More

    ಬುದ್ಧನ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ: ನಳಂದ ಬೌದ್ಧ ವಿಶ್ವವಿದ್ಯಾಲಯ ಮುಖ್ಯಸ್ಥ ಬಂತೇ ಬೋಧಿದತ್ತಥೇರಾ ಅಭಿಮತ

    ಮಂಡ್ಯ: ಪಂಚಶೀಲ-ಅಷ್ಠಾಂಗಮಾರ್ಗ ಪಾಲನೆಯಿಂದ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು ಎಂದು ಚಾಮರಾಜನಗರ ನಳಂದ ಬೌದ್ಧ ವಿಶ್ವವಿದ್ಯಾಲಯ ಮುಖ್ಯಸ್ಥ ಬಂತೇ ಬೋಧಿದತ್ತಥೇರಾ ಹೇಳಿದರು.
    ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಧ್ಯಾನಮಂದಿರದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆಯಿಂದ ಆಯೋಜಿಸಿದ್ದ ಭಗವಾನ್ ಬುದ್ಧರ 2568ನೇ ವೈಶಾಖ ಪೂರ್ಣಿಮೆ ಮತ್ತು ಧ್ಯಾನ-ಉಪಾಸನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯ ಒಳ್ಳೆಯ ಮಾರ್ಗದಲ್ಲಿ ಜೀವನ ನಡೆಸಿಕೊಂಡು ಹೋಗಬೇಕಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಭಗವಾನ್ ಬುದ್ದರು ಬೋಧಿಸಿದ ಪಂಚಶೀಲ-ಅಷ್ಟಾಂಗಮಾರ್ಗ ಪಾಲನೆ ಅತ್ಯವಶ್ಯವಿದೆ ಎಂದು ನುಡಿದರು.
    ಬುದ್ದರ ಜಯಂತಿಯನ್ನು ವಿಶ್ವದ ಹಲವು ದೇಶಗಳಲ್ಲಿ ಆಚರಣೆ ಮಾಡಲಾಗುತ್ತಿದೆ. ಈ ಮೂಲಕ ಭಗವಾನ್ ಬುದ್ದರ ಸಂದೇಶಗಳನ್ನು ಪಾಲನೆ ಮಾಡಲು ಸಂಕಲ್ಪ ಮಾಡುತ್ತಿದ್ದಾರೆ. ವಿಶ್ವಸಂಸ್ಥೆಯಲ್ಲೂ ಬುದ್ಧರ ಜಯಂತಿ ಆಚರಿಸುತ್ತಾರೆ. ಧ್ಯಾನ ಮತ್ತು ಬುದ್ಧರ ಆರಾಧನೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಹೇಳಿದರು.
    ಭಾರತೀಯ ಬೌದ್ಧ ಮಹಾಸಭಾದ ದಕ್ಷಿಣ ಕರ್ನಾಟಕ ಭಾಗದ ಅಧ್ಯಕ್ಷ ಎಂ.ಸಿ.ಶಿವರಾಜು ಮಾತನಾಡಿ, ಇಂದಿನ ದಿನಗಳಲ್ಲಿ ಭಗವಾನ್ ಬುದ್ಧರ ಪಂಚಶೀಲ-ಅಷ್ಠಾಂಗ ಮಾರ್ಗದೆಡೆಗೆ ಯುವಜನತೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ವೈಜ್ಞಾನಿಕ ವಿಚಾರಗಳನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಮೌಢ್ಯತೆಯಿಂದ ಹೊರಬಂದು ಬುದ್ಧರ ಸಂದೇಶಗಳನ್ನು ಅಪ್ಪಿಕೊಳ್ಳುತ್ತಿದ್ದಾರೆ. ಮಹಾಸಭಾದಿಂದ ಭಗವಾನ್ ಬುದ್ಧರ ವಿಚಾರಗಳು, ಭೋಧಿಸತ್ವ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರಚುರಪಡಿಸಲು ಸನ್ನದ್ದವಾಗಿದೆ. ಯುವಜನತೆ, ಅಂಬೇಡ್ಕರ್ ಅನುಯಾಯಿಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರು.
    ಕೊಳ್ಳೇಗಾಲದ ಜೇತನ ಬುದ್ಧ ವಿಹಾರದ ಮುಖ್ಯಸ್ಥ ಮನೋರಖ್ಖಿತ ಬಂತೇಜಿ, ಬೆಂಗಳೂರಿನ ಸ್ಪೂರ್ತಿಧಾಮದ ಲೋಕರತ್ನ ಬುದ್ಧ ವಿಹಾರದ ಮುಖ್ಯಸ್ಥ ಧರ್ಮವೀರ ಬಂತೇಜಿ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆಯ ಅಧ್ಯಕ್ಷ ಬಿ.ಅನ್ನದಾನಿ, ಕಾರ್ಯದರ್ಶಿ ಎಸ್.ಪಿ.ನಾರಾಯಣಸ್ವಾಮಿ, ಖಜಾಂಚಿ ಕೆ.ಸಿದ್ದಯ್ಯ, ಎಸ್.ಸಿದ್ದಯ್ಯ, ಎಚ್.ಕೆ.ಚಂದ್ರಹಾಸ, ಡಾ.ಕೆ.ಎಂ.ಸುರೇಶ್, ಪ್ರೊ.ಸಿದ್ದರಾಜು, ಗುರುಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts