಠೋಡ ಇವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts