More

    ಸಿಎಂ ಯಡಿಯೂರಪ್ಪರ ‘ಮಾನಸಪುತ್ರ’ ಯಾರು ಗೊತ್ತಾ? ವಿಜಯೇಂದ್ರರೇ ಬಾಯ್ಬಿಟ್ಟಿದ್ದಾರೆ ನೋಡಿ

    ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪರ ವಿರುದ್ಧ ಯಾರೇ ಧ್ವನಿ‌ ಎತ್ತಿದ್ದರೂ ಮೊದಲ ವಿರೋಧ ಎಂ.ಪಿ.ರೇಣುಕಾಚಾರ್ಯ ಅವರಿಂದ ಬರುತ್ತೆ. ರೇಣುಕಾಚಾರ್ಯರು ಯಡಿಯೂರಪ್ಪರ ಮಾನಸಪುತ್ರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

    ರೇಣುಕಾಚಾರ್ಯರ 59ನೇ ಜನ್ಮದಿನದ ಪ್ರಯುಕ್ತ ಹೊನ್ನಾಳಿಯಲ್ಲಿ ಇಂದು(ಸೋಮವಾರ) ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಬಿಎಸ್​ವೈ ಪುತ್ರ ವಿಜಯೇಂದ್ರ, ಶಿಕಾರಿಪುರ ತಾಲೂಕಿಗೂ ಹೊನ್ನಾಳಿ‌ ತಾಲೂಕಿಗೂ ಅವಿನಾಭಾವ ಸಂಬಂಧವಿದೆ. ರಾಜ್ಯದ ಹೋರಾಟದ ಕಿಚ್ಚು‌ ಹಚ್ಚಿದ್ದು ಮೊದಲು ಶಿಕಾರಿಪುರ, ನಂತರ ಹೊನ್ನಾಳಿಯಲ್ಲಿ. ರೈತರ ಹೆಸರಲ್ಲಿ ಪ್ರಮಾಣ ವಚನ‌ ಸ್ವೀಕರಿಸಿದ್ರು. ರೈತರ ಪರವಾಗಿ‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನರ ಆಶೀರ್ವಾದದಿಂದ ಬಿಎಸ್​ವೈ 4ನೇ ಬಾರಿ ಮುಖ್ಯಮಂತ್ರಿ ಆಗಿದ್ದಾರೆ. 8ನೇ ಆಯವ್ಯಯ ಪಟ್ಟಿ ಮಂಡಿಸಲಿದ್ದಾರೆ. ಯಾವುದೇ ಟೀಕೆಗೆ ಮನ್ನಣೆ ನೀಡದೆ ಜನಸೇವೆಯಲ್ಲಿ ನಿರತರಾಗಿದ್ದಾರೆ. ಯಡಿಯೂರಪ್ಪ- ರೇಣುಕಾಚಾರ್ಯ ಅವರಿಗೂ ಜನ್ಮದಿನದಲ್ಲಿ ಒಂದು ದಿನದ ವ್ಯತ್ಯಾಸ ಇದೆ. ಇಬ್ಬರ ನಡೆ-ನುಡಿ ಒಂದೇ ರೀತಿ ಇದೆ, ಇಬ್ಬರೂ ಒಂದೇತರದ ಗುಣಗಳನ್ನು ಹೊಂದಿದ್ದಾರೆ. ಇಬ್ಬರದ್ದೂ ನೇರ ನುಡಿಯ ಸ್ವಭಾವ. ಅಲ್ಲದೆ, ರೇಣುಕಾಚಾರ್ಯರು ಯಡಿಯೂರಪ್ಪರ ಮಾನಸ ಪುತ್ರ ಎಂದು ಬಣ್ಣಿಸಿದರು. ಇದನ್ನೂ ಓದಿರಿ ಬಿಗ್​ ಬಾಸ್​ ಮನೆಗೆ ಹೋಗೋಕೆ ಎಚ್​.ವಿಶ್ವನಾಥ್​ ರೆಡಿ!

    ಸಿಎಂ ಯಡಿಯೂರಪ್ಪರ 'ಮಾನಸಪುತ್ರ' ಯಾರು ಗೊತ್ತಾ? ವಿಜಯೇಂದ್ರರೇ ಬಾಯ್ಬಿಟ್ಟಿದ್ದಾರೆ ನೋಡಿಇನ್ನು ರೇಣುಕಾಚಾರ್ಯರ ಜನ್ಮದಿನದ ಪ್ರಯುಕ್ತ ಹೊನ್ನಾಳಿಗೆ 80 ಕೋಟಿ ರೂ. ಅನುದಾನವನ್ನ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಘೋಷಿಸಿದರು. ಸಮಗ್ರ ಕುಡಿವ ನೀರು ಹಾಗೂ ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ಅನುದಾನ ಮೀಸಲು ಎಂದರು.

    ಇನ್ನು ಸಮಾರಂಭ ಆರಂಭಕ್ಕೂ ಮುನ್ನ ಹೊನ್ನಾಳಿಯಲ್ಲಿ ಬಿ.ವೈ.ವಿಜಯೇಂದ್ರ ಅವರಿಗೆ ಸೇಬಿನ ಬೃಹತ್​ ಹಾರ ಹಾಕಿ ರೇಣುಕಾಚಾರ್ಯರ ಅಭಿಮಾನಿಗಳು ಸ್ವಾಗತಿಸಿದರು. 2 ಕ್ವಿಂಟಾಲ್ ತೂಕದ ಸೇಬಿನ ಹಾರವನ್ನು 4 ಜೆಸಿಬಿಗಳ ಸಹಾಯದಿಂದ ಹಾಕಲಾಯಿತು. ಇದಕ್ಕೂ ಮುನ್ನ ಹೊನ್ನಾಳಿ ಪಟ್ಟಣದ ಸಂತೆ ಮೈದಾನದಲ್ಲಿ ಎಂ.ಪಿ. ರೇಣುಕಾಚಾರ್ಯ ಮತ್ತು ಅವರ ಪತ್ನಿಗೆ ಅಭಿಮಾನಿಗಳು ಅಭಿಷೇಕ ಮಾಡಿ, ಕೇಕ್​ ಕತ್ತರಿಸಿದರು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ರಾಜ್ಯದಲ್ಲಿ ಈ ಭಾರಿ 110 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!

    ಮೊದಲ ರಾತ್ರಿಯೇ ಮದುಮಗಳ ದುರಂತ ಸಾವು! ಮದ್ವೆ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

    ಕಾಲೇಜು ಕಟ್ಟಡದಿಂದ ಜಿಗಿದು ಬಿಇ ವಿದ್ಯಾರ್ಥಿ ಆತ್ಮಹತ್ಯೆ! ಡೆತ್​ನೋಟ್​ ಪತ್ತೆ, ಸಹಪಾಠಿಗಳ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts